Advertisement

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಪಣಿಯಾಡಿ ಗ್ರಂಥಾಲಯ ಉದ್ಘಾಟನೆ

01:11 PM Apr 02, 2017 | Harsha Rao |

ಬಂಟ್ವಾಳ: ತುಳುನಾಡಿನ ಸಾಂಸ್ಕೃತಿಕ ಬದುಕಿನ ಶಾಶ್ವತ ಪರಿಚಯದ ಕೆಲಸ ಮಾಡಿದ ಕೀರ್ತಿ ಪ್ರೊ| ತುಕಾರಾಂ ಪೂಜಾರಿ ದಂಪತಿಗೆ ಸಲ್ಲುತ್ತದೆ. ತುಳುನಾಡಿನಲ್ಲಿ ದೇವಾಲಯ, ದೈವಾಲಯ ಜೀರ್ಣೋದ್ಧಾರ ಆಗಿರುವಂತೆ ತುಳು ಸಾಂಸ್ಕೃತಿಕ ಕೇಂದ್ರಗಳೂ ಪುನರುತ್ಥಾನ ಕಾಣಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಶ್ವತುಳು ಸಮ್ಮೇಳನ ಮೂರು ದಿನ ನಡೆದಿದ್ದರೂ ಮೂವತ್ತು ವರ್ಷದ ಸಂಸ್ಮರಣೆಗೆ ಕಾರಣವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಶನಿವಾರ ಬಿ.ಸಿ.ರೋಡ್‌ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಎಸ್‌.ಯು. ಪಣಿಯಾಡಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ಜಿಲ್ಲೆಯ ಅನಂತರ ನಮ್ಮ ತುಳುನಾಡು ಜಿಲ್ಲೆಗಳೇ ಹೆಚ್ಚು ಪ್ರಗತಿಯಲ್ಲಿವೆ. ನಮ್ಮ ಮಣ್ಣಿನ ಸಾಂಸ್ಕೃತಿಕ ಬೇರು ಗಟ್ಟಿಯಾಗಿದ್ದು ಸಹಸ್ರಾರು ವರ್ಷಗಳ ಹಿಂದಿನ ನಮ್ಮ ಹಿರಿಯರ ಕೊಡುಗೆ, ಕೃಷಿಕರ ಬದುಕಿನ ಗಂಧ, ನೆಲ ಜಲ ಮೌಲ್ಯಯುತ ಸಂಪತ್ತನ್ನು ಇಂದಿಗೂ ಮರೆತಿಲ್ಲ ಎಂಬುದು ಸಮಾಧಾನದ ವಿಷಯ ಎಂದರು.

ಬದುಕು ತಿಳಿಸುವ ಮ್ಯೂಸಿಯಂ
ನೂರು ವರ್ಷಗಳ ಹಿಂದೆ ನಮ್ಮ ಜಿಲ್ಲೆ ಹೇಗಿತ್ತು ಎಂದು ಬಾಸೆಲ್‌ ಮಿಷನ್‌ ಫೋಟೋಗಳು ತಿಳಿಸುತ್ತವೆ. ಸಾಹಿತ್ಯಿಕ ಬದುಕು ಯಥಾಕೃತಿಯಲ್ಲಿ ನೋಡಲು ಸಿಗುವುದು ಇಂತಹ ಮ್ಯೂಸಿಯಂಗಳ‌ಲ್ಲಿ ಮಾತ್ರ. ಹಳೆಯ ವಸ್ತುಗಳು ಗುಜರಿ ಅಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಬಿ. ರಮಾನಾಥ ರೈ ಮಾತನಾಡಿ, ಇಂತಹ ಒಂದು ಕೇಂದ್ರ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಇದೆ ಎಂಬ ಸಂಭ್ರಮ ನನ್ನದು. ಸಾಧ್ಯ ಇರುವ ಎಲ್ಲ ಸಹಾಯ ಸಹಕಾರ ನೀಡಲು ಬದ್ಧನಿದ್ದೇನೆ ಎಂದರು.
ಮೇಲುಕೋಟೆ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಮಾತನಾಡಿ, ಉತ್ತಮ ಬದುಕಿಗಾಗಿ, ಸುಖ, ಶಾಂತಿ, ನೆಮ್ಮದಿಗಾಗಿ ಸಾಂಸ್ಕೃತಿಕ ಕೇಂದ್ರಗಳಾದ ಮ್ಯೂಸಿಯಂಗಳು ಅಗತ್ಯ ಎಂದರು.

Advertisement

ಪ್ರಾಕ್ತನ ಇಲಾಖೆ ನಿರ್ದೇಶಕ ಡಾ| ಆರ್‌. ಗೋಪಾಲ್‌, ಹಿರಿಯ ಸಿನೆಮಾ ನಟಿ ಹರಿಣಿ ಎಸ್‌. ರಾವ್‌ ಶುಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ| ಶಂಕರ ಭಟ್‌ ಶುಭಾಶಂಸನೆಗೈದರು. ಗ್ರಂಥಾ ಲಯದ ಕೆಲಸ ನಿರ್ವಹಿಸಿದ ಜಗದೀಶ್‌ ಅವರನ್ನು ಹೆಗ್ಗಡೆ ಅವರು ಸಮ್ಮಾನಿಸಿದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ| ತುಕಾರಾಂ ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ವಂದಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ| ಆರ್‌. ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next