Advertisement

75 ಮಿಲಿಯನ್ ಭಾರತೀಯರು ಬಡತನ ರೇಖೆಯಿಂದ ಕೆಳಕ್ಕೆ : ಪ್ಯೂ ವರದಿ

10:26 AM Mar 21, 2021 | Team Udayavani |

ನವ ದೆಹಲಿ : ಕೋವಿಡ್ ಸಾಂಕ್ರಾಮಿಕ ಸೋಂಕಿನ ಕಾರಣದಿಂದಾಗಿ ಉಂಟಾದ ಆರ್ಥಿಕ ಹಿಂಜರಿತದಿಂದ 2020ರಲ್ಲಿ  ಸುಮಾರು 75 ಮಿಲಿಯನ್ (7.5 ಕೋಟಿ) ಭಾರತಿಯರು ಬಡತನ ರೇಖೆಯಿಂದ ಕೆಳಗಿಳಿಯುವ ಹಾಗೆ ಆಗಿದೆ ಎಂದು ಆಘಾತಕಾರಿ ವರದಿಯೊಂದು ಬಹಿರಂಗಪಡಿಸಿದೆ.

Advertisement

ಅಂತರಾಷ್ಟ್ರೀಯ ಪ್ಯೂ ಸಂಶೋಧನಾ ಕೇಂದ್ರ ನಡೆಸಿದ ಒಂದು ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದ್ದು ಕೋವಿಡ್ ಸೋಂಕು ಇಡೀ ಭಾರತದದ ನಾಗರಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಿದೆ ಎನ್ನುವುದನ್ನು ಎತ್ತಿ ತೊರಿಸಿದೆ.

ಓದಿ : ಹಸಿವಿನ ವ್ಯಾಪಾರದ ವಿರುದ್ಧ ನಾವುಗಳು ಹೋರಾಡುತ್ತಿದ್ದೇವೆ: ರಾಕೇಶ್ ಟಿಕಾಯತ್

ದೇಶದ ಸುಮಾರು 32 ಮಿಲಿಯನ್ (32 ಕೋಟಿ) ಮಧ್ಯಮ ವರ್ಗ ಕುಟುಂಬದ ಆರ್ಥಿಕ ಮಟ್ಟ ಕುಸಿದಿದೆ ಎಂದು ಪ್ಯೂ ಸಂಶೋಧನಾ ಕೇಂದ್ರದ ವಿಶ್ಲೇಷಣೆ ತಿಳಿಸಿದೆ.

ಭಾರತವನ್ನು ಚೀನಾ ದೇಶಕ್ಕೆ ಹೋಲಿಸಿದರೆ, ಭಾರತಕ್ಕಿಂತ ಚೀನಾ ಉತ್ತಮ ಸ್ಥಿತಿಯಲ್ಲಿದೆ. ಮಧ್ಯಮ ಆದಾಯದ ಶ್ರೇಣಿಯಲ್ಲಿನ ಜನರ ಸಂಖ್ಯೆ ಕೇವಲ 10 ಮಿಲಿಯನ್ (ಒಂದು ಕೋಟಿ) ರಷ್ಟು ಕಡಿಮೆಯಾಗಿದೆಎ ಎಂದು ಸಂಶೋಧನೆ ತನ್ನ ವರದಿಯಲ್ಲಿ ತಿಳಿಸಿದೆ.

Advertisement

ಕೋವಿಡ್ 19 ಸಾಂಕ್ರಾಮಿಕ ಸೋಂಕಿನ ಪೂರ್ವದಲ್ಲಿ ಅಂದರೇ, 2020 ರ ಭಾರತದಲ್ಲಿ 99 ದಶಲಕ್ಷ ಜನರು ಜಾಗತಿಕ ಮಧ್ಯಮ ವರ್ಗಕ್ಕೆ ಸೇರಿದ್ದರು. ಕೋವಿಡ್ ಸೋಂಕಿಗೆ ಈಗ ಒಂದು ವರ್ಷ ಪೂರೈಸಿದೆ, ದೇಶದಲ್ಲಿ ಮಧ್ಯಮ ವರ್ಗದವರ ಸಂಖ್ಯ ಗಣನೀಯವಾಗಿ ಏರಿಕೆಯಾಗಿದ್ದು, ಈಗ ಆ ಸಂಖ್ಯೆ 66 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಮೂರನೇ ಒಂದು ಭಾಗದಷ್ಟು ಕುಸಿತಗೊಂಡಿದೆ ಎಂದು ಪ್ಯೂ ಹೇಳಿದೆ.

ಏತನ್ಮಧ್ಯೆ, ಭಾರತದಲ್ಲಿ ಬಡವರ ಸಂಖ್ಯೆ 134 ಮಿಲಿಯನ್ (13.4 ಕೋಟಿ) ತಲುಪಿದೆ ಎಂದು ಅಂದಾಜಿಸಲಾಗಿದೆ ಎಂದು ಪ್ಯೂ ಸಂಶೋಧನಾ ಕೇಂದ್ರದ ವಿಶ್ಲೇಷಣೆ ವಿವರಿಸಿದೆ.

ಓದಿ : ಇಳಿವಯಸ್ಸಿನ ಏಕಾಂಗಿ ಸಾಹಸ : ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ

Advertisement

Udayavani is now on Telegram. Click here to join our channel and stay updated with the latest news.

Next