Advertisement
ಸಾಸ್ತಾನ ಆಸುಪಾಸಿನವರು ಈ ರಸ್ತೆಯ ಮೂಲಕ ಹತ್ತಾರು ಕಿ.ಮೀ. ಹತ್ತಿರದಲ್ಲಿ ಬೆಣ್ಣೆಕುದ್ರು ಮೂಲಕ ಬಾಕೂìರು ತಲುಪಬಹುದಾಗಿದ್ದು, ಸಾಸ್ತಾನ ತಿರುವಿನಿಂದ ಮೂಡಹಡು ಕುದ್ರು ತನಕ 15ಅಡಿ ಅಗಲದಲ್ಲಿ ರಸ್ತೆ ವಿಸ್ತರಣೆಗೊಂಡು ಸುವ್ಯವಸ್ಥಿತ ರೀತಿಯಲ್ಲಿ ಅಭಿವೃದ್ಧಿಯಾಗಿತ್ತು ಹಾಗೂ ಸ್ಥಳೀಯರ ಕಣ್ಗಾವಲಲ್ಲಿ ಕಾಮಗಾರಿ ನೆರವೇರಿತ್ತು. ಆದರೆ ಆರಂಭದಲ್ಲೇ ಈ ರೀತಿ ಅವ್ಯವಸ್ಥೆ ಇರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಅಭಿವೃದ್ಧಿಗೊಂಡ ರಸ್ತೆಗೆ ಹೊಂದಿ ಕೊಂಡು ಹಲವಾರು ಒಳರಸ್ತೆಗಳಿದ್ದು ಇವುಗಳನ್ನು ಸಂಪರ್ಕಿಸುವಲ್ಲಿ ಕಾಂಕ್ರೀಟ್ ಅಳವಡಿಸುವ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಒಳರಸ್ತೆಯಿಂದ ಮುಖ್ಯ ರಸ್ತೆ ಸಂಪರ್ಕಿಸುವುದು ಕಷ್ಟ ಸಾಧ್ಯವಾಗಿದೆ. ಗ್ರಾಮಸಭೆ, ವಾರ್ಡ್ ಸಭೆ ಹಾಗೂ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಸ್ಥಳೀಯರು ಸಮಸ್ಯೆ ತಿಳಿಸಿದ್ದಾರೆ. ಆದರೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ತೆರೆದ ಸ್ಥಿತಿಯಲ್ಲಿದೆ ಚರಂಡಿ
ರಸ್ತೆಯ ಅಕ್ಕ-ಪಕ್ಕದಲ್ಲಿ ಆಳವಾದ ತೆರೆದ ಸ್ಥಿತಿಯಲ್ಲಿ ಚರಂಡಿ ಇದ್ದು ಸ್ವಲ್ಪ ಎಡವಿದರೂ ವಾಹನಗಳು ಚರಂಡಿಗೆ ಬೀಳುವ ಸಾಧ್ಯತೆ ಇದೆ. ಆದರೆ ಮೊದಲ ಹಂತದ ಕಾಮಗಾರಿಯಲ್ಲಿ ಚರಂಡಿಗೆ ಹಣ ಮೀಸಲಿರಿಸಿಲ್ಲ ಎನ್ನಲಾಗಿದೆ. ಆದಷ್ಟು ಶೀಘ್ರ ತೆರೆದ ಸ್ಥಿತಿಯಲ್ಲಿರುವ ಚರಂಡಿಗೆ ಸ್ಲಾ Âಬ್ ಅಳವಡಿಸುವ ಕಾರ್ಯ ಆಗಬೇಕಿದೆ. ಇಲ್ಲವಾದರೆ ಮುಂದೆ ಅಪಾಯ ಎದುರಾಗುವ ಸಾಧ್ಯತೆ ಇದೆ.
Related Articles
ಸಂಬಂಧಪಟ್ಟ ಗುತ್ತಿಗೆದಾರರು ಬಾಕಿ ಉಳಿದ ಕಾಮಗಾರಿಗಳನ್ನು ಆದಷ್ಟು ಶೀಘ್ರ ಕೈಗೊಳ್ಳಬೇಕು. ಇಲ್ಲವಾದರೆ ಸಂಬಂಧಿಸಿದ ಇಲಾಖೆಯವರು ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.
Advertisement
ಆದಷ್ಟು ಶೀಘ್ರ ಕಾಮಗಾರಿ ಕಾಮಗಾರಿ ನಡೆಯುತ್ತಿರುವಾಗ ಚತುಷ್ಪಥ ರಸ್ತೆಗೆ ಹತ್ತಿರವಿರುವುದರಿಂದ ಸರ್ವಿಸ್ ರಸ್ತೆ ಮಾಡಲೆಂದು ಕೆಲಸ ಬಾಕಿಯಿಡಲಾಗಿತ್ತು. ಇದರಿಂದ ಸಂಚಾರಿಗಳಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆದಷ್ಟು ಶೀಘ್ರ ಬಾಕಿ ಉಳಿದಿರುವ ಕಾಮಗಾರಿ ನಡೆಸಲಾಗುತ್ತದೆ.
– ನಾಗರಾಜ್, ರಾ.ಹೆ. ಎಂಜಿನಿಯರ್ ಸಮಸ್ಯೆ ಪರಿಹರಿಸಿ
ಈ ರಸ್ತೆಯನ್ನು ಕಳೆದ ವರ್ಷ ಉತ್ತಮವಾಗಿ ದುರಸ್ತಿಗೊಳಿಸಲಾಗಿತ್ತು. ಆದರೆ ಆರಂಭದಲ್ಲಿ ಸ್ವಲ್ಪ ಕಾಮಗಾರಿ ಬಾಕಿ ಉಳಿಸಿದ್ದರಿಂದ ಹೊಂಡ ಹಾಗೂ ಧೂಳಿನಿಂದಾಗಿ ವಾಹನ ಸವಾರರಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ನಾನು ಪ್ರತಿದಿನ ಬಾಕೂìರಿನಿಂದ ಕೋಟಕ್ಕೆ ಬೈಕ್‌ನ ಮೂಲಕ ಈ ರಸ್ತೆಯಲ್ಲಿ ಸಂಚರಿಸುತ್ತೇನೆ. ರಿಕ್ಷಾ ಚಾಲಕರು, ಕಾರು ಮುಂತಾದ ವಾಹನದವರಿಗೆ ಅವ್ಯವಸ್ಥೆಯಿಂದ ತುಂಬಾ ಸಮಸ್ಯೆಯಾಗುತ್ತದೆ. ರಸ್ತೆ ಸರಿಪಡಿಸುವಂತೆ ಊರಿನವರು ಹಲವು ಬಾರಿ ಮನವಿ ಮಾಡದ್ದಾರೆ. ತತ್‌ಕ್ಷಣ ದುರಸ್ತಿಪಡಿಸಿದರೆ ಉತ್ತಮ.
-ಶ್ರೀನಿವಾಸ್ ಬಾಕೂìರು, ವಾಹನ ಸವಾರರು