Advertisement
“ತಂಡದ ಆಡಳಿತ ಮಂಡಳಿಯ ಕೋರಿಕೆಯಂತೆ ಮುಂಜಾಗ್ರತಾ ಕ್ರಮವಾಗಿ ಪಂತ್ ಅವರನ್ನು ಇಂಗ್ಲೆಂಡಿಗೆ ಕಳುಹಿಸಿಕೊಡಲಾಗುವುದು. ಆದರೆ ಅವರು ಬದಲಿ ಆಟಗಾರನಾಗಿರುವುದಿಲ್ಲ’ ಎಂದು ಬಿಸಿಸಿಐ ಅಧಿಕಾರಿ ಯೊಬ್ಬರು ಹೇಳಿದ್ದಾರೆ.
ಶಿಖರ್ ಧವನ್ ಅವರ ಚೇತರಿಕೆಯನ್ನು ಗಮನಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಬಿಸಿಸಿಐ ಯೋಜನೆ ಯಾಗಿದೆ. ಧವನ್ ಬೇಗನೇ ಗುಣಮುಖರಾಗುವುದಾದರೆ ಬದಲಿ ಆಟಗಾರನ ಅಗತ್ಯ ಕಂಡುಬಾರದು ಎಂಬುದು ಮಂಡಳಿ ಲೆಕ್ಕಾಚಾರ. ಒಂದು ವೇಳೆ ಪಂತ್ ಅಧಿಕೃತ “ಬದಲಿ ಕ್ರಿಕೆಟಿಗ’ನಾದರೆ, ಮುಂದೆ ಧವನ್ ಚೇತರಿಸಿಕೊಂಡರೂ ಐಸಿಸಿ ನಿಯಮದಂತೆ ವಿಶ್ವಕಪ್ ತಂಡವನ್ನು ಸೇರಿಕೊಳ್ಳಲಾರರು. ಐಸಿಸಿಯ ಇನ್ನೊಂದು ನಿಯಮದ ಪ್ರಕಾರ ತಂಡದ ಆಟಗಾರರ ಸಂಖ್ಯೆ 15ರ ಗಡಿ ಮೀರುವಂತಿಲ್ಲ. 2015ರ ವಿಶ್ವಕಪ್‌ನಲ್ಲಿ ಧವಳ್ ಕುಲಕರ್ಣಿ ಅವರನ್ನು ಹೆಚ್ಚುವರಿ 16ನೇ ಸದಸ್ಯನಾಗಿ ಇರಿಸಿಕೊಂಡ ತಪ್ಪಿಗೆ ಬಿಸಿಸಿಐ 2.4 ಕೋಟಿ ರೂ. ದಂಡ ತೆರುವಂತಾಗಿತ್ತು. ಇಂಥ ತಪ್ಪು ಈ ಸಲ ಮರುಕಳಿಸಬಾರದೆಂಬ ಕಾರಣಕ್ಕೆ ಪಂತ್ ವಿಚಾರದಲ್ಲಿ ಬಿಸಿಸಿಐ ಮುನ್ನೆಚ್ಚರಿಕೆ ವಹಿಸಿದೆ.
Related Articles
Advertisement
ಡ್ರೆಸ್ಸಿಂಗ್ ರೂಮ್ ನಿಷೇಧರಿಷಭ್ ಪಂತ್ ಪಾಕಿಸ್ಥಾನದೆ ದುರಿನ ರವಿವಾರದ ಪಂದ್ಯಕ್ಕೂ ಮುನ್ನ ಮ್ಯಾಂಚೆಸ್ಟರ್‌ಗೆ ಬರಲಿದ್ದಾರೆ. ಜತೆಗೆ ನೆಟ್ ಬೌಲರ್ ಖಲೀಲ್ ಅಹ್ಮದ್ ಕೂಡ ಇರಲಿದ್ದಾರೆ. ಪಂತ್ ತಂಡದ ಸದಸ್ಯನಲ್ಲದ ಕಾರಣ ಪಂದ್ಯದ ದಿನಗಳಂದು ಡ್ರೆಸ್ಸಿಂಗ್ ರೂಮ್ ಪ್ರವೇಶಿಸುವಂತಿಲ್ಲ. ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ನಿಯಮದಂತೆ ನಿರ್ದಿಷ್ಟ ಕ್ರಿಕೆಟಿ ಗರಷ್ಟೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಉಳಿಯಬಹುದು ಹಾಗೂ ತಂಡದ ಬಸ್ಸಿನಲ್ಲಿ ಪ್ರಯಾಣಿಸಬಹುದು.