ಬಂಟ್ವಾಳ : ಪಾಣೆಮಂಗಳೂರು ಭ| ಶ್ರೀ 1008 ಅನಂತನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಜು. 9ರಂದು ಮುನಿಶ್ರೀ 108 ವೀರ ಸಾಗರ ಮಹಾರಾಜರ ಭವ್ಯ ಮಂಗಲ ವರ್ಷಾಯೋಗ ಚಾತುರ್ಮಾಸ್ಯ ಅಂಗವಾದ ವಿಧಿವಿಧಾನಗಳು ಸೋಂದಾ ಸ್ವಸ್ತಿಶ್ರೀ ಭಟ್ಟಾ ಕಲಂಕಾ ಭಟ್ಟಾರಕ ಮಹಾರಾಜರ ನೇತೃತ್ವದಲ್ಲಿ ನಡೆಯಿತು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಭವ್ಯ ಮಂಗಲ ಕಲಶ ಸ್ಥಾಪನೆ ಕಾರ್ಯ ನೆರವೇರಿಸಿದರು. ಈಗಾಗಲೇ ಜು. 7ರಿಂದ ಅ. 19ರ ತನಕ ಚಾತುರ್ಮಾಸ್ಯ ವ್ರತಾಚರಣೆಗೆ ದಿನ ನಿಗದಿ
ಯಾಗಿದ್ದು ಅದರಂತೆ ವ್ಯವಸ್ಥೆಗಳು ನಡೆಯುವುದಾಗಿ ತಿಳಿಸಿದರು.ಜು. 9ರಂದು ಬೆಳಗ್ಗೆ 8 ಗಂಟೆಗೆ ಜೈನ ಸಮಾಜದ ಹಿರಿಯ ಪಿ. ಜಿನರಾಜ ಆರಿಗ ಧ್ವಜಾರೋಹಣ ನೆರವೇರಿಸುವ ಮೂಲಕ ವಿಧಿಪ್ರಕಾರದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭ 64 ಋದ್ಧಿ ಆರಾಧನೆಯು ನಡೆಯಿತು. ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಸುದರ್ಶನ ಜೈನ್, ಅಧ್ಯಕ್ಷ ಪುಷ್ಪರಾಜ ಜೈನ್, ರತ್ನಾಕರ ಜೈನ್, ಧರಣೇಂದ್ರ ಇಂದ್ರ, ಸುಭಾಶ್ಚಂದ್ರ ಜೈನ್, ಹರ್ಷರಾಜ್ ಬಲ್ಲಾಳ್, ಆದಿರಾಜ ಜೈನ್, ಅರ್ಕಕೀರ್ತಿ ಇಂದ್ರ, ಯಶೋಧರ ಪೂವಣಿ ಮಂಗಳೂರು, ಸತೀಶ್ ಪಡಿವಾಲ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.