Advertisement
ಪೇಪರ್ ಆರ್ಟ್,ಗಾಳಿಪಟ ತಯಾರಿಕೆ, ಗ್ರೀಟಿಂಗ್ ಕಾರ್ಡ್ ತಯಾರಿಕೆ, ಮರದ ಕೆತ್ತನೆ, ಗೂಡುದೀಪ ತಯಾರಿಕೆ, ಗ್ಲಾಸ್ ಪೈಂಟಿಂಗ್‌ನಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿಯನ್ನು ಹೆಚ್ಚಿಸುವ ವೇದಿಕೆಯಾಗಿತ್ತು ಅದು. ಶೈಕ್ಷಣಿಕ ಚಟುವಟಿಕೆಗಳ ಏಕತಾನತೆಯಿಂದ ಹೊರಗೆ ಮನಸ್ಸಿಗೆ ಮುದ ಕೊಡುವ ತರಕಾರಿ ಕಲೆ, ಕಸದಿಂದ ರಸ, ಆಭರಣ ತಯಾರಿಕೆ, ಆಫ್ರಿಕನ್ ಡಾಲ್ ನಿರ್ಮಾಣದಂತಹ ಪ್ರಾತ್ಯಕ್ಷಿಕೆಗಳು ಮಕ್ಕಳ ಮನಸೂರೆಗೊಂಡವು. ಹಿಂದೆಲ್ಲಾ ಮನೆ ಮನೆಗಳಲ್ಲಿ ರಾರಾಜಿಸುತ್ತಿದ್ದ ರಂಗೋಲಿ, ವಿಶೇಷ ಸಂದರ್ಭಗಳ ವೈಶಿಷ್ಟ್ಯಮಯ ಮೆಹಂದಿಯಂತಹ ನೇಪಥ್ಯಕ್ಕೆ ಸರಿಯುತ್ತಿರುವ ಕಲಾ ಪ್ರಕಾರಗಳನ್ನು ಪರಿಚಯಿಸುವ ಪ್ರಯತ್ನವೂ ನಡೆಯಿತು. ಆಯುರ್ವೇದದಲ್ಲಿ ಉಲ್ಲೇಖೀತ ಔಷಧೀಯ ಸಸ್ಯಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ, ಸಾವಯವ ಕೃಷಿಯ ಮಹತ್ವ ಬಣ್ಣಿಸುವ ಕಾರ್ಯಾಗಾರಗಳು ಒಂದೆಡೆಯಾದರೆ ಮಕ್ಕಳ ಆಸಕ್ತಿಗನುಗುಣವಾಗಿ ರಂಗಕಲೆ, ಬೆಂಕಿ ಬಳಸದೆ ಅಡುಗೆ, ಕಥೆ ಹೇಳುವ, ಭಾಷಣ, ಲೇಖನ ಕೌಶಲ್ಯಕ್ಕೆ ಪುಟವಿಡುವ ಬರೋಬ್ಬರಿ 22 ಕಾರ್ಯಾಗಾರಗಳ ಸಂಗಮವಾಗಿತ್ತು ಆ ಕಾರ್ಯಕ್ರಮ.
Advertisement
ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ತಂತಿ ಮೀಟಿದ ಭಾವಾಂತರಂಗ
05:40 PM Aug 24, 2018 | |
Advertisement
Udayavani is now on Telegram. Click here to join our channel and stay updated with the latest news.