Advertisement

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

03:04 PM Oct 21, 2024 | Team Udayavani |

ಪಾಂಡೇಶ್ವರ: ಗೂಡ್‌ಶೆಡ್‌ನ‌ಲ್ಲಿರುವ ರೈಲು ತಂಗುದಾಣಕ್ಕೆ ತೆರಳುವ ರೈಲು ಹಳಿಯ ಪಾಂಡೇಶ್ವರ ಸಮೀಪ ಹಳಿ ಹಾಗೂ ಗೇಟ್‌ ದುರಸ್ತಿ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಬಂದ್‌ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸ್ಥಳೀಯ ವಾಹನ ಸವಾರರಿಗೆ ಇದರಿಂದ ಬಹಳಷ್ಟು ಅನನುಕೂಲವಾಗಿದ್ದು, ಸುತ್ತು ಬಳಸಿ ಸಂಚರಿಸ ಬೇಕಾದ ಅನಿವಾರ್ಯ ಎದುರಾಗಿದೆ.

Advertisement

ಶನಿವಾರ ರಾತ್ರಿ 8 ಗಂಟೆಯಿಂದ ಪಾಂಡೇಶ್ವರ ರೈಲ್ವೇ ಕ್ರಾಸಿಂಗ್‌ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅ. 22ರಂದು ಬೆಳಗ್ಗೆ 8 ಗಂಟೆಗೆ ಕಾಮಗಾರಿ ಪೂರ್ಣ ಗೊಂಡು ವಾಹನ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.

ರೈಲ್ವೇ ಗೇಟ್‌ ಕಾಮಗಾರಿ ಪೂರ್ಣ
ಕೆಲವು ತಿಂಗಳ ಹಿಂದೆ ಪಾಂಡೇಶ್ವರದ ರೈಲ್ವೇ ಗೇಟ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಗೇಟ್‌ಗೆ ಹಾನಿಯಾಗಿತ್ತು. ಬಳಿಕ ಗೇಟ್‌ ದುರಸ್ತಿಗೊಳಿಸಲಾಗಿತ್ತು. ಇದೀಗ ಗೇಟ್‌ನಲ್ಲಿ ಎದುರಾಗುವ ಇತರ ತಾಂತ್ರಿಕ ಸಮಸ್ಯೆ ನಿವಾರಿಸಿ ಸಣ್ಣ ಪುಟ್ಟ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಪೈಂಟಿಂಗ್‌ ನಡೆಸಲಾಗಿದೆ. ಪದೇ ಪದೇ ಗೇಟ್‌ನಲ್ಲಿ ಸಮಸ್ಯೆ ಎದುರಾಗಿ ಸಾರ್ವಜನಿಕರಿಗೆ ಸಮಸ್ಯೆ ನೀಡುವ ಬದಲು ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ರೈಲು ಹಳಿ ದುರಸ್ತಿ ಕಾಮಗಾರಿ
ರೈಲ್ವೇ ಗೇಟ್‌ ಸಮೀಪ ಹಳಿ ಅಲ್ಪ ಪ್ರಮಾಣದಲ್ಲಿ ಒಳಗೆ ಜಗ್ಗಿದೆ ಎನ್ನುವ ಕಾರಣ ದುರಸ್ತಿ ಕೆಲಸ ಶುರು ಮಾಡಲಾಗಿದೆ. ಪ್ರಸ್ತುತ ಹಳಿಯ ಜಲ್ಲಿ ಹಾಗೂ ಕಾಂಕ್ರಿಟ್‌ ಹಾಸುಗಳನ್ನು ತೆರವುಗೊಳಿಸಲಾಗಿದೆ. ಹಳಿ ತೆರವುಗೊಳಿಸಿ ದುರಸ್ತಿ ಕಾರ್ಯ ನಡೆಯಲಿದೆ. ಸುಮಾರು 200 ಮೀ.ನಷ್ಟು ಹಳಿ ದುರಸ್ತಿಗೊಳ್ಳಲಿದೆ.

Advertisement

ಪಾಲಿಕೆ ವತಿಯಿಂದ ದುರಸ್ತಿ
ರೈಲ್ವೇ ಗೇಟ್‌ ಸಮೀಪ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಹೊಂಡ ನಿರ್ಮಾಣಗೊಂಡು ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದೆ. ಈ ರಸ್ತೆ ದುರಸ್ತಿಗೊಳಿಸಲು ರೈಲ್ವೇ ಇಲಾಖೆಗೆ ಮನವಿ ಮಾಡಲಾಗಿದ್ದು, ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಉತ್ತರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಪಾಲಿಕೆಯಿಂದ ಅನುದಾನ ಬಳಸಿ ರಸ್ತೆಗೆ ಡಾಮರು ಅಳವಡಿಸಲಾಗುವುದು.
– ದಿವಾಕರ ಪಾಂಡೇಶ್ವರ, ಮಾಜಿ ಮೇಯರ್‌

ಪರ್ಯಾಯ ಮಾರ್ಗಗಳು
ಪ್ರಸ್ತುತ ಸವಾರರಿಗೆ ಹೊಗೆಬಜಾರ್‌ ಮೂಲಕ ತೇರಳಲು ಅವಕಾಶವಿದೆ. ಮತ್ತೂಂದೆಡೆ ಮಂಗಳಾದೇವಿ
ಕಡೆಯಿಂದ ನಂದಿಗುಡ್ಡ ಮೂಲಕ ಅತ್ತಾವರ, ಕಂಕನಾಡಿ ಮುಖೇನ ಸಂಚಾರ ನಡೆಸಲು ಪ್ರಸ್ತುತ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next