ಕುಣಿಗಲ್: ಗ್ರಾಮ ಪಂಚಾಯತ್ ಚುನಾವಣಾ ದಿನವೇ ಗ್ರಾ.ಪಂ. ಸದಸ್ಯ ಕಿಡ್ನಾಪ್ಮ ಆದ ಘಟನೆ ತಾಲೂಕಿನ ಹುಲಿಯೂರು ದುರ್ಗ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ನಿಡಸಾಲೆ ಗ್ರಾ.ಪಂ.ನ ಮಂಜುನಾಥ್ ಕಿಡ್ನಾಪ್ ಆದ ಗ್ರಾ.ಪಂ. ಸದಸ್ಯ.
ಇಂದು 11 ಗಂಟೆಗೆ ನಡೆಯಬೇಕಿದ್ದ ನಿಡಸಾಲೆ ಗ್ರಾ.ಪಂ. ಚುನಾವಣೆ.
ಕಳೆದ ಮೂರು ದಿನಗಳ ಹಿಂದೆ ಮಂಜುನಾಥ್ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದು, ನಿನ್ನೆ ರಾತ್ರಿ ಪ್ರವಾಸ ಮುಗಿಸಿ ನಿಡಸಾಲೆಗೆ ಬರುವಾಗ, ಎಡೆಯೂರಿನ ಧಾರ್ಣಿಕ ಹೋಟೆಲ್ ಬಳಿ ಊಟಕ್ಕೆ ತೆರಳಿದ್ದ ಸಂದರ್ಭ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಈತನನ್ನು ಕಿಡ್ನಾಪ್ ಮಾಡಿದ್ದರು.
ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಈತನನ್ನು ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂದು ನಡೆಯಬೇಕಿದ್ದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಮಂಜುನಾಥ್ ನನ್ನು ರಾಜರೋಷವಾಗಿ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋದ ಅಪರಿಚಿತರು. ಕಾಂಗ್ರೆಸ್ ನವರು ಕಿಡ್ನಾಪ್ ಮಾಡಿದ್ದಾರೆಂದು ಮಂಜುನಾಥ್ ಅಪ್ತರು ಹಾಗೂ ಸಂಬಂಧಿಕರು ಆರೋಪ ವ್ಯಕ್ತಪಡಿಸಿದ್ದಾರೆ.