Advertisement

ರಾಹುಲ್‌ ವಿರುದ್ಧ ಮುಂಢೆ ವಿವಾದಾತ್ಮಕ ಹೇಳಿಕೆ

09:17 AM Apr 25, 2019 | Vishnu Das |

ಮುಂಬಯಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜಾ ಮುಂಢೆ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದರೆ ವಿರೋಧಿಗಳು ಅದನ್ನೇ ಪ್ರಶ್ನಿಸಿ, ಸಾಕ್ಷಿ ಕೇಳುತ್ತಾರೆ. ನಮ್ಮ ಯೋಧರ ಮೇಲೆ ದಾಳಿ ನಡೆದ ಆನಂತರ ಪ್ರಧಾನಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಉಗ್ರರನ್ನು ಮಟ್ಟಹಾಕಿದ್ದಾರೆ. ಇದಕ್ಕೂ ಸಾಕ್ಷಿ ಕೇಳುತ್ತಿರುವ ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡ ರಾಹುಲ್‌ ಗಾಂಧಿಯ ಕೊರಳಿಗೆ ಬಾಂಬ್‌ ಕಟ್ಟಿ ದೇಶದಿಂದ ಹೊರಗೆ ದಬ್ಬಬೇಕು ಎಂದು ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜಾ ಮುಂಢೆ ಹೇಳಿ ಎಲ್ಲರ ಕೆಂಗಣ್ಣಿಗೆ ತುತ್ತಾಗಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಸರ್ಜಿಕಲ್‌ ದಾಳಿಯನ್ನು ಪ್ರಶ್ನಿಸುವವರೆಲ್ಲ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಾರೆ ಎಂದು ಜಾಲಾ°ದಲ್ಲಿ ನಡೆದ ಲೋಕಸಭಾ ಕ್ಷೇತ್ರದ ಚುನಾವಣ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ಪಂಕಜಾ ಮುಂಢೆ ಅವರು, ಬಾಲಾಕೋಟ್‌ ವೈಮಾನಿಕ ದಾಳಿಗೆ ಸಾಕ್ಷಿ ಕೇಳುತ್ತಿರುವ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡು ವಿವಾದಾತ್ಮಕ ಹೇಳಿಕೆ ನೀಡಿದರು.

ಮಹಾರಾಷ್ಟ್ರ ಸಿಎಂ ಫಡ್ನವೀಸ್‌, ಬಿಜೆಪಿ ರಾಜ್ಯಾಧ್ಯಕ್ಷ ರಾವ್‌ ಸಾಹೇಬ್‌ ದಾನ್ವೆ ಅವರ ಎದುರೇ ಪಂಕಜಾ ಈ ಹೇಳಿಕೆ ನೀಡಿ¨ªಾರೆ.

ಕಾಂಗ್ರೆಸ್‌ ಖಂಡನೆ
ಕಾಂಗ್ರೆಸ್‌ ಸಚಿವೆ ಪಂಕಜಾ ಮುಂಢೆ ಅವರ ಹೇಳಿಕೆಯನ್ನು ಖಂಡಿಸಿದೆ. ಬಿಜೆಪಿ ಕೀಳು ರಾಜಕೀಯ ಮಾಡುತ್ತಿದೆ. ಬಿಜೆಪಿ ನಾಯಕರ ಕೀಳುಮಟ್ಟದ ಚಿಂತನೆಗಳನ್ನು ಈ ಹೇಳಿಕೆ ಮತ್ತೂಮ್ಮೆ ಅನಾವರಣಗೊಳಿಸಿದೆ. ಅವರಿಂದ ನಾವು ಬೇರೇನನ್ನೂ ನಿರೀಕ್ಷಿಸಲಾರೆವು. ಹುತಾತ್ಮರೊಬ್ಬರನ್ನು ದೇಶದ್ರೋಹಿ ಎಂದು ಜರೆಯುವ ಅವರಿಂದ ಏನನ್ನು ನಿರೀಕ್ಷಿಸಬಹುದು. ಸಚಿವೆ ಪಂಕಜಾ ಮುಂಢೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್‌ ಪ್ರತಿಕ್ರಿಯಿಸಿದರು. ಜಾಲಾ° ಬಿಜೆಪಿಯ ಭದ್ರಕೋಟೆಯಾಗಿದ್ದು, 1996 ರಿಂದಲೂ ಬಿಜೆಪಿ ಗೆಲ್ಲುತ್ತಲೇ ಬಂದಿದೆ. 2014 ರಲ್ಲಿ ಬಿಜೆಪಿಯ ದಾದಾರಾವ್‌ ಕಾಂಗ್ರೆಸ್‌ನ ಎ. ವಿ. ಕೇಶವ ರಾವ್‌ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next