ಮುಂಬೈ: ಮಹಿಳೆಯೊಬ್ಬಳು ತನ್ನ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಹೇಳುವ ಮೂಲಕ ಭೀತಿ ಹುಟ್ಟಿಸಿರುವ ಘಟನೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಬೀದಿಗಿಳಿದು ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್
ಮುಂಬೈನಿಂದ ಕೋಲ್ಕತಾಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ಆಕೆಯ ಲಗೇಜ್ ಗೆ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಅಧಿಕಾರಿ ಹೇಳಿದಾಗ, ಆಕೆ ತನ್ನ ಬ್ಯಾಗ್ ನಲ್ಲಿ ಬಾಂಬ್ ಇದ್ದಿರುವುದಾಗಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ಮಹಿಳೆಯ ಬಳಿ ಎರಡು ಬ್ಯಾಗ್ ಗಳಿದ್ದು, ಈ ಕಾರಣಕ್ಕಾಗಿ ಹೆಚ್ಚುವರಿ ಹಣ ಪಾವತಿಸುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು. ಬಳಿಕ ಸಿಐಎಸ್ ಎಫ್ ನೆರವಿನೊಂದಿಗೆ ಶ್ವಾನ ದಳದೊಂದಿಗೆ ತಪಾಸಣೆ ನಡೆಸಿದಾಗ ಆಕೆಯ ಬ್ಯಾಗ್ ನಲ್ಲಿ ಬಾಂಬ್ ಇಲ್ಲ ಎಂಬುದು ದೃಢಪಟ್ಟಿತ್ತು.
ಹೆಚ್ಚುವರಿ ಹಣ ಪಾವತಿಸಲು ಹೇಳಿದ್ದಕ್ಕೆ ಬಾಂಬ್ ಇದೆ ಎಂದು ಭೀತಿ ಹುಟ್ಟಿಸಿದ ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು 505 (2)ರ ಪ್ರಕಾರ ದೂರು ದಾಖಲಿಸಿ, ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಆಕೆಗೆ ಜಾಮೀನು ನೀಡಿರುವುದಾಗಿ ವರದಿ ತಿಳಿಸಿದೆ.