Advertisement

State Govt: ಸರ್ಕಾರದ ಬಳಿಯೇ ಇದೆ ಪಂಚಾಯತ್‌ ಅಧಿಕಾರ!

01:18 PM Dec 30, 2024 | Team Udayavani |

ಬೆಂಗಳೂರು: ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಯಲ್ಲಿ ತಾನು ಮುಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರೂ ವಾಸ್ತವದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಕಾನೂ ನುಯುತವಾಗಿ ಸಿಗಬೇಕಾಗಿರುವ ಅಧಿಕಾರ, ಅನು ದಾನ, ಆಡಳಿತ ವ್ಯವಸ್ಥೆ, ಸಿಬ್ಬಂದಿ ನೇಮಕ ಅಧಿಕಾರ, ಸಿಬ್ಬಂದಿ ಸಂಖ್ಯೆ, ನಿಧಿಗಳ ವರ್ಗಾವಣೆ ಮುಂತಾದ ಆಡಳಿತಾ ತ್ಮಕವಾಗಿ ಪ್ರಮುಖ ವಾಗಿ ರುವ ಅಂಶಗಳನ್ನು ಒದಗಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ.

Advertisement

ಈ ಬಗ್ಗೆ 2017- 22ರ ಅವಧಿಯ 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಕುರಿತ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿ ಶೋಧಕರ ವರದಿಯು (ಸಿಎಜಿ) ಬೊಟ್ಟು ಮಾಡಿ ತೋರಿಸಿದೆ. ಸರ್ಕಾರಗಳ ಆಡಳಿತ ವಿಕೇಂದ್ರಿಕರಣದ ಮಾತುಗಳು ವಾಸ್ತವದಲ್ಲಿ ಜಾರಿಯಾಗಿಲ್ಲ. ಆದ್ದರಿಂದ ಸ್ಥಳೀ ಯ ಸಂಸ್ಥೆಗಳು ಕಾನೂನು ಬದ್ಧವಾಗಿ ಪಡೆಯಬೇಕಾದ ಅಧಿಕಾರದಿಂದ ವಂಚಿತವಾಗಿದ್ದು, ಸರ್ಕಾರವು ಪಂಚಾಯತ್‌ ರಾಜ್‌ ಸಂಸ್ಥೆಗಳ ಮೇಲೆ ಸವಾರಿ ಮಾಡುತ್ತಿರುವುದನ್ನು ಸಿಎಜಿ ವರದಿ ಉಲ್ಲೇಖೀಸಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತಿ ರಾಜ್‌ ಕಾಯ್ದೆಯಡಿ (ಕೆಪಿಆರ್‌ ಕಾಯ್ದೆ) 29 ಕರ್ತವ್ಯಗಳ ಪೈಕಿ ಜಿಪಂಗೆ 26, ತಾಪಂಗೆ, ಗ್ರಾಪಂಗೆ 28 ಕರ್ತವ್ಯಗಳನ್ನು ವರ್ಗಾಯಿಸಲಾಗಿದೆ. ಈ ಕಾರ್ಯ ಗಳಲ್ಲಿ ವಾಸ್ತವದಲ್ಲಿ ಪಂಚಾಯತ್‌ಗಳು ಕನಿಷ್ಠ ಪಾತ್ರ ಅಥವಾ ಪಾತ್ರವನ್ನೇ ಹೊಂದಿಲ್ಲ. ಕಾಯ್ದೆ ಕೆಲ ಕರ್ತವ್ಯ ಗಳಲ್ಲಿ ನಿರ್ದಿಷ್ಟ ಪಾತ್ರ ಪಂಚಾಯತ್‌ಗೆ ಕಡ್ಡಾಯ ವಾಗಿ ನೀಡಿದ್ದರೂ ಜಾರಿಗೆ ಬಂದಿಲ್ಲ ಎಂದು ಸಿಎಜಿ ಹೇಳಿದೆ.

ರಾಜ್ಯ ಸರ್ಕಾರದ ಕೈಯಲ್ಲಿ ಅಧಿಕಾರ!: ಪಂಚಾ ಯತ್‌ ರಾಜ್‌ ಸಂಸ್ಥೆಗಳ ಕರ್ತವ್ಯಗಳ ಮೇಲಿನ ಅಧಿಕಾರ‌ವನ್ನು ರಾಜ್ಯ ಸರ್ಕಾರವೇ ಉಳಿಸಿಕೊಂಡಿದೆ. ಕರ್ತ ವ್ಯಗಳ ವರ್ಗಾವಣೆಗೆ ಸಾಕಷ್ಟು ಹಣಕಾಸಿನ ನೆರವನ್ನು ನೀಡಲಾಗಿಲ್ಲ. ಇದರ ಜೊತೆಗೆ ಪಂಚಾಯತ್‌ ಗಳಿಗೆ ಹಂಚಿಕೆ ಮಾಡಿದ ನಿಧಿಯ ಬಹುಪಾಲು ವೇತನಕ್ಕೆ ಸಲ್ಲುತ್ತದೆ ಎಂದು ಸಿಎಜಿ ಆಕ್ಷೇಪಿಸಿದೆ. ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳು ಮತ್ತು ಜಿಲ್ಲಾ ಯೋಜನಾ ಸಮಿತಿಗಳು ಸರಿಯಾಗಿ ರಚನೆಯಾಗಿಲ್ಲ. ಅಭಿವೃದ್ಧಿ ಯೋಜನೆಗಳ ಅನುಷ್ಠಾನ ದಲ್ಲಿ ಪ್ರಮುಖ ಪಾತ್ರ ವಹಿಸಬೇಕಿರುವ ಸ್ಥಾಯಿ ಸಮಿತಿಗಳು ನಿಗದಿತ ರೀತಿಯಲ್ಲಿ ಕಾರ್ಯನಿರ್ವಹಿ ಸುತ್ತಿಲ್ಲ. 31 ಜಿಲ್ಲೆಗಳ ಪೈಕಿ 4 ಜಿಲ್ಲೆಯಲ್ಲಿ ಮಾತ್ರ ಕುಂದುಕೊರತೆ ಪ್ರಾಧಿಕಾರವನ್ನು ರಚಿಸಲಾಗಿದೆ.

ಗ್ರಾಮ ಪಂಚಾಯತ್‌ಗಳು ವಾರ್ಷಿಕ ಲೆಕ್ಕ ಪತ್ರಗಳನ್ನು ತಯಾರಿಸಲು ಮಾದರಿ ಪಂಚಾಯಿತಿ ಲೆಕ್ಕಪತ್ರ ವ್ಯವಸ್ಥೆಯನ್ನು ಇನ್ನೂ ಅಳವಡಿಸಿಕೊಂಡಿಲ್ಲ. ಸಾಮಾಜಿಕ ಲೆಕ್ಕ ಪರಿಶೋಧನೆ ಕೆಲವು ಯೋಜನೆಗಳಿಗೆ ಮಾತ್ರ ಸೀಮಿತವಾಗಿದ್ದು, ಹೊಣೆಗಾರಿಕೆ ಮತ್ತು ಚಟುವಟಿಕೆ ಹಂಚಿಕೆ ನಕ್ಷೆ ಅಪೂರ್ಣವಾಗಿದೆ. ಸರಿಯಾದ ಸಮಯಕ್ಕೆ ಚುನಾವಣೆಗಳು ಸಹ ನಡೆಯುತ್ತಿಲ್ಲ ಎಂದು ರಾಜ್ಯದ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿನ ಲೋಪಗಳ ಸರಮಾಲೆಯನ್ನೇ ಸಿಎಜಿ ಬಿಚ್ಚಿಟ್ಟಿದೆ.

Advertisement

ಪಂಚಾಯತ್‌ಗಳಿಗೆ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ. ಅನುದಾನ ಹಂಚುವಾಗ ರಾಜ್ಯ ಹಣಕಾಸು ಆಯೋಗದ ಶಿಪಾರಸಿಗೆ ಸರ್ಕಾರ ಮನ್ನಣೆ ನೀಡುತ್ತಿಲ್ಲ. ಅನುದಾನ ಬಿಡುಗಡೆಯಲ್ಲಿ ಕಡಿತ ಮಾಡಲಾಗುತ್ತದೆ. ಪಂಚಾಯತ್‌ಗಳಿಗೆ ತಮ್ಮ ನಿಧಿಯನ್ನು ಬಳಸಿಕೊಳ್ಳುವ ಸ್ವಾತಂತ್ರವನ್ನು ನಿಧಿಯ ಅಸಮರ್ಪಕ ಹಂಚಿಕೆಯ ಮೂಲಕ ಮೊಟಕು ಮಾಡಲಾಗಿದೆ. ರಾಜ್ಯ ಸರ್ಕಾರ ಆಸ್ತಿ ತೆರಿಗೆ ಮಂಡಳಿ ಯನ್ನು ಸ್ಥಾಪಿಸಿಲ್ಲ. ಜೊತೆಗೆ ಪಂಚಾಯತ್‌ಗಳಿಗೆ ಸ್ವಂತ ಆದಾಯ ಮೂಲ ಹೊಂದಲು ಸೂಕ್ತ ಕಾನೂನು ನೆರವು ನೀಡಲು ಸರ್ಕಾರ ವಿಫ‌ಲವಾಗಿದೆ. ಸಿಬ್ಬಂದಿ ನೇಮಕಾತಿಯಲ್ಲಿ ಸೂಕ್ತ ಅಧಿಕಾರ ಪಂಚಾಯತ್‌ಗಳ ಬಳಿಯಿಲ್ಲ. ಸಿಬ್ಬಂದಿ ಕೊರತೆ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿಎಜಿ ವಿವರಿಸಿದೆ. ಮಣ್ಣಿನ ಸಂರಕ್ಷಣೆ ಸೇರಿದಂತೆ ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಮುಂತಾದ ಪ್ರಮುಖ ಕರ್ತವ್ಯಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಗಿದ್ದರೂ ಅವುಗಳಿಗೆ ಒದಗಿಸಲಾಗದ ಹಣ ಅಭಿವೃದ್ಧಿ ಕಾರ್ಯಕ್ಕಿಂತ ಹೆಚ್ಚು ವೇತನಕ್ಕೆ ಬಳಕೆಯಾಗಿದೆ. ಬಿಡುಗಡೆಯಾದ ಹಣದ ಶೇ.70 ರಿಂದ ಶೇ. 90 ರಷ್ಟು ಹಣ ವೇತನಕ್ಕೆ ಹೋಗಿದೆ ಎಂದು ಸಿಎಜಿ ಬಹಿರಂಗ ಪಡಿಸಿದೆ.

ಸರ್ಕಾರದಿಂದಲೇ ಫ‌ಲಾನುಭವಿಗಳ ಆಯ್ಕೆ: ಫ‌ಲಾನುಭವಿಗಳ ಆಯ್ಕೆಯನ್ನು ರಾಜ್ಯ ಸರ್ಕಾರವೇ ನಡೆ ಸುತ್ತಿದೆ. ಕೇಂದ್ರ ಪ್ರಾಯೋಜಿತ ಪೋಷಣ್‌ ಅಭಿ ಯಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ, ರಾಷ್ಟ್ರೀಯ ಜಾನುವಾರು ಮಿಷನ್‌, ರಾಷ್ಟ್ರೀಯ ತೋಟ ಗಾರಿಕೆ ಮಿಷನ್‌, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಮುಂತಾದ 66 ಯೋಜನೆಗಳನ್ನು ಪಂಚಾಯತ್‌ಗಳಿಗೆ ವರ್ಗಾಯಿಸಲಾಗಿದ್ದರೂ ರಾಜ್ಯ ವಲಯವೇ ಅನುಷ್ಠಾನ ಮಾಡುತ್ತಿದೆ.

ಇನ್ನು ರಾಜ್ಯ 450 ಯೋಜ ನೆಯನ್ನು ಪಂಚಾಯತ್‌ಗೆ ವರ್ಗಾಯಿಸಿ ದ್ದರೂ 337 ಯೋಜನೆ ರಾಜ್ಯ ವಲಯದಿಂದಲೇ ನಡೆಯುತ್ತಿವೆ. ಸರ್ಕಾರವು ಗ್ರಾ.ಪಂ ಮಟ್ಟದಲ್ಲಿ ಕೋರ್‌ ಸಮಿತಿ ರಚನೆಗೆ ಅವಕಾಶ ನೀಡಿದ್ದರೂ ಕೋರ್‌ ಸಮಿತಿ ರಚನೆ ಆಗಿಲ್ಲ. ತಾ.ಪಂ. ಮಾಸಿಕ ಸಭೆ ನಡೆಸಿಲ್ಲ, ಕೋರ್‌ ಕಮಿಟಿ ರಚನೆ ಆಗಿಲ್ಲ. ಪಂಚಾಯತ್‌ ಮಟ್ಟದಲ್ಲಿ ನಡೆಯುತ್ತಿರುವ ಕೆಲಸಗಳ ಮೇಲ್ವಿಚಾರಣೆ ಸರಿಯಾಗಿ ಆಗುತ್ತಿಲ್ಲ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ರಾಕೇಶ್‌ ಎನ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next