Advertisement
ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮವಸ್ತ್ರ ಹಾಗೂ ಕೇಶವಿನ್ಯಾಸ, ಬಳೆ ಇನ್ನಿತರೆ ಆಭರಣಗಳನ್ನು ಧರಿಸುವ ಸಂಬಂಧ ಏಕರೂಪ ನಿಯಮಗಳನ್ನು ಕಡ್ಡಾಯಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಸುತ್ತೋಲೆ ಹೊರಡಿಸಿದ್ದಾರೆ.ಸೀರೆ ಧರಿಸಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಹಾಗೂ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ಸಂಧರ್ಭಗಳಲ್ಲಿ ಉಂಟಾಗುತ್ತಿದ್ದ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಏಕರೂಪದ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ.
Related Articles
ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳು ಕಪ್ಪು ಬಣ್ಣದ ಹೇರ್ ಪಿನ್, ಸಣ್ಣ ಗಾತ್ರದ ಲೋಹದ ಬಳೆಗಳನ್ನೇ ಧರಿಸಬೇಕು. ಕಿವಿಯೋಲೆ ಮತ್ತು ಹಣೆಬಿಂದಿಯನ್ನು ಧರಿಸುವಂತಿದ್ದಲ್ಲಿ ಚಿಕ್ಕ ಮಾದರಿ(ಸ್ಮಾಲ್ ಸ್ಟಡ್)ಯ ಒಂದು ಜೊತೆ ಓಲೆಯನ್ನು ಧರಿಸಬಹುದು.ತಲೆಗೂದಲು ಹರಡದಂತೆ ಒಟ್ಟುಗೂಡಿಸಿ ತುರುಬು ಕಟ್ಟಿಕೊಂಡು ಕಪ್ಪು ಬಣ್ಣದ ನೆಟೆಡ್ ಬ್ಯಾಂಡ್‌ನ್ನು ಸುತ್ತಬೇಕು. ಕಪ್ಪು ಬಣ್ಣದ ಹೇರ್‌ಪಿನ್ ಅಥವಾ ಹೇರ್ ಬ್ಯಾಂಡ್‌ಅನ್ನು ಮಾತ್ರ ಧರಿಸಬೇಕು. ಇತರೆ ಬಣ್ಣದ ಹೇರ್‌ಪಿನ್, ಹೇರ್ ಬ್ಯಾಂಡ್, ಹೂ ಮತ್ತು ಇತರ ಪರಿಕರಗಳನ್ನು ಧರಿಸುವಂತಿಲ್ಲ. ಕೂದಲಿಗೆ ಬಣ್ಣ(ಡೈ)ಹಚ್ಚುವಂತಿದ್ದಲ್ಲಿ ಕಪ್ಪು ಬಣ್ಣವನ್ನು ಮಾತ್ರ ಬಳಸಬೇಕು. ಬೇರೆ ಬಣ್ಣ(ಡೈ) ಹಚ್ಚುವಂತಿಲ್ಲ ಎಂದು ನಿರ್ದೇಶಿಸಲಾಗಿದೆ.
Advertisement