Advertisement
ಮಸಾಲ ಪಾಪಡ್ಬೇಕಾಗುವ ಸಾಮಗ್ರಿ: ಈರುಳ್ಳಿ- ಮೂರು, ಟೊಮೆಟೋ- ಮೂರು, ಸೌತೆಕಾಯಿ- ಒಂದು, ದಾಳಿಂಬೆ- ಅರ್ಧ ಕಪ್, ಸೇವ್- ಸ್ವಲ್ಪ, ಕೊತ್ತಂಬರಿಸೊಪ್ಪು, ಮಸಾಲಪಾಪಡ್- ಎಂಟು, ಖಾರದಪುಡಿ- ಅರ್ಧ ಟೀ ಚಮಚ, ಚಾಟ್ ಮಸಾಲ- ಅರ್ಧ ಟೀ ಚಮಚ, ಅಮ್‌ಚೂರ್‌ಪೌಡರ್- ಒಂದು ಟೀ ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಈರುಳ್ಳಿ, ಟೊಮೆಟೋ, ಸೌತೆಕಾಯಿಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಮೇಲೆ ತಿಳಿಸಿದ ಪುಡಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಹಪ್ಪಳಗಳನ್ನು ಗರಿಗರಿಯಾಗಿ ಸುಟ್ಟುಕೊಳ್ಳಿ. ನಂತರ ಈ ಹಪ್ಪಳಗಳ ಮೇಲೆ ಮಿಕ್ಸಿಂಗ್ ಬೌಲ್‌ನಲ್ಲಿರುವ ಮಿಶ್ರಣಗಳನ್ನು ಹರಡಿ ಮೇಲಿನಿಂದ ಕೊತ್ತಂಬರಿಸೊಪ್ಪು ಹರಡಿದರೆ ಸವಿಯಲು ರೆಡಿ.
ಬೇಕಾಗುವ ಸಾಮಗ್ರಿ: ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ- ಎಂಟು, ತೆಂಗಿನತುರಿ- ಅರ್ಧ ಕಪ್, ಹೆಚ್ಚಿದ ಈರುಳ್ಳಿ- ಎರಡು, ಖಾರಪುಡಿ- ಒಂದು ಚಮಚ, ಸಕ್ಕರೆ- ಒಂದು ಚಮಚ, ಧನಿಯಾ- ಒಂದು ಚಮಚ, ಉದ್ದಿನಬೇಳೆ- ಒಂದು ಚಮಚ, ಇಂಗು- ಕಾಲು ಚಮಚ, ಕೊತ್ತಂಬರಿಸೊಪ್ಪು ಮತ್ತು ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ತೆಂಗಿನತುರಿಗೆ ಕರಿಬೇವು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಧನಿಯಾ, ಉದ್ದಿನಬೇಳೆ, ಇಂಗು ಹಾಗೂ ಕೆಂಪುಮೆಣಸಿನ ಜೊತೆ ನೀಡಿ. ನಂತರ ಇದಕ್ಕೆ ಅರಸಿನಪುಡಿ, ಸಕ್ಕರೆ, ನೀರುಳ್ಳಿ ಮತ್ತು ಉಪ್ಪು ಇತ್ಯಾದಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಕರಿದ ಹಪ್ಪಳಗಳನ್ನು ಪುಡಿಮಾಡಿ ಸರ್ವಿಂಗ್ ಪ್ಲೇಟ್‌ಗೆ ಹಾಕಿ ಮೇಲಿನಿಂದ ಈ ಮಿಶ್ರಣವನ್ನು ಹಾಕಿ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಹಪ್ಪಳದ ಸ್ಟಪ್ಪಿಂಗ್
ಬೇಕಾಗುವ ಸಾಮಗ್ರಿ: ಉದ್ದಿನ ಹಪ್ಪಳ- ಎಂಟು, ಮ್ಯಾಶ್‌ಮಾಡಿದ ಆಲೂಗಡ್ಡೆ- ಒಂದು ಕಪ್, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಪೇಸ್ಟು- ಒಂದು ಚಮಚ, ಗರಂಮಸಾಲ- ಒಂದು ಚಮಚ, ಖಾರಪುಡಿ- ಒಂದು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಲಿಂಬೆರಸ ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಮಿಕ್ಸಿಂಗ್‌ಬೌಲ್‌ನಲ್ಲಿ ಆಲೂಗಡ್ಡೆಯ ಜೊತೆ ಮೇಲೆ ತಿಳಿಸಿದ ಎಲ್ಲಾ ಮಸಾಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ ಲಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಹಪ್ಪಳವನ್ನು ನೀರಿನಲ್ಲಿ ಒದ್ದೆ ಮಾಡಿ ತಕ್ಷಣ ತೆಗೆದು ಇದರ ಒಳಗೆ ಈ ಉಂಡೆಯನ್ನು ಇಟ್ಟು ಮೋದಕದ ತರ ಸೇರಿಸಿಕೊಂಡು ಚೆನ್ನಾಗಿ ಒತ್ತಿ ಅಂಟಿಸಿ. ಹೀಗೆ ಎಲ್ಲವುಗಳನ್ನು ತಯಾರಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ.
Related Articles
ಬೇಕಾಗುವ ಸಾಮಗ್ರಿ: ಎಣ್ಣೆಯಲ್ಲಿ ಕರಿದ ಹಪ್ಪಳಗಳು- ಆರು, ಹುರಿದ ಶೇಂಗಾ ಮತ್ತು ಕಾರ್ನ್ಫ್ಲೇಕ್ಸ್, ಬೇಯಿಸಿದ ಸ್ವೀಟ್‌ಕಾರ್ನ್, ಮೂಂಗ್‌ದಾಲ್- ಆರು ಚಮಚ, ಹೆಚ್ಚಿದ ಈರುಳ್ಳಿ- ಎಂಟು ಚಮಚ, ಹುಣಸೆ ಖರ್ಜೂರ ಬೆಲ್ಲ ಸೇರಿಸಿ ರುಬ್ಬಿದ ಸಿಹಿ ಚಟ್ನಿ- ಒಂದು ಚಮಚ, ಪುದಿನ ಹಸಿಮೆಣಸು ಸೇರಿಸಿ ರುಬ್ಬಿದ ಮಿಶ್ರಣ- ಒಂದು ಚಮಚ, ಚಾಟ್‌ಪೌಡರ್-ಒಂದು ಚಮಚ, ದಾಳಿಂಬೆ- ಆರು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಸರ್ವಿಂಗ್ ಪ್ಲೇಟ್‌ಗೆ ಬೇಯಿಸಿದ ಸ್ವೀಟ್‌ಕಾರ್ನ್ ಹಾಕಿ ಇದರ ಮೇಲೆ, ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹರಡಿ ಮೇಲಿನಿಂದ ಪುಡಿಮಾಡಿದ ಹಪ್ಪಳಗಳು, ಕಾರ್ನ್ಫ್ಲೇಕಸ್, ಮೂಂಗ್‌ದಾಲ್ ಇತ್ಯಾದಿಗಳನ್ನು ಹರಡಿ ಮೇಲಿನಿಂದ ಕೊತ್ತಂಬರಿಸೊಪ್ಪು ಹರಡಿ ಸರ್ವ್ ಮಾಡಬಹುದು.
Advertisement
–ಗೀತಸದಾ