Advertisement
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಎಸ್. ರುಕ್ಮಿಣಿ ಮಾತನಾಡಿ, ಪಟ್ಟಣ ಪಂಚಾಯತ್‌ಗೆ ಭೂ ಪರಿವರ್ತನೆದಾರರಿಂದ ಹಣ ಪಾವತಿಯಾಗಿದೆ. ಸರ್ಕಾರಕ್ಕೆ ನಷ್ಟವಾದರೆ ಮತ್ತೂಮ್ಮೆ ಹಣವನ್ನು ಪಾವತಿಸಿಕೊಳ್ಳಲು ಅವಕಾಶವಿದೆ ಎಂದರು. ಮಧ್ಯಪ್ರವೇಶಿಸಿದ ಪಪಂ ಸದಸ್ಯ ರಾಜಶೇಖರ ಗಾಯಕವಾಡ್, ಸದಸ್ಯರ ಗಮನಕ್ಕೆ ತಾರದೆ ಹಣ ಪಾವತಿ ಮಾಡಿರುವುದು ಸಮಂಜಸವಲ್ಲ ಎಂದು ಆಕ್ಷೇಪಿಸಿದರು.
Related Articles
Advertisement
ವಾರದ ಸಂತೆಗಾಗಿ ಜಾಗ ಗುರುತಿಸಲು ಚರ್ಚಿಸುವ ಸಂದರ್ಭದಲ್ಲಿ ಅಧ್ಯಕ್ಷ ಜಿ. ಪ್ರಕಾಶ್ ಮಾತನಾಡಿ, ಪಟ್ಟಣ ವ್ಯಾಪ್ತಿಯ ಶೆಟ್ರಾ ಕುಂಟೆ ಜಮೀನಿನ ಎರಡು ಎಕರೆ ಜಾಗವನ್ನು ಸಂತೆಗಾಗಿ ಮೀಸಲಿರಿಸಲಾಗಿದೆ. ಮತ್ತೂಮ್ಮೆ ದಾಖಲೆ ಪರಿಶೀಲಿಸಬೇಕೆಂದು ಸೂಚಿಸಿದರು. ಕಚೇರಿ ಕೆಲಸಕ್ಕೆ ಲ್ಯಾಪ್‌ಟಾಪ್ ಮತ್ತು ಜಿಲ್ಲಾ ಕಚೇರಿಯ ಸಭೆಗಳಿಗೆ ಹೋಗಲು ವಾಹನ ಸೌಲಭ್ಯ ಒದಗಿಸುವಂತೆ ಪಪಂ ಮುಖ್ಯಾಧಿಕಾರಿ ಎಸ್. ರುಕ್ಮಿಣಿ ಕೋರಿದರು. ಲ್ಯಾಪ್‌ಟಾಪ್ ಮಂಜೂರಾತಿಗೆ ಸದಸ್ಯರೆಲ್ಲರ ಒಪ್ಪಿಗೆ ಬೇಕು. ಪಪಂಗೆ ಆದಾಯದ ಕೊರತೆ ಇರುವುದರಿಂದ ವಾಹನ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಅಧ್ಯಕ್ಷರು ತಿಳಿಸಿದರು. ಇದಕ್ಕೆ ಸದಸ್ಯ ರಾಜಶೇಖರ ಗಾಯಕವಾಡ್ ಧ್ವನಿಗೂಡಿಸಿದರು.
ಸ್ವತ್ಛ ಭಾರತ್ ನಿಯಮವನ್ನು ಉಲ್ಲಂಘಿಸಿ ಸುಳ್ಳು ಛಾಯಾಚಿತ್ರಗಳನ್ನು ನೀಡಿ ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಅರ್ಹರಿಗೆ ಶೌಚಾಲಯ ಸೌಲಭ್ಯ ಕಲ್ಪಿಸಬೇಕೆಂದು ಅಧ್ಯಕ್ಷರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಎಂ.ಎಸ್. ರಘು, ಶೌಚಾಲಯ ಅಗತ್ಯವಿರುವುದರಿಂದ ಈ ಸೌಲಭ್ಯವನ್ನು ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪ.ಪಂ.ನ ಉಪಾಧ್ಯಕ್ಷ ಬಸವರಾಜ್, ಸದಸ್ಯರಾದ ಮಹಮದ್ ಮೆಹಬೂಬ್, ಪಾಪಕ್ಕ, ಉಲ ತ್ ಉನ್ನೀಸ, ಎಂ.ಎಸ್. ರಘು , ಸಿಬ್ಬಂದಿಗಳಾದ ಬಸಣ್ಣ, ಪೆನ್ನೋಬಳಿ, ಅಕ್ರಂ, ಪವನ್ , ಇಂಜಿನಿಯರ್ ಲೋಕೇಶ್ ಮೊದಲಾದವರು ಭಾಗವಹಿಸಿದ್ದರು.
ಬಗೆಹರಿಯದ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಪಟ್ಟಣದಲ್ಲಿ ಸ್ವತ್ಛತಾ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರಿಗೆ ಬಾಕಿ ಇರುವ 14 ತಿಂಗಳ ವೇತನ ಪಾವತಿಸಿಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತೆ ಹಲವಾರು ಸದಸ್ಯರು ಒತ್ತಾಯಿಸಿದರು. ಆದರೆ ಸರ್ಕಾರದ ಆದೇಶ ತೋರಿಸಿದ ಮುಖ್ಯಾಧಿಕಾರಿ, ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಭಾ ನಿರ್ಣಯಗಳಿವು ಎಲ್‌ಎಲ್‌ಬಿ ಪದವಿ ಪಡೆದಿರುವ ವೃತ್ತಿನಿರತ ವಕೀಲರಿಗೆ ಪಪಂ ನಿಧಿಯ 25 ಸಾವಿರ ರೂ. ಅನುದಾನದಲ್ಲಿ ಕಾನೂನು ಪುಸ್ತಕಗಳ ವಿತರಣೆ.
2017-18ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ 1,56,617 ರೂ.ಗಳಲ್ಲಿ ಎಂಬಿಬಿಎಸ್ ಮತ್ತು ಬಿಇ ವ್ಯಾಸಂಗ ಮಾಡುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿಕೆ.
ರಾಜ್ಯ ಹಣಕಾಸು ಯೋಜನೆಯ ಶೇ. 3 ರ ನಿಧಿಯಲ್ಲಿ ಅರ್ಹ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವುದು.