Advertisement

ಶಾಸಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ

01:39 PM Apr 27, 2021 | Team Udayavani |

ಪಾಂಡವಪುರ: ಕೋವಿಡ್‌-19 ಎರಡನೇ ಅಲೆಗೆ ತಾಲೂಕಿನಾದ್ಯಂತ ಜನಸಾಮಾನ್ಯರು ತತ್ತರಿಸಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುಸೋಮವಾರ 68 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಬ್ಬರು ಬಲಿಯಾಗಿದ್ದಾರೆ.

Advertisement

ತಾಲೂಕಿನಾದ್ಯಂತ ಒಟ್ಟು 432 ಮಂದಿ ಸೋಂಕಿ ತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟುಏಳು ಮಂದಿ ಜೀವತೆತ್ತಿದ್ದಾರೆ. ತಾಲೂಕಿನ ಬಳೇಅತ್ತಿಗುಪ್ಪೆಗ್ರಾಮದ ಮಲ್ಲಿಕಾರ್ಜುನ ಆರಾಧ್ಯ ಅವರು ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫ‌ಲಿಸದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಕೋವಿಡ್ ನಿಯಮಾನುಸಾರ ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್‌ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದ ನಿವಾಸಿಯಾಗಿದ್ದು, ಪಾಂಡವಪುರ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದ ಲಕ್ಷ್ಮಮ್ಮ ಅವರಿಗೆಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಉಪವಿಭಾಗೀಯ ಆಸ್ಪತ್ರೆ ಕೊರೊನಾ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫ‌ಲಿಸದೇ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ಶಾಸಕರಿಂದ ಅಂತ್ಯಸಂಸ್ಕಾರದ ಸಿದ್ಧತೆ: ಬಳೇಅತ್ತಿ ಗುಪ್ಪೆ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಆರಾಧ್ಯ ಕೋವಿಡ್ ದಿಂದ ಮೃತಪಟ್ಟಿದ್ದರಿಂದ ನಿಯಮಾನುಸಾರ ಗ್ರಾಮದ ಹೊರವಲಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಶಾಸಕ ಸಿ.ಎಸ್‌.ಪುಟ್ಟರಾಜು, ತಹಶೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌, ತಾಪಂ ಇಒಆರ್‌.ಪಿ.ಮಹೇಶ್‌ ಭೇಟಿ ನೀಡಿ ಅಂತ್ಯಸಂಸ್ಕಾರದ ಸಿದ್ಧತೆ ಪರಿಶೀಲಿಸಿದರು.

ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ತಾಲೂಕಿನ ಮಲ್ಲಿ ಕಾರ್ಜುನ ಆರಾಧ್ಯ ಮೃತಪಟ್ಟಿದ್ದರಿಂದ ಶವವನ್ನು ಪಾಂಡವಪುರಕ್ಕೆ ಸಾಗಿಸಲು ಶವ ಸಾಗಿಸುವ ವಾಹನ ಸಮಯಕ್ಕೆ ಸಿಗದ ಕಾರಣದಿಂದಾಗಿ ಅಂತ್ಯಸಂಸ್ಕಾರದ ಸಿದ್ಧತೆ ಸ್ಥಳದಲ್ಲಿದ್ದ ಶಾಸಕ ಸಿ.ಎಸ್‌.ಪುಟ್ಟರಾಜು ಅವರು ಮೈಸೂರಿನಿಂದಮುಕ್ತಿರಥ (ಶವ ಸಾಗಿಸುವ ತುರ್ತು ವಾಹನ) ಮೂರುತಿಂಗಳ ಕಾಲ ಬಾಡಿಗೆ ಆಧಾರದ ಮೇಲೆ ಬರುವಂತೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ತೀರ್ಮಾನಿಸಿದರು.

Advertisement

ತಹಶೀ‌ಲ್ದಾರ್‌ಗೆ ಸೂಚನೆ: ಕೋವಿಡ್ ದಿಂದ ಮೃತಪಟ್ಟ ಶವವನ್ನು ಪಾಂಡವಪುರ ತಾಲೂಕಿನಲ್ಲಿ ತುರ್ತುವಾಹನದವರೇ ನಿಯಮಾನುಸಾರ ಅಂತ್ಯ ಸಂಸ್ಕಾರ ಮಾಡುವಬಗ್ಗೆ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರೊಂದಿಗೆ ಚರ್ಚೆನಡೆಸಿ ತೀರ್ಮಾನಿಸುತ್ತೇನೆ. ಕ್ಷೇತ್ರದಲ್ಲಿ ಯಾವುದೇತೊಂದರೆ ಆಗದಂತೆ ಕ್ರಮ ಜರುಗಿಸಬೇಕು ಎಂದುಶಾಸಕರು ಸ್ಥಳದಲ್ಲಿದ್ದ ತಹಶೀಲ್ದಾರ್‌ ಪ್ರಮೋದ್‌ ಎಲ್‌ .ಪಾಟೀಲ್‌ ಅವರಿಗೆ ಸೂಚಿಸಿದರು. ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ,ಆರೋಗ್ಯದ ತುರ್ತು ಪರಿಸ್ಥಿತಿ ಉದ್ಭವವಾಗಿದೆ. ಎರಡನೇ ಅಲೆ ವೇಗವಾಗಿ ಹರಡುತ್ತಿದೆ.

ಸುಧಾರಣೆ: ತಾಲೂಕಿನ ವಳಗೆರೆ ದೇವರಹಳ್ಳಿಗ್ರಾಮದಲ್ಲಿ ಹೆಚ್ಚು ಕೋವಿಡ್ ಸೋಂಕಿತರು ಇರುವುದರಿಂದ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಸೋಮವಾರ ನಡೆದ ಕೋವಿಡ್ಪರೀಕ್ಷೆಯಲ್ಲಿ ಕೇವಲ 6 ಮಂದಿಗೆ ಪಾಸಿಟೀವ್‌ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next