Advertisement

20ನೇ ವಿಶ್ವಪ್ರಶಸ್ತಿ ಗೆದ್ದ ಪಂಕಜ್‌

06:00 AM Nov 16, 2018 | Team Udayavani |

ಯಾಂಗಾನ್‌ (ಮ್ಯಾನ್ಮಾರ್‌): ವಿಶ್ವವಿಖ್ಯಾತ ಬಿಲಿಯರ್ಡ್ಸ್‌ ಆಟಗಾರ, ಬೆಂಗಳೂರಿನ ಪಂಕಜ್‌ ಅಡ್ವಾಣಿ 20ನೇ ವಿಶ್ವ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಯಾಂಗಾನ್‌ನಲ್ಲಿ ನಡೆದ “150 ಅಪ್‌’ ಮಾದರಿಯಲ್ಲಿ ಪಂಕಜ್‌ 6-2 ಫ್ರೆàಮ್‌ಗಳಿಂದ ಸ್ಥಳೀಯ ಆಟಗಾರ ನೇ ಥೆÌà ಓ ಅವರನ್ನು ಸೋಲಿಸಿದರು.

Advertisement

ಪಂಕಜ್‌ ಮೊದಲನೇ ಫ್ರೆàಮನ್ನು ಸುಲಭವಾಗಿ ಗೆದ್ದರು. 2ನೇ ಫ್ರೆàಮ್‌ನಲ್ಲಿ ಸ್ಥಳೀಯ ಆಟಗಾರ ನೇ ಥೆÌà ತಿರುಗಿಬಿದ್ದು ಗೆಲುವು ಸಾಧಿಸಿದರು. 3ನೇ ಫ್ರೆàಮ್‌ನಲ್ಲಿ ಪಂಕಜ್‌ ಮತ್ತೆ ಗೆದ್ದು ತಮ್ಮ ಹಿಡಿತ ಮುಂದುವರಿಸಿದರು. 4ನೇ ಫ್ರೆàಮ್‌ನಲ್ಲಿ ಥೆÌà ಗೆಲುವು ಸಾಧಿಸಿದರು. ಅಷ್ಟೇ, ಉಳಿದಿದ್ದೆಲ್ಲ ಪಂಕಜ್‌ ಪ್ರತಿಭಾ ಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿತು.ಎದುರಾಳಿ ಆಟಗಾರ ಥೆÌà ಸೆಮಿಫೈನಲ್‌ನಲ್ಲಿ ವಿಶ್ವ ವಿಖ್ಯಾತ ಆಟಗಾರ ಮೈಕ್‌ ರಸೆಲ್‌ ಅವರನ್ನು ಸೋಲಿಸಿ ಫೈನಲ್‌ಗೇರಿದ್ದರು. ಆ ಪಂದ್ಯದಲ್ಲಿ ಕಾಣಿಸಿದ್ದ ಜಾದೂ ಫೈನಲ್‌ನಲ್ಲಿ ಮಾಯವಾಗಿತ್ತು. ಪಂಕಜ್‌ ಹೊಡೆತದೆದುರು ಅವರು ನಿಲ್ಲಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next