Advertisement
ಅಂದು ಮಧ್ಯಾಹ್ನ ಹೀಗೆ ಸುಮ್ಮನೆ ಗೆಳತಿಯರೊಂದಿಗೆ ಪುಸ್ತಕ ಹಿಡಿದು ಗ್ರಂಥಾಲಯಕ್ಕೆ ಹೊರಟಿದ್ದಾಗ ಗೆಳತಿಯೊಬ್ಬಳು ಕೈಯಲ್ಲಿದ್ದ ಪುಸ್ತಕವನ್ನು ಗಮನಿಸಿ ಅದೇನೆಂದು ಕೇಳಿದಳು. “ಇದು ಫೆರಿಸ್ತಾ ಬರೆದ ಕೃತಿ’ ಎಂದು ನಾನು ಉತ್ತರಿಸಿದೆ. ಆ ಕೃತಿಯನ್ನು ಜ್ಞಾಪಿಸಿಕೊಂಡ ಆಕೆ “ಇದನ್ನು 1510ರಲ್ಲಿ ಬರೆದಿದ್ದು ತಾನೆ’ ಎಂದಾಗ “ಇಲ್ಲ 1610ರಲ್ಲಿ ರಚಿಸಿದ ಕೃತಿ ಇದು’ ಎಂದು ಉತ್ತರಿಸಿದೆ. ಫೆರಿಸ್ತಾ ಒಬ್ಬ ಇತಿಹಾಸಕಾರ. ಅವನ ಪೂರ್ತಿ ಹೆಸರು ಮೊಹಮ್ಮದ್ ಖಾಸಿಮ್ ಹಿಂದೂ ಷಾ. ಇರಾನ್ ಮೂಲದ ಈತ ಪರ್ಷಿಯನ್ ಇತಿಹಾಸಕಾರ. ಈತನ ತಂದೆ ಗೊಲಾಮ್ ಅಲಿ ಹಿಂದೂ ಷಾ. ಇರಾನ್ ರಾಜನು ಗೊಲಾಮ್ ಆಲಿಯನ್ನು ಕರೆದು, ಭಾರತಕ್ಕೆ ತೆರಳಿ, ಅಲ್ಲಿ ರಾಜಕುಮಾರ ಮಿರಾನ್ ಹುಸೇನ್ ನಿಝಮ್ ಶಾಗೆ ಪರ್ಷಿಯನ್ ಭಾಷೆ ಕಲಿಸುವಂತೆ ಸೂಚಿಸುತ್ತಾನೆ. ಹಾಗಾಗಿ ಚಿಕ್ಕಂದಿನಲ್ಲಿಯೇ ಫೆರಿಸ್ತಾ ಭಾರತಕ್ಕೆ ಬರಬೇಕಾಯಿತು. ಆದರೆ, ಅವನ ವಿದ್ಯಾಭ್ಯಾಸವೂ ರಾಜನ ಜೊತೆಗೇ ನಡೆಯಿತು. ಬಳಿಕ ಆತ ಬಿಜಾಪುರಕ್ಕೆ ಬಂದು ಇಬ್ರಾಹಿಂ ಆದಿಲ್ ರಾಜನ ಜೊತೆಗೆ ಕೆಲಸ ಮಾಡಿದ ಉಲ್ಲೇಖವೂ ಇದೆ. ಅದೇನೇ ಇರಲಿ. ನನ್ನ ಮಾತನ್ನು ಒಪ್ಪಿಕೊಳ್ಳದ ಅವಳೊಡನೆ ದೀರ್ಘ ಮಾತುಕತೆ ನಡೆಯಿತು.
Related Articles
ತೃತೀಯ ಬಿಎ, ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
Advertisement