Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಸಾನ್ನಿಧ್ಯವನ್ನು ಹರಿಹರ ಪಂಚಮ ಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ವಹಿಸುವರು. ಅಂದು ಬೆಳಿಗ್ಗೆ 8ಕ್ಕೆ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ಚನ್ನಮ್ಮನವರ ಮೂರ್ತಿಗೆ ಪೂಜೆ ಸಲ್ಲಿಸುವುದ ರೊಂದಿಗೆ ಕಿತ್ತೂರ ರಾಣಿ ಚನ್ನಮ್ಮಾಜಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು. 10 ಜಾನಪದ ಕಲಾ ತಂಡಗಳು, ಮಹಿಳೆಯರ ಪೂರ್ಣಕುಂಭದೊಂದಿಗೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದರು.
Related Articles
Advertisement
ಸಮಾವೇಶದ ಯಶಸ್ಸಿಗಾಗಿ ಕಳೆದ ಹತ್ತಾರು ದಿನಗಳಿಂದ ಜಿಲ್ಲೆಯ 7 ತಾಲೂಕುಗಳ 135 ಗ್ರಾಮಗಳಿಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಿ, ಸಭೆ ಮಾಡಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ತಾಲೂಕಿನಾದ್ಯಂತ ಮಹಿಳೆಯರ ಮನೆಗಳಿಗೆ ತೆರಳಿ ಅರಿಷಿಣ-ಕುಂಕುಮ, ಬಳೆ, ಅಡಕೆ- ವೀಳ್ಯದೆಲೆ ನೀಡಿ ಗೌರವದಿಂದ ಆಮಂತ್ರಿಸಲಾಗಿದೆ. ಲಕ್ಷ್ಮೇಶ್ವರ ಸುತ್ತಲಿನ ಹಾಗೂ ನೆರೆಯ ಕುಂದಗೋಳ ತಾಲೂಕಿನ ಜನರೂ ಆಗಮಿಸಲಿದ್ದಾರೆ.
ಒಟ್ಟಾರೆ, ಸಮಾವೇಶಕ್ಕೆ ವಿವಿಧ ಜಿಲ್ಲೆ, ತಾಲೂಕುಗಳಿಂದ 25 ಸಂಖ್ಯೆ ಜನ ಸೇರಲಿದ್ದಾರೆ. ಪಂಚಮಸಾಲಿ ಸಂಘದ ರೈತ ಘಟಕ, ಯುವ ಘಟಕ, ಮಹಿಳಾ ಘಟಕ, ನಗರ ಘಟಕ, ವಾರ್ಡ್ ಘಟಕ, ಗ್ರಾಮ ಘಟಕಗಳ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮಗಳ ಪಂಚಮಸಾಲಿ ಸಮಾಜದ ಗುರು-ಹಿರಿಯರು, ಮಹಿಳೆಯರು, ಯುವಕರು ಈ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆಯುವಲ್ಲಿ ಕಾರಣೀಭೂತರಾಗೋಣ ಎಂದರು.
ಈ ವೇಳೆ ವೀರೇಂದ್ರ ಕಟಗಿ, ಚನ್ನವೀರಪ್ಪ ದಾನಿ, ಮಾದೇವಪ್ಪ ಕಟಗಿ, ಪರಮೇಶ ಕಿತ್ಲಿ, ಮಂಜುನಾಥ ಗೌರಿ, ಸುನೀಲ ಮುಳಳುಂದ, ಬಸವರಾಜ ಗೋಡಿ, ಗಂಗಾಧರ ಗೋಡಿ, ಮಹಾಂತೇಶ ಗೋಡಿ, ಪ್ರಕಾಶ ಜಾವೂರ, ರಾಜು ಲಿಂಬಿಕಾಯಿ, ಮಂಜುನಾಥ ಕರಿಗೌಡ್ರ, ಬಸವರಾಜ ಮೇಟಿ, ನಾಗರಾಜ ಅಣ್ಣಿಗೇರಿ, ಗಂಗಾಧರ ಬೆಲ್ಲದ, ಗುರುನಾಥಗೌಡ ಪಾಟೀಲ, ಶೇಖಣ್ಣ ಹುರಕಡ್ಲಿ, ವಸಂತಗೌಡ ಬಾಗೇವಾಡಿ, ಪರಮೇಶ್ ಕಿತ್ಲಿ, ಸೋಮಣ್ಣ ಮುಳಗುಂದ, ಭರಮಪ್ಪ ಕೊಡ್ಲಿ, ಗಂಗಾಧರ ಗೋಡಿ, ಬಸವರಾಜ ಗೋಡಿ, ಪ್ರಕಾಶ ಜಾವೂರ, ಮುತ್ತು ಹೆಬ್ಟಾಳ, ಅನಿಲ ಹೆಬ್ಟಾಳ, ಶೇಖರಗೌಡ ನರಸಮ್ಮನವರ, ಬಸವಣ್ಣೆಪ್ಪ ಮತ್ತೂರ, ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.