Advertisement

ಪಂಜಕುಸ್ತಿ: ಮೆರೆದ ಹಾಸನ, ದಾವಣಗೆರೆ

09:14 AM Sep 26, 2017 | |

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ನಡೆದ ಪಂಜಕುಸ್ತಿ(ಆರ್ಮ್ ರಸ್ಲಿಂಗ್‌)ಯ ಮಹಿಳೆಯರ ವಿಭಾಗದಲ್ಲಿ ಹಾಸನ ಹಾಗೂ ಪುರುಷರ ವಿಭಾಗದಲ್ಲಿ ದಾವಣಗೆರೆಯ ಸ್ಪರ್ಧಿಗಳು ಪ್ರಾಬಲ್ಯ ಸಾಧಿಸಿದ್ದಾರೆ. ಇಲ್ಲಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂಜಕುಸ್ತಿ ಜನರಲ್ಲಿ ಕುತೂಹಲ ಮೂಡಿಸಿತು.

Advertisement

ಮಹಿಳಾ ವಿಭಾಗ: 50 ಕೆಜಿ ಒಳಗಿನ ವಿಭಾಗದಲ್ಲಿ ಗದಗದ ಬಸೀರ್‌ ವಖಾರದ್‌ ಪ್ರಥಮ, ಹಾಸನದ ಭಾನುಪ್ರಿಯ ದ್ವಿತೀಯ ಸ್ಥಾನ ಪಡೆದರು. 50-55 ಕೆಜಿ ವಿಭಾಗದಲ್ಲಿ ಹಾಸನದ ಎಂ.ಡಿ.ಮಮತ ಕುಮಾರಿ ಪ್ರಥಮ, ಗದಗದ ಶಾಹೀದ್‌ ಬೇಗಂ ದ್ವಿತೀಯ, ಹಾಸನದ ಪಿ.ಕವನ ತೃತೀಯ ಸ್ಥಾನ ಪಡೆದಿದ್ದಾರೆ. 55-60 ಕೆಜಿ ವಿಭಾಗದಲ್ಲಿ ಗದಗದ ಎಸ್‌.ಶ್ವೇತಾ ಪ್ರಥಮ, ದಾವಣಗೆರೆಯ ಕಮರ್‌ತಾಜ್‌ ದ್ವಿತೀಯ ಸ್ಥಾನ ಪಡೆದಿದ್ದಾರೆ.

60-65 ಕೆಜಿ ವಿಭಾಗದಲ್ಲಿ ಹಾಸನದ ಕೆ.ಎಂ. ಮಧುರಾ ಪ್ರಥಮ, ಕಾರವಾರದ ಲೀನಾ ದ್ವಿತೀಯ ಸ್ಥಾನ ಪಡೆದರು. 65-70 ಕೆಜಿ ವಿಭಾಗದಲ್ಲಿ ಮೈಸೂರಿನ ರೀಟಾ ಪ್ರಿಯಾಂಕಾ ಪ್ರಥಮ, ಹಾಸನದ ಎನ್‌.ಡಿ.ಶ್ವೇತಾ ದ್ವಿತೀಯ, ಬಿ.ಎಸ್‌.ಚಂದನಾ ತೃತೀಯ ಸ್ಥಾನ ಪಡೆದರು. 70-80 ಕೆಜಿ ವಿಭಾಗದಲ್ಲಿ ಹಾಸನದ ಜೆ.ರೋಸಲಿನ್‌ ಪ್ರಥಮ, ಹಾಸನದ ಇ.ನಯನಾ ದ್ವಿತೀಯ ಸ್ಥಾನ ಪಡೆದರು. 80
ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಮೈಸೂರಿನ ಕೆ.ವೈ. ಶಾರದಾ ಪ್ರಥಮ, ರಾಮನಗರದ ಪಿ.ಲಾವಣ್ಯ ದ್ವಿತೀಯ ಸ್ಥಾನ ಪಡೆದರು. 

ಪುರುಷರ ವಿಭಾಗ: 55 ಕೆಜಿ ವಿಭಾಗದಲ್ಲಿ ದಾವಣಗೆರೆಯ ಅಬ್ದುಲ್‌ ರಜಾಕ್‌ ಪ್ರಥಮ, ಎಸ್‌.ಇರ್ಫಾನ್‌ ದ್ವಿತೀಯ, ಮೆಹಬೂಬ್‌ ಭಾಷಾ ತೃತೀಯ ಸ್ಥಾನ ಪಡೆದಿದ್ದಾರೆ. 55-60 ಕೆಜಿ ವಿಭಾಗದಲ್ಲಿ ದಾವಣಗೆರೆಯ ಸೈಯದ್‌ ಇಸ್ಮಾಯಿಲ್‌ ಜಬೀವುಲ್ಲಾ ಪ್ರಥಮ, ಶೌಕತ್‌ ಅಲಿ ಮುಲ್ಲಾ ದ್ವಿತೀಯ, ಇಮಿ¤ಯಾಜ್‌ ಅಹಮದ್‌ ತೃತೀಯ ಸ್ಥಾನ ಪಡೆದಿದ್ದಾರೆ. 60-65 ಕೆಜಿ ವಿಭಾಗದಲ್ಲಿ ಬೆಂಗಳೂರಿನ ಸಮೀವುಲ್ಲಾ ಪ್ರಥಮ, ಮೈಸೂರಿನ ಎಂ.ಲೋಕೇಶ್‌ ದ್ವಿತೀಯ, ಹಾಸನದ ಎಚ್‌. ಆರ್‌.ಚಂದ್ರಕಾಂತ್‌ ತೃತೀಯ ಸ್ಥಾನ ಪಡೆದಿದ್ದಾರೆ. 65-70 ಕೆಜಿ ವಿಭಾಗದಲ್ಲಿ ಬೆಂಗಳೂರಿನ ಮನೋಜ್‌ ದೇಬನಾಥ್‌ ಪ್ರಥಮ, ದಾವಣಗೆರೆಯ ಅಬ್ದುಲ್‌ ಕರೀಂ ದ್ವಿತೀಯ, ಮೈಸೂರಿನ ಪಿ.ಪ್ರಜ್ವಲ್‌ ತೃತೀಯ ಸ್ಥಾನ ಪಡೆದಿದ್ದಾರೆ. 70-75 ಕೆಜಿ ವಿಭಾಗದಲ್ಲಿ ಮೈಸೂರಿನ ಮದನ್‌ ಕುಮಾರ್‌ ಪ್ರಥಮ, ಬೆಂಗಳೂರಿನ ಪಿ.ದೇವರಾಜ್‌ ದ್ವಿತೀಯ, ದಾವಣಗೆರೆಯ ಫ‌ಯಾಜ್‌ ಅಹಮದ್‌ ತೃತೀಯ ಸ್ಥಾನ ಪಡೆದಿದ್ದಾರೆ. 75-80 ಕೆಜಿ ವಿಭಾಗದಲ್ಲಿ ಬೆಂಗಳೂರಿನ ಹಿರಾಜ್‌ ಪಾಷಾ ಪ್ರಥಮ, ಎಂ.ಪ್ರಭುದೇವ ದ್ವಿತೀಯ, ದಾವಣಗೆರೆಯ ಸೈಯದ್‌ ಸಮೀರ್‌ ತೃತೀಯ ಸ್ಥಾನ ಪಡೆದಿದ್ದಾರೆ.  

80-85 ಕೆಜಿ ವಿಭಾಗದಲ್ಲಿ ದಾವಣಗೆರೆಯ  ಎಸ್‌.ಬಸವರಾಜ್‌ ಪ್ರಥಮ, ಮೈಸೂರಿನ ಜಿ.ಪ್ರವೀಣ್‌ ದ್ವಿತೀಯ, ಬಿ.ಎ.ಮುಬಾರಕ್‌ ತೃತೀಯ ಸ್ಥಾನ ಪಡೆದಿದ್ದಾರೆ. 85-90 ಕೆಜಿ ವಿಭಾಗದಲ್ಲಿ ಮೈಸೂರಿನ ಎಂ.ರಾಜು ಪ್ರಥಮ, ಚಿಕ್ಕಮಗಳೂರಿನ ಮಹಮದ್‌ ಇಲಿಯಾಸ್‌ ದ್ವಿತೀಯ, ಮೈಸೂರಿನ ಬಿ.ಮನೋಜ್‌ ಕುಮಾರ್‌ ತೃತೀಯ ಸ್ಥಾನ ಪಡೆದಿದ್ದಾರೆ.

Advertisement

90-100 ಕೆಜಿ ವಿಭಾಗದಲ್ಲಿ ಚಿಕ್ಕಮಗಳೂರಿನ ಕೆ.ಎನ್‌.ಚೇತನ್‌ ಪ್ರಥಮ, ಮೈಸೂರಿನ ಶಹನಾಜ್‌ ದ್ವಿತೀಯ ಸ್ಥಾನ ಪಡೆದಿದ್ದಾರೆ 
100-110 ಕೆಜಿ ವಿಭಾಗದಲ್ಲಿ ಮಂಡ್ಯದ ಎನ್‌. ಉಮೇಶ್‌ ಪ್ರಥಮ, ದಾವಣಗೆರೆಯ ನಯಾಜ್‌ ದ್ವಿತೀಯ, ಮೈಸೂರಿನ ಬಿ.ರವಿಕುಮಾರ್‌ ತೃತೀಯ ಮತ್ತು 110 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಮಂಡ್ಯದ ವಿನಯ್‌ ಕುಮಾರ್‌ ಪ್ರಥಮ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next