Advertisement
ಪನ್ನೀರ್ ಖೀರ್ ಮಾಡಲು ಮೊದಲಿಗೆ ಪನ್ನೀರ್ ಮಾಡಿಕೊಂಡಿರಬೇಕು. ಇದಕ್ಕಾಗಿ ಬೇಕಾದ ಸಾಮಗ್ರಿಗಳು ಒಂದು ಲೀಟರ್ ಹಾಲು, ಕಾಲು ಕಪ್ ಮೊಸರು, 4 ಚಮಚ ನಿಂಬೆ ರಸ, ಅರ್ಧ ಕಪ್ ಐಸ್ ತುಂಡುಗಳು.
ಅರ್ಧ ಗಂಟೆ ಬಿಟ್ಟು ಬಳಿಕ ಅದರಲ್ಲಿರುವ ನೀರನ್ನು ಬೇರ್ಪಡಿಸಿ ಬಟ್ಟೆಯಲ್ಲಿ ಅರ್ಧ ಗಂಟೆಗಳ ಕಾಲ ಕಟ್ಟಿ ಇಟ್ಟರೆ ಪನ್ನೀರ್ ಸಿದ್ಧವಾಗುತ್ತದೆ. ಪನ್ನೀರ್ ಖೀರ್ ಮಾಡಲು ಹೆಚ್ಚಿನ ಸಾಮಗ್ರಿಗಳೂ ಬೇಕಾಗಿಲ್ಲ. ತುರಿದುಕೊಂಡ ಪನ್ನೀರ್, ಮಂದಗೊಳಿಸಿದ ಹಾಲು, ಸಾಮಾನ್ಯ ಹಾಲು, ಒಣ ದ್ರಾಕ್ಷಿ, ಬಾದಾಮಿ, ಏಲಕ್ಕಿ ಹುಡಿ ಇದ್ದರೆ ಸಾಕು ಸುಲಭವಾಗಿ ಪನ್ನೀರ್ ಖೀರ್ ಮಾಡಬಹುದು.
Related Articles
Advertisement
ಈಗ ಒಂದು ಚಮಚ ಏಲಕ್ಕಿ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಗೊ ಳಿಸಿ. 2- 3 ಒಣ ದ್ರಾಕ್ಷಿ, ಒಂದು ಚಮಚ ಬಾದಾಮಿ ಚೂರನ್ನು ಸೇರಿಸಿ. ಚೆನ್ನಾಗಿ ಮಿಶ್ರ ಗೊ ಳಿಸಿ ಒಂದು ಬೌಲ್ ಗೆ ಹಾಕಿದರೆ ಖೀರ್ ಸಿದ್ಧ. ಬಳಿಕ ಖೀರ್ ಅನ್ನು ಒಣ ದ್ರಾಕ್ಷಿಯಿಂದ ಅಲಂಕರಿಸಿ. ಫ್ರಿಜ್ ನಲ್ಲಿಟ್ಟು ತಂಪಾದ ಬಳಿಕ ಸವಿಯಲು ಕೊಟ್ಟರೆ ಹೆಚ್ಚು ರುಚಿಯಾಗಿರುತ್ತದೆ.
ವಿದ್ಯಾ ಕೆ. ಇರ್ವತ್ತೂರು