Advertisement

ಪೇಪರ್‌ ಬ್ಯಾಗ್‌: ಒಂದು ಬಿಝಿನೆಸ್‌ ಐಡಿಯಾ

04:27 AM Jun 01, 2020 | Lakshmi GovindaRaj |

ಪರಿಸರಸ್ನೇಹಿ ಉತ್ಪನ್ನಗಳ ಕುರಿತು ಜನಸಾಮಾನ್ಯರಲ್ಲಿ ಕಾಳಜಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಪೇಪರ್‌ ಬ್ಯಾಗ್‌ ವ್ಯಾಪಾರ  ದಿಂದಲೂ ಲಾಭ ಪಡೆಯಲು ಸಾಧ್ಯವಿದೆ. ಪ್ಲಾಸ್ಟಿಕ್‌ ಕವರ್‌ಗಳನ್ನು ಬಳಸದಿರುವಂತೆ ಹಲವೆಡೆ ನಗರ ಪಾಲಿಕೆಯೇ ಸೂಚನೆ ನೀಡಿರುವುದರಿಂದ,  ಪೇಪರ್‌ ಬ್ಯಾಗ್‌ ಬಳಕೆಯನ್ನು ಜನ ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾರುಕಟ್ಟೆಯ ಬಗ್ಗೆ ಹೆಚ್ಚು ಚಿಂತಿಸದೆ, ಗುಣಮಟ್ಟದ ಉತ್ಪನ್ನ ತಯಾರಿಕೆಗೆ ಮಾತ್ರ ಗಮನ  ಹರಿಸಬೇಕು. ತಯಾರಿಸುವ ಉತ್ಪನ್ನ ವಿಭಿನ್ನವಾಗಿರುವಂತೆ ನೋಡಿಕೊಂಡರೆ ಮಾರ್ಕೆಟಿಂಗ್‌ ಮಾಡುವುದು ಸುಲಭ. ಇತರೆ ಪೇಪರ್‌ ಬ್ಯಾಗುಗಳಿಗಿಂತ ವಿನ್ಯಾಸದಲ್ಲೋ, ಬಳಸುವ ತಂತ್ರದಲ್ಲೋ ಹೊಸತನವನ್ನು ನೀಡಿದರೆ, ಎಲ್ಲರ ಗಮನ  ಸೆಳೆಯಬಹುದು.

ಈ ದಿನಗಳಲ್ಲಿ ಪೇಪರ್‌ ಬ್ಯಾಗುಗಳನ್ನು ತಯಾರಿಸಲು ನವನವೀನ ತಂತ್ರಗಳು ಚಾಲ್ತಿಯಲ್ಲಿವೆ. ಭತ್ತದ ಜೊಳ್ಳನ್ನು ಬಳಸಿಯೂ ಪೇಪರ್‌ ಉತ್ಪನ್ನಗಳನ್ನು ತಯಾರಿಸಲು ಮಾರ್ಗಗಳಿವೆ. ಪೇಪರ್‌ ಬ್ಯಾಗ್‌ ತಯಾರಿಕಾ ಘಟಕ  ಸ್ಥಾಪಿಸುವುದರಿಂದ, ಪೇಪರ್‌ ಕಪ್‌, ಪೇಪರ್‌ ಎನ್ವೆಲಪ್‌, ಬರೆಯುವ ಪೇಪರ್‌ ಇತ್ಯಾದಿ ಉತ್ಪನ್ನಗಳನ್ನೂ ತಯಾರಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ: tinyurl.com/ycjxhlcf

Advertisement

Udayavani is now on Telegram. Click here to join our channel and stay updated with the latest news.

Next