Advertisement

ಗ್ರಾಮ ಪಂಚಾಯತ್ ಪ್ರವೇಶಕ್ಕೂ ಮೊದಲು ನೂತನ ಸದಸ್ಯನಿಂದ ದೀರ್ಘ ದಂಡ ನಮಸ್ಕಾರ

05:11 PM Dec 31, 2020 | Team Udayavani |

ಗಂಗಾವತಿ: ತಾಲೂಕಿನ ಹಣವಾಳ ಗ್ರಾ.ಪಂ. ಸದಸ್ಯ ಸೋಮಶೇಖರ್ ಸ್ವಾಮಿ ಕುಲಕರ್ಣಿ ಪ್ರಥಮ ಭಾರಿಗೆ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದು ಪ್ರಮಾಣ ಪತ್ರ ಪಡೆಯಲು ಗ್ರಾ.ಪಂ. ತೆರಳುವ ಸಂದರ್ಭದಲ್ಲಿ ದೀರ್ಘ ದಂಡ ನಮಸ್ಕಾರ ಹಾಕಿ ಗ್ರಾ.ಪಂ.ಪ್ರವೇಶ ಮಾಡುವ ಮೂಲಕ ಗಮನ‌ ಸೆಳೆದಿದ್ದಾರೆ.

Advertisement

ಎಂ.ಎ ಪದವೀಧರಾಗಿರುವ ಕುಲಕರ್ಣಿ ಗಂಗಾವತಿ ಕೊಲ್ಲಿ ನಾಗೇಶರಾವ್ ಸರಕಾರಿ ಮಹಾವಿದ್ಯಾಲಯ ಮತ್ತು ಕಲ್ಮಠ ಮಹಿಳಾಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ಬಾಲ್ಯದಿಂದಲೂ ಆರೆಸ್ಸೆಸ್ ಸ್ವಯಂಸೇವಕರಾಗಿದ್ದು ಪ್ರಥಮ ಭಾರಿಗೆ ಹಣವಾಳ ಗ್ರಾ.ಪಂ.ಸ್ಪರ್ಧೆ ಮಾಡಿ ಗೆಲುವು‌ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿಯಾಗಿದ್ದು ಮೋದಿಯವರು 2014 ರಲ್ಲಿ ‌ಸಂಸತ್ ಭವನ ಪ್ರವೇಶ ಮಾಡುವ ಮೊದಲು ಸಂಸತ್ ಭವನದ ಬಾಗಿಲಿಗೆ ನಮಸ್ಕರಿಸಿ ಪ್ರವೇಶ ಮಾಡಿದ್ದರು.

ಅದರಂತೆ ಸೋಮಶೇಖರ್ ಸ್ವಾಮಿ‌ ಕುಲಕರ್ಣಿ ತಮ್ಮ ಮನೆಯಿಂದ ಗ್ರಾ.ಪಂ.ವರೆಗೆ ದೀರ್ಘ ದಂಡ ನಮಸ್ಕಾರ ಹಾಕಿ‌ ಗ್ರಾ.ಪಂ. ಪ್ರವೇಶ ಮಾಡಿ‌‌ ತಾವು ಗೆದ್ದಿರುವ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

ಇದನ್ನೂ ಓದಿ:ತ್ರಾಸಿ: ಮದುವೆ ಮಂಟಪದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು!

ಸತ್ಯ ಪ್ರಮಾಣಿಕತೆಯಿಂದ ಜನರ ಸೇವೆ: ಈ ಸಂದರ್ಭದಲ್ಲಿ ಸೋಮನಾಥ ಸ್ವಾಮಿ ಉದಯವಾಣಿ ಜತೆ ಮಾತನಾಡಿ ಸತ್ಯ ಪ್ರಮಾಣಿಕತೆ ಜಾತ್ಯತೀತವಾಗಿ ಸರ್ವ ಜನರ ಪ್ರಗತಿ ಗ್ರಾಮೀಣಾಭಿವೃದ್ಧಿ ಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next