Advertisement

ಪಂ|ಹಾಸಣಗಿಗೆ ಪಂ|ರಾಜಗುರು ರಾಷ್ಟ್ರೀಯ ಪ್ರಶಸ್ತಿ

02:21 PM Mar 14, 2021 | Team Udayavani |

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸ್ವರಸಾಮ್ರಾಟ ಪಂ|ಬಸವರಾಜ ರಾಜಗುರು ರಾಷ್ಟ್ರೀಯಸ್ಮಾರಕ ಟ್ರಸ್ಟ್‌ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ನಗರದಲ್ಲಿ ಶನಿವಾರ ಜರುಗಿತು.

Advertisement

ಒಂದು ಲಕ್ಷ ರೂ. ನಗದು ಒಳಗೊಂಡ 2020ನೇ ಸಾಲಿನ ಸ್ವರ ಸಾಮ್ರಾಟ್‌ ಪಂ|ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಪಂ.ಗಣಪತಿ ಭಟ್‌ ಹಾಸಣಗಿ ಅವರಿಗೆ ಪ್ರದಾನ ಮಾಡಲಾಯಿತು. ತಲಾ 25 ಸಾವಿರ ರೂ. ಒಳಗೊಂಡ ಯುವ ಪ್ರಶಸ್ತಿಯನ್ನು ಧಾರವಾಡದ ಉಸ್ತಾದ್‌ ಹಫೀಜ್‌ ಬಾಲೇಖಾನ್‌ ಹಾಗೂ ಮೈಸೂರಿನ ವಿದುಷಿ ಲಕ್ಷ್ಮೀ ನಾಗರಾಜ ಅವರಿಗೆ ನೀಡಲಾಯಿತು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದಸಚಿವ ಜಗದೀಶ ಶೆಟ್ಟರ, ತಮ್ಮ ವಿಶಿಷ್ಟಶೈಲಿಯಲ್ಲಿ ಸಂಗೀತ ಕ್ಷೇತ್ರಕ್ಕೆ ಮೆರಗು ನೀಡಿದವರು ಪಂ|ಬಸವರಾಜ ರಾಜಗುರು.ತಮ್ಮ ಕಲಾ ತಪಸ್ಸು, ಸಾಧನೆ ಮೂಲಕವೇಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಅವರ ಸಂಗೀತ ಸೇವೆ, ಸಾಧನೆ ಯುವಕಲಾವಿದರಿಗೆ ಮಾದರಿ ಆಗಿದೆ. ಅವರಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕಸಂಗೀತಕ್ಕೆ ಗೌರವ ನೀಡುವ ಕಾರ್ಯ ಸಾಗಿದೆ ಎಂದರು.

ನಮ್ಮ ಸಂಸ್ಕೃತಿ, ಪರಂಪರೆ ಮರೆತರೆ ನಾವು ನಮ್ಮನ್ನೇ ಮರೆತು ಹೋದಂತೆ.ಹೀಗಾಗಿ ನಮ್ಮ ಸಂಗೀತ, ಕಲೆ, ಸಂಸ್ಕೃತಿ,ಪರಂಪರೆ ಉಳಿಸಿ ಬೆಳೆಸಲು ಯುವಜನಾಂಗಕ್ಕೆ ತಿಳಿಸುವ ಕಾರ್ಯ ಸದಾ ಆಗಬೇಕು ಎಂದ ಶೆಟ್ಟರ, ಜಿಲ್ಲೆಯಲ್ಲಿ ಕಲಾ ಗ್ರಾಮ ನಿರ್ಮಾಣಕ್ಕೆ ಬೇಕಾದ ನೆರವುಸರಕಾರ ನೀಡಲಿದೆ. ಒಂದು ಎಕರೆಯಲ್ಲಿ ನಿರ್ಮಾಣ ಆಗಲಿರುವ ಈ ಕಲಾಗ್ರಾಮದಲ್ಲಿ ಪಂ|ಬಸವರಾಜ ರಾಜಗುರುಅವರ ಸ್ಮಾರಕ ಭವನ ನಿರ್ಮಾಣಕ್ಕೂ ಆದ್ಯತೆ ಕೊಡಲಾಗುವುದು ಎಂದರು.

ಪ್ರಶಸ್ತಿ ಸೀÌಕರಿಸಿದ ಪಂ|ಗಣಪತಿ ಭಟ್‌ ಮಾತನಾಡಿ, ಗುರುಗಳ ಹೆಸರಿನಲ್ಲಿರುವಪ್ರಶಸ್ತಿ ಶಿಷ್ಯನಿಗೆ ದೊರಕಿದ್ದು ಸಂಸತದಜತೆಗೆ ಈಗ ಜೀವನ ಸಾರ್ಥಕವೂ ಆಗಿದೆ.ಗುರುಗಳ ಆರ್ಶೀವಾದ, ಅವರ ಪ್ರೀತಿ,ಅನುಗ್ರಹದ ಜತೆಗೆ ನನ್ನ ಶ್ರಮದಿಂದ ಇಲ್ಲಿಯವರೆಗೆ ಬಂದು ನಿಲ್ಲಲು ಸಾಧ್ಯವಾಗಿದೆ. ಇನ್ನು ಬಾಳು ಹಂಚಿಕೊಂಡಪತ್ನಿಯ ಸಹಕಾರದಿಂದ ಸಂಗೀತದಲ್ಲಿ ಸಾಧನೆ ಮಾಡಲು ಕಾರಣವಾಗಿದ್ದು, ಮದುವೆ ವಾರ್ಷಿಕೋತ್ಸವ ದಿನವೇ ಉಡುಗೊರೆಯಾಗಿ ಪ್ರಶಸ್ತಿ ಪಡೆದಿದ್ದು ಖುಷಿಕೊಟ್ಟಿದೆ ಎಂದರು. ಟ್ರಸ್ಟ ಸದಸ್ಯ ನಿಜಗುಣ ರಾಜಗುರು ಮಾತನಾಡಿ, ಕಳೆದ ವರ್ಷದ ಆಗಸ್ಟ್‌ನಲ್ಲಿಯೇ ಈ ಪ್ರಶಸ್ತಿ ನೀಡಬೇಕಿತ್ತು.ಆದರೆ ಆಗಿರಲಿಲ್ಲ. ಈ ವರ್ಷದಜನ್ಮಶತಮಾನೋತ್ಸವ ಕಾರ್ಯಕ್ರಮಗಳನ್ನುನೆರೆ ರಾಜ್ಯಗಳಲ್ಲೂ ಹಮ್ಮಿಕೊಳ್ಳಲುಉದ್ದೇಶಿಸಲಾಗಿದೆ. ಅದಕ್ಕಾಗಿ ಸರಕಾರದನೆರವಿನ ನಿರೀಕ್ಷೆ ಇದೆ ಎಂದರು.

ಡಿಸಿ ನಿತೇಶ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಟ್ರಸ್ಟ್‌ ಅಧ್ಯಕ್ಷಚಂದ್ರಕಾಂತ ಬೆಲ್ಲದ, ಟ್ರಸ್ಟ್‌ ಸದಸ್ಯರಾದ ಭಾರತಿದೇವಿ ರಾಜಗುರು, ಪಂ|ಪರಮೇಶ್ವರ ಹೆಗಡೆ, ಡಾ|ಉದಯಕುಮಾರ ದೇಸಾಯಿ, ಇದ್ದರು. ಮಂಜುಳಾ ಯಲಿಗಾರ ಸ್ವಾಗತಿಸಿದರು. ಮಾಯಾರಾಮನ್‌ ನಿರೂಪಿಸಿದರು. ಪ್ರಶಸ್ತಿ ಪುರಸ್ಕೃತರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next