Advertisement

ಪಂತ್ ಅಜೇಯ ಶತಕ : 3ನೇ ಟೆಸ್ಟ್ ಗೆಲ್ಲಲು ದಕ್ಷಿಣ ಆಫ್ರಿಕಾಕ್ಕೆ 212 ರನ್‌ಗಳ ಗುರಿ

07:35 PM Jan 13, 2022 | Team Udayavani |

ಕೇಪ್ ಟೌನ್ : ಗುರುವಾರ ಇಲ್ಲಿ ನಡೆದ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಅಜೇಯ 100 ರನ್ ಕೊಡುಗೆ ಸಲ್ಲಿಸುವ ಮೂಲಕ ಭಾರತವು ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 212 ರನ್ ಗಳ ಗುರಿಯನ್ನು ನೀಡಿದೆ.

Advertisement

ವೇಗಿಗಳಾದ ಮಾರ್ಕೊ ಜಾನ್ಸೆನ್ (4/36) ಕಗಿಸೊ ರಬಾಡ (3/53) ಮತ್ತು ಲುಂಗಿ ಎನ್‌ಗಿಡಿ (3/21) ಅವರು ಬಿಗು ದಾಳಿ ನಡೆಸಿ ಎಲ್ಲಾ ವಿಕೆಟ್‌ಗಳನ್ನು ಕಬಳಿಸಿದ್ದರಿಂದ ಭಾರತದ ಎರಡನೇ ಇನ್ನಿಂಗ್ಸ್ 198 ಕ್ಕೆ ಮುಕ್ತಾಯವಾಯಿತು. ಭಾರತದ ಕೊನೆಯ ವಿಕೆಟ್ ಪತನವಾದಾಗ ಅಂಪೈರ್‌ಗಳು ಚಹಾ ವಿರಾಮಕ್ಕೆ ಕರೆದರು.

ರನ್ ಗಳಿಸಲು ಹೆಣಗಾಡಿದ ಚೇತೇಶ್ವರ ಪೂಜಾರ (9) ಮತ್ತು ಅಜಿಂಕ್ಯ ರಹಾನೆ (1) ಮತ್ತೊಮ್ಮೆ ವಿಫಲವಾದರು.

ನಾಯಕ ವಿರಾಟ್ ಕೊಹ್ಲಿ (143 ಎಸೆತಗಳಲ್ಲಿ 29) ಎನ್‌ಗಿಡಿ ಔಟ್ ಮಾಡುವ ಮೊದಲು ಸಾಧ್ಯವಾದಷ್ಟು ಕ್ರೀಸ್‌ನಲ್ಲಿ ಉಳಿಯಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು.

ಸಂಕ್ಷಿಪ್ತ ಸ್ಕೋರ್‌ಗಳು
ಭಾರತ: 223 ಮತ್ತು 67.3 ಓವರ್‌ಗಳಲ್ಲಿ 198 ಆಲೌಟ್. (ಆರ್ ಪಂತ್ ಔಟಾಗದೆ 100, ವಿ ಕೊಹ್ಲಿ 29; ಮಾರ್ಕೊ ಜಾನ್ಸೆನ್ 4/36, ಕೆ ರಬಾಡ 3/53).
ದಕ್ಷಿಣ ಆಫ್ರಿಕಾ: 210 ಆಲೌಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next