Advertisement

ಸೊಂಟಕೆ ಸಿಂಗಾರ: ಬೆಲ್ಟ್ ಕಟ್ಟಿದಳು ಬೆಡಗಿ

06:09 PM May 03, 2017 | |

ಫ್ಯಾಷನ್‌ ಎಂದಾಗ ಆಕ್ಸೆಸರೀಸ್‌ಗಳಲ್ಲಿ ಬೆಲ್ಟ್… ದೊಡ್ಡ ಪಾತ್ರ ವಹಿಸುತ್ತದೆ. ಹಿಂದೆಲ್ಲ ಪ್ಯಾಂಟ್‌ ಬಿಗಿಯಾಗಿ ನಿಲ್ಲಲು ಸೊಂಟಕೆ ಬೆಲ್ಟ್… ಹಾಕಿಕೊಳ್ಳುತ್ತಿದ್ದರು. ಆದರೀಗ ಬೆಲ್ಟ್…ನ ಉಪಯೋಗ ಅಷ್ಟಕ್ಕೇ ಸೀಮಿತವಾಗಿಲ್ಲ. ಉಡುಪಿನ ಅಂದ ಚೆಂದ ಹೆಚ್ಚಿಸಲೂ
ಬಳಸಲಾಗುತ್ತದೆ. ಶರ್ಟ್‌ ಪ್ಯಾಂಟ್‌ ಅಲ್ಲದೆ ಮಹಿಳೆಯರ ಡ್ರೆಸ್‌ ಗೂ ಈಗ ಬೆಲ್ಟ್… ಹಾಕಿಕೊಳ್ಳಲಾಗುತ್ತದೆ. ಮಹಿಳೆಯರು ತಮ್ಮಡ್ರೆಸ್‌ ಮೇಲೆ ಬಣ್ಣ ಬಣ್ಣದ, ವಿಭಿನ್ನ ಆಕಾರದ, ವಿಶಿಷ್ಟ ಶೈಲಿಯ ಬೆಲ್ಟ್…ಗಳನ್ನು ಉಟ್ಟು ಫ್ಯಾಷನ್‌ ಕೋಶಂಟ್‌ ಅನ್ನು ಹೆಚ್ಚಿಸುತ್ತಿದ್ದಾರೆ.

Advertisement

ಸಣ್ಣ ಸೊಂಟ ಇದ್ದವರಿಗಂತೂ ಡ್ರೆಸ್‌ ಮೇಲೆ ಇಂಥ ಬೆಲ್ಟ… ತೊಟ್ಟು ಶೋ ಆಫ್ ಮಾಡೋದು ಒಂದು ಫ್ಯಾಷನ್ನೇ ಆಗಿಹೋಗಿದೆ! ಡ್ರೆಸ್‌ ಮೇಲೆ ಬೆಲ್ಟ್… ತೊಡುವುದೂ ಹಳೇ ಫ್ಯಾಷನ್‌ ಆಗಿಬಿಟ್ಟಿದೆ. ಏಕೆಂದರೆ ಈಗಿನ ಟ್ರೆಂಡ್‌, ಸೀರೆ ಮೇಲೆ ಬೆಲ್ಟ್… ತೊಡುವುದು! ಹೌದು, ಸಿಂಪಲ… ಆದ ಸೀರೆಯೂ ಗ್ರಾಂಡ್‌ ಆಗಿರೋ ಬೆಲ್ಟ್…ನಿಂದಾಗಿ ತುಂಬಾ ಸ್ಟೈಲಿಶ್‌ ಆಗಿ ಕಾಣಿಸುತ್ತದೆ.
ಹೆವಿ ಎಂಬ್ರಾಯxರಿ ಇರುವ ಸೀರೆಗಳ ಮೇಲೆ ಪ್ಲೆ„ನ್‌ ಬೆಲ್ಟ… ಮತ್ತು ಪ್ಲೆ„ನ್‌ ಸೀರೆಗಳ ಮೇಲೆ ಗ್ರಾಂಡ್‌ ಬೆಲ್ಟ… ತೊಡಬೇಕೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ವೆಸ್ಟರ್ನ್ ಬೆಲ್ಟ… ಅನ್ನು ಟ್ರಡೀಷನಲ… ಆಗಿಸುವುದು ಈ ಥರ! ಸೀರೆಗಳ ಮೇಲೆ ಹಾಕಿಕೊಳ್ಳುವ ಬೆಲ್ಟ…ಗಳಲ್ಲಿ ಅದೆಷ್ಟು ವಿಧಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೊದಲಿಗೆ ಸೀರೆಯನ್ನು ಉಟ್ಟು, ನಂತರ ಅದರ ಮೇಲೆ ಕಾಲರ್‌ ಇರುವ ಜಾಕೆಟ್‌ ರವಿಕೆಯನ್ನು ತೊಟ್ಟು, ಅದರ ಮೇಲೆ ಬೆಲ್ಟ… ಅನ್ನು ತೊಡಬಹುದು. ಈ ಲುಕ್‌ ಪಡೆಯಲು ಪ್ಲೆ„ನ್‌ ಸೀರೆಗೆ ಎಂಬ್ರಾಯxರಿ ಇರುವ ಜಾಕೆಟ್‌ ಬ್ಲೌಸ್‌ ಉಟ್ಟು, ಸ್ವರ್ಣ ಬಣ್ಣದ ಬೆಲ್ಟ… ಧರಿಸಿದರೆ ನೀವು ಯಾವ ಸಿನಿಮಾ ತಾರೆಗಿಂತಲೂ ಕಡಿಮೆಯಲ್ಲ!

ಬೆ ಲ್ಟ್ ಕ ಟ್ಟಿ ದ ಳು ಬೆ ಡ ಗಿ
ಸೀರೆಗೆ ಬೆಲ್ಟ… ಹಾಕಿಕೊಳ್ಳುವುದರಿಂದ ನೆರಿಗೆ ಮತ್ತು ಸೆರಗು ಅಚ್ಚುಕಟ್ಟಾಗಿ ನಿಲ್ಲುತ್ತವೆ. ಪ್ಲೆ„ನ್‌ ಡ್ರೆಸ್‌ ಹಾಕಿಕೊಳ್ಳುವುದಾದರೆ ಮೆಟಲ… ಬೆಲ್ಟ…, ಗೋಲ್ಡ… ಬೆಲ್ಟ…, ಚೈನ್‌ ಬೆಲ್ಟ… ಸೇರಿದಂತೆ ಟಾಸ್ಸೆಲ… ಬೆಲ್ಟ…ಗಳನ್ನು ಬಳಸಬಹುದು.
ಇದರಿಂದ ಬೋರಿಂಗ್‌ ಬಟ್ಟೆಗಳಿಗೆ ಮೆರಗು ಸಿಗುತ್ತದೆ. ಎಲಾಸ್ಟಿಕ್‌ ಬೆಲ್ಟ…ಗಳಲ್ಲೂ ಲೋಹದ ಬಕಲ…ಗಳಿದ್ದು, ಇವು ತೊಡಲು ಸರಳ ಹಾಗು ಸುಲಭವಾಗಿರುತ್ತವೆ. ಪದೇ ಪದೇ ಸಡಿಲ ಅಥವಾ ಬಿಗಿ ಮಾಡಿಕೊಳ್ಳಬೇಕಿಲ್ಲ. ಎಲಾಸ್ಟಿಕ್‌ ಬೆಲ್ಟ…ನ ಇನ್ನೊಂದು ಉಪಯೋಗವೆಂದರೆ ಸಮಾರಂಭಗಳಲ್ಲಿ ಊಟ ಮಾಡುವಾಗ ಹೊಟ್ಟೆ ಅಥವಾ ಸೊಂಟ ಅಗತ್ಯಕ್ಕಿಂತ ಹೆಚ್ಚು ಬಿಗಿಯಾಗಿರುವುದಿಲ್ಲ. ಆರಾಮವಾಗಿ ಕೂತುಕೊಳ್ಳಬಹುದು. ಕುಳಿತು ತಿನ್ನಬಹುದು, ನಡೆಯಬಹುದು, ಓಡಾಡಬಹುದು. ಹಿಂದಿನಿಂದಲೂ ಜನರು ಚರ್ಮದ ಬೆಲ್ಟ… ಬಳಸುತ್ತಾ ಬಂದಿ¨ªಾರೆ. ಆದರೆ ಪರಿಸರವಾದಿಗಳು, ಪ್ರಾಣಿಪ್ರಿಯರು ಚರ್ಮದ ಬದಲಿಗೆ ಫೇಕ್‌ ಲೆದರ್‌(ನಕಲಿ ಲೆದರ್‌) ಬಳಸುವಂತೆ ಇತರರನ್ನು ಉತ್ತೇಜಿಸುತ್ತಾರೆ. ಅಂತೆಯೇ ಮಾರುಕಟ್ಟೆಯಲ್ಲಿ ಒರಿಜಿನಲ… ಲೆದರ್‌ಗಿಂತ ಸ್ವಲ್ಪವೂ ಭಿನ್ನವಾಗಿ
ಕಾಣದ ಫೇಕ್‌ ಲೆದರ್‌ನಿಂದ ಮಾಡಿದ ಸುಂದರ ಬೆಲ್ಟ…ಗಳು ಲಭ್ಯವಿವೆ! ಇನ್ನು ಮುತ್ತು, ರತ್ನ, ಹವಳ, ವಜ್ರ ಸೇರಿದಂತೆ
ಅಮೂಲ್ಯ ಕಲ್ಲುಗಳಂತೆ ಕಾಣುವ ಪ್ಲಾಸ್ಟಿಕ್‌, ಕುಪ್ಪಿ ಮತ್ತು ಇತರ ವಸ್ತುಗಳಿಂದ ಸರ, ಹಾರದಂತೆ ಪೋಣಿಸಿ ಬೆಲ್ಟ…ಗಳನ್ನು ಮಾಡಲಾಗುತ್ತದೆ. ಇವು ಚೈನ್‌ ಬೆಲ್ಟ…ಗಳ ಸಾಲಿಗೆ ಸೇರುತ್ತವೆ. ಇವುಗಳಿಗೆ ಮ್ಯಾಚಿಂಗ್‌ ಕಿವಿಯೋಲೆ, ಸರ ಮತ್ತು ಬಳೆಗಳನ್ನು ಹಾಕಿಕೊಳ್ಳಬಹುದು. ತಲೆಕೂದಲಿಗೆ ಕಟ್ಟಿಕೊಳ್ಳುವ ರಿಬ್ಬನ್‌ಗಳನ್ನೂ ಬಳಸಿ ಬೆಲ್ಟ್ನಂತೆ ತೊಡಬಹುದು.

ಅದಿತಿಮಾನಸ ಟಿ  ಎಸ್‌

Advertisement

Udayavani is now on Telegram. Click here to join our channel and stay updated with the latest news.

Next