Advertisement

ಹೊಸ ಔಷಧ ಕಾಯ್ದೆ ರಚನೆಗೆ ಸಿದ್ಧತೆ

11:42 AM Sep 09, 2021 | Team Udayavani |

ಹೊಸದಿಲ್ಲಿ: ಮೂಲತಃ ಬ್ರಿಟಿಷರ ಕಾಲದಲ್ಲಿ ಜಾರಿಗೆ ತರಲಾಗಿದ್ದ 1940ರ ಔಷಧ ಮತ್ತು ಸೌಂದರ್ಯ ವರ್ಧಕಗಳ ಕಾಯ್ದೆಯ ಬದಲಿಗೆ ಹೊಸತೊಂದು ಕಾಯ್ದೆಯನ್ನು ರೂಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

ಅದಕ್ಕಾಗಿ, ಭಾರತೀಯ ಔಷಧ ಮಹಾನಿಯಂತ್ರಕರಾದ ವಿ.ಜಿ. ಸೊಮಾನಿಯವರ ನೇತೃತ್ವದಲ್ಲಿ 8 ಮಂದಿಯ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಯು ಹೊಸ ಔಷಧ ಕಾನೂನಿಗೆ ಸಂಬಂಧಿಸಿದಂತೆ ಕರಡು ಪ್ರತಿಯನ್ನು ಸಿದ್ಧಪಡಿಸಿ, ನ. 30ರೊಳಗೆ ಸಲ್ಲಿಸಲಿದೆ.

ಯಾರ್ಯಾರಿದ್ದಾರೆ ಸಮಿತಿಯಲ್ಲಿ?: ವಿ.ಜಿ. ಸೊಮಾನಿ (ಅಧ್ಯಕ್ಷರು), ರಾಜೀವ್‌ ವಾಧ ವನ್‌ (ಕೇಂದ್ರ ಆರೋಗ್ಯ ಇಲಾಖೆ ನಿರ್ದೇ ಶಕರು), ಡಾ| ಈಶ್ವರ ರೆಡ್ಡಿ (ಜಂಟಿ ಸಹ ನಿರ್ದೇಶಕರು), ಎ.ಕೆ. ಪ್ರಧಾನ್‌ (ಜಂಟಿ ಸಹ ನಿರ್ದೇಶಕರು), ಐಎಎಸ್‌ ಅಧಿಕಾರಿ ಎನ್‌.ಎಲ್‌. ಮೀನಾ, ಹರ್ಯಾಣ- ಗುಜರಾತ್‌- ಮಹಾರಾಷ್ಟ್ರದ ಔಷಧ ತಯಾರಕರು, ನಿಯಂತ್ರಕರು.

Advertisement

Udayavani is now on Telegram. Click here to join our channel and stay updated with the latest news.

Next