Advertisement

ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌

04:51 PM Jan 05, 2020 | Naveen |

ಪಾಂಡವಪುರ: ಪಟ್ಟಣದಲ್ಲಿ ನಡೆದ ವಿವಿಧ ಇಲಾಖೆಗಳ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಗೈರಾದ ನಿರ್ಮಿತಿ ಕೇಂದ್ರದ ಅಧಿಕಾರಿಗೆ ಶೋಕಾಸ್‌ ನೋಟಿಸ್‌ ನೀಡಿ ಕ್ರಮತೆಗೆದುಕೊಳ್ಳುವಂತೆ ಶಾಸಕ ಸಿ.ಎಸ್‌. ಪುಟ್ಟರಾಜು ತಾಪಂ ಇಒಗೆ ಸೂಚನೆ ನೀಡಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆಗೆ ನಿರ್ಮಿತಿ ಕೇಂದ್ರ ಅಧಿಕಾರಿ ಗೈರಾಗಿ ಸಿಬ್ಬಂದಿಯನ್ನು ಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕ ಪುಟ್ಟರಾಜು ನಿರ್ಮಿತಿ ಕೇಂದ್ರದ ಸಿಬ್ಬಂದಿಯನ್ನು ಸಭೆಯಿಂದ ಹೊರಗೆ ಹೋಗುವಂತೆ ಸೂಚಿಸಿ, ಅಧಿಕಾರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸುವಂತೆ ತಾಪಂ ಇಒಗೆ ಸೂಚಿಸಿದರು.

ಕಡ್ಡಾಯವಾಗಿ ಸಭೆಗೆ ಹಾಜರಾಗಿ: ಜನಸಾಮಾನ್ಯರ ಕುಂದು-ಕೊರತೆ ಬಗೆಹರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಪ್ರತಿ ಗ್ರಾಪಂನಲ್ಲೂ ಅಧಿಕಾರಿಗಳ ಸಭೆ ನಡೆಸಿ ಜನಸಾಮಾನ್ಯರ ಕೆಲಸ ಮಾಡಲಾಗುವುದು. ಮುಂದಿನ ಪ್ರತಿ ಮಂಗಳವಾರ ಗ್ರಾಪಂ
ಮಟ್ಟದಲ್ಲಿ ಸಭೆ ನಡೆಸಲಾಗುವುದು. ಸಭೆಗೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ತಿಳಿಸಿದರು.

ವಿ.ಸಿ. ನಾಲೆ ಆಧುನೀಕರಣ: ತಾಲೂಕಿನ ಕೆಲವು ಗ್ರಾಮಗಳಲ್ಲಿ ರಸ್ತೆ ಅಗಲೀಕರಣ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲವಿದ್ದು, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ತಹಶೀಲ್ದಾರ್‌ ಪ್ರಮೋದ್‌ಪಾಟೀಲ್‌ ಒತ್ತಡಗಳಿಗೆ ಒಳಗಾಗದೆ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಿ. ರಸ್ತೆಗಳ ಆಧುನೀಕರಣಕ್ಕೆ ಅವಕಾಶ ಮಾಡಿಕೊಡಿ, ತಾಲೂಕಿನ ಅರಳಕುಪ್ಪೆ-ಕಾರೇಕುರ ಬಳಿ ಕಾವೇರಿ ನದಿಗೆ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಭರದಿಂದ ಸಾಗುತ್ತಿದೆ. ಈ ರಸ್ತೆಗೆ ಭೂಮಿ ಬಿಡಿಸಿಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು, ರೈತರೊಂದಿಗೆ ಚರ್ಚಿಸಿ ಪರಿಹಾರ ನೀಡಿ ಭೂಮಿ ಮಂಜೂರು ಮಾಡಿಸಿಕೊಡಿ, ಅದೇ ರೀತಿ ತಾಲೂಕಿನಲ್ಲಿ ಸುಮಾರು
330 ಕೋಟಿ ವೆಚ್ಚದಲ್ಲಿ ವಿ.ಸಿ. ನಾಲೆ ಆಧುನೀಕರಣ ಮಾಡಲಾಗುತ್ತಿದೆ ಎಂದರು.

ನೀರಿನ ಘಟಕಗಳ ಬಗ್ಗೆ ಮಾಹಿತಿ ನೀಡಿ: ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಎಷ್ಟಿವೆ? ಅದರಲ್ಲಿ ಎಷ್ಟು ಘಟಕಗಳು ಪೂರ್ಣಗೊಂಡಿವೆ? ಎಷ್ಟು ಘಟಕದ ಕೆಲಸ ಪ್ರಗತಿಯಲ್ಲಿದೆ? ಇನ್ನೂ ಎಷ್ಟು ಆರಂಭಗೊಳ್ಳಬೇಕು? ಎಷ್ಟು ಸ್ಥಗಿತಗೊಂಡಿವೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು 2 ದಿನದೊಳಗಾಗಿ ನನಗೆ ಸಲ್ಲಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಯೋಜನೆ ಎಇಇ ಹನುಮಂತ ರಾಯಪ್ಪಗೆ ಸೂಚಿಸಿದರು.

Advertisement

ಕೃಷಿ ಇಲಾಖೆಯ ಕೃಷಿಯಂತ್ರೋಪಕರಣ ಯೋಜನೆಯಡಿ ಸಹಾಯ ಧನದಡಿ ಅರ್ಹ ಫಲಾನುಭವಿಗಳಿಗೆ ನೀಡಲಾಗುವ ಪವರ್‌ ಟಿಲ್ಲರ್‌ಯನ್ನು ರೈತ ನಾರಾಯಣಗೌಡ ಅವರಿಗೆ ಶಾಸಕರು ವಿತರಣೆ ಮಾಡಿದರು. ಈ ವೇಳೆ ಕೃಷಿ ಸಹಾಯಕ ನಿರ್ದೇಶಕಿ ಪ್ರಿಯದರ್ಶನಿ ಹಾಜರಿದ್ದರು.

ಜಿಪಂ ಸದಸ್ಯ ಸಿ.ಅಶೋಕ್‌, ತಿಮ್ಮೇಗೌಡ, ಎಚ್‌. ತ್ಯಾಗರಾಜು, ಅನುಸೂಯ, ತಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಎಸಿ ನಟರಾಜು, ತಹಶೀಲ್ದಾರ್‌ ಪ್ರಮೋದ್‌ ಪಾಟೀಲ್‌, ಇಒ ಮಹೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next