Advertisement

ಪ್ಯಾರಡೈಸ್ ಪೇಪರ್ಸ್ ಲೀಕ್; 714 ಭಾರತೀಯ ಕುಳಗಳ ಹೆಸರಿದೆ!

12:58 PM Nov 06, 2017 | Sharanya Alva |

ನವದೆಹಲಿ:ಪನಾಮಾ ಪೇಪರ್ಸ್ ಹೊರಬಿದ್ದು 18 ತಿಂಗಳ ಬಳಿಕ ಇದೀಗ 13.4 ಮಿಲಿಯನ್ ದಾಖಲೆಯ ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ಜರ್ಮನ್ ನ್ಯೂಸ್ ಪೇಪರ್ ಬಿಡುಗಡೆ ಮಾಡಿರುವ ದಾಖಲೆಯಲ್ಲಿ ಭಾರತ ಸೇರಿದಂತೆ ವಿಶ್ವದ ಹೆಸರಾಂತ ಕಂಪನಿಗಳ ಅಕ್ರಮಗಳನ್ನು ಬಯಲಿಗೆಳೆದಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಸುಳ್ಳು ಲೆಕ್ಕಗಳನ್ನು ತೋರಿಸುವ ಮೂಲಕ ತೆರಿಗೆ ತಪ್ಪಿಸುವ ಮೂಲಕ ವಿದೇಶಗಳಲ್ಲಿ ಆಸ್ತಿ ಖರೀದಿಸಿದ್ದ ಸುಮಾರು 714 ಭಾರತೀಯರ ಹೆಸರು ಜಗಜ್ಜಾಹೀರಾಗಿದೆ.

Advertisement

ನೋಟು ನಿಷೇಧಿಸಿ ನವೆಂಬರ್ 8ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸಲು ಮುಂದಾಗಿರುವ ಬೆನ್ನಲ್ಲೇ ಬಹುದೊಡ್ಡ ದಾಖಲೆ ಬಟಾಬಯಲಾದಂತಾಗಿದೆ. 

ಬಿಡುಗಡೆ ಮಾಡಿದ್ದು ಯಾರು?
2015ರಲ್ಲಿ ಮೊಸ್ಸಾಕ್ ಫೊನ್ಸಿಕಾ ಸಂಸ್ಥೆ “ಪನಾಮಾ ದಾಖಲೆ ಪತ್ರಗಳನ್ನು ಐಸಿಐಜೆ( International Consortium of Investigative Journalists )ಮೂಲಕ ಬಹಿರಂಗಗೊಳಿಸಿತ್ತು. ಇದೀಗ ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ಐಸಿಐಜೆ ಮೂಲಕ ಬೃಹತ್ ದಾಖಲೆಯನ್ನು ಬಿಡುಗಡೆಗೊಳಿಸಿದೆ. ಪನಾಮಾ ಪೇಪರ್ ಎಂದೇ ಖ್ಯಾತವಾಗಿರುವ ವಿಶ್ವಾದ್ಯಂತದ ಸಿರಿವಂತರ ಕಪ್ಪು ಹಣದ ರಹಸ್ಯಗಳನ್ನು ಒಳಗೊಂಡ ದಾಖಲೆಪತ್ರಗಳು ಪನಾಮಾ ಮೂಲದ ಮೊಸ್ಸಾಕ್‌ ಫೊನೆಸ್ಕಾ ಎಂಬ ಕಾನೂನು ಸಂಸ್ಥೆಯ ರಹಸ್ಯ ಕಡತಗಳ ಭಾಗವಾಗಿದ್ದು ಇವು 1.10 ಕೋಟಿ ಸಂಖ್ಯೆಯ ದಾಖಲೆ ಪತ್ರಗಳನ್ನು ಒಳಗೊಂಡಿತ್ತು. ಪ್ಯಾರಡೈಸ್ ಪೇಪರ್ಸ್ 1.34ಕೋಟಿ ಸಂಖ್ಯೆಯ ದಾಖಲೆಯನ್ನು ಹೊಂದುವ ಮೂಲಕ ಅತೀ ದೊಡ್ಡ ದಾಖಲೆಯ ಹಗರಣ ಇದಾಗಿದೆ.

ಪ್ಯಾರಡೈಸ್ ಪೇಪರ್ಸ್ ನಲ್ಲಿ ಯಾರ ಹೆಸರಿದೆ ಗೊತ್ತಾ?
ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್, ಸಂಜಯ್ ದತ್ತ್ ಹೆಂಡತಿ ಮಾನ್ಯತಾ ದತ್ತ್, ಕೇಂದ್ರ ಸಚಿವ ಜಯಂತ್ ಸಿನ್ನಾ, ನಿರಾ ರಾಡಿಯಾ, ಫೋರ್ಟಿಸ್ ಎಸ್ಕೋರ್ಟ್ಸ್ ಅಧ್ಯಕ್ಷ ಡಾ.ಅಶೋಕ್ ಸೇಠ್ ಸೇರಿದಂತೆ ಹಲವು ಗಣ್ಯಾತೀಗಣ್ಯರ ಹೆಸೆಉ ಪ್ಯಾರಡೈಸ್ ಪೇಪರ್ಸ್ ನಲ್ಲಿದೆ. ಪ್ಯಾರಡೈಸ್ ಪೇಪರ್ಸ್ ನಲ್ಲಿ ತೆರಿಗೆ ವಂಚಿಸಿ ಆಸ್ತಿ ಖರೀದಿಸಿದ್ದ ಸುಮಾರು ಸುಮಾರು 714 ಭಾರತೀಯ ಕುಳಗಳ ಹೆಸರಿದೆ!

Advertisement

Udayavani is now on Telegram. Click here to join our channel and stay updated with the latest news.

Next