ನವದೆಹಲಿ: ದೆಹಲಿಯ ನಂತರ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರದ ಅಬಕಾರಿ ನೀತಿಯಲ್ಲಿನ 500 ಕೋಟಿ ರೂಪಾಯಿ ಹಗರಣ ಪ್ರಕರಣದ ತನಿಖೆಗೆ ಕೋರಿಕೊಂಡಿದೆ.
ಶಿರೋಮಣಿ ಅಕಾಲಿದಳ (ಎಸ್‌ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಬುಧವಾರ (ಆಗಸ್ಟ್ 31, 2022) ಪಂಜಾಬ್ ರಾಜ್ಯಪಾಲರಿಗೆ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಅಬಕಾರಿ ನೀತಿಯ ಬಗ್ಗೆ ಸಿಬಿಐ ಮತ್ತು ಇಡಿ ತನಿಖೆಯನ್ನು ಕೋರಿ ಲಿಖಿತ ದಾಖಲೆ ಪತ್ರವನ್ನು ಸಲ್ಲಿಸಿದ್ದಾರೆ.
“ದೆಹಲಿಯಂತೆ ಪಂಜಾಬ್‌ನಲ್ಲಿಯೂ ಇದೇ ರೀತಿಯ ಹಗರಣ ನಡೆದಿದೆ. ಇದು 500 ಕೋಟಿ ರೂ.ಗಳ ಹಗರಣ” ಎಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಮನವಿ ಸಲ್ಲಿಸಿದ ನಂತರ ಶಿರೋಮಣಿ ಅಕಾಲಿದಳದ ಮುಖ್ಯಸ್ಥರು ಈ ಆರೋಪವನ್ನು ಮಾಡಿದ್ದಾರೆ.
ಪಂಜಾಬ್‌ನಲ್ಲಿನ ಅಬಕಾರಿ ನೀತಿ ಹಗರಣದ ಬಗ್ಗೆ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಆದೇಶಿಸುವಂತೆ ನಾವು ರಾಜ್ಯಪಾಲರನ್ನು ಕೋರಿದ್ದೇವೆ ಎಂದು ಅವರು ಹೇಳಿದರು.
“ಪಿಬಿ ಗವರ್ನರ್‌ಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ ಮತ್ತು ದೆಹಲಿ ನೀತಿಗೆ ಅನುಗುಣವಾಗಿ ರೂಪಿಸಲಾದ “ಟೈಲರ್-ಮೇಡ್” ಅಬಕಾರಿ ನೀತಿಯ ಮೂಲಕ ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಮಾಡಿದ 500 ಕೋಟಿ ರೂಪಾಯಿ ಹಗರಣದಲ್ಲಿ ಸಿಬಿಐ ಮತ್ತು ಇಡಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದೇವೆ. ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿದೆ” ಎಂದು ಸುಖಬೀರ್ ಸಿಂಗ್ ಬಾದಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.