ಬೆಂಗಳೂರು: ವಿಧಾನ ಪರಿಷತ್ ವಿಶೇಷ ಅಧಿವೇಶನದ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಇಂದು ಸಭಾಪತಿಗೆ ಸಲ್ಲಿಸಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಮರಿತಿಬ್ಬೆಗೌಡ, ಘಟನೆಗೆ ಸಂಬಂಧಿಸಿದಂತೆ ಐದು ಸಭೆಗಳನ್ನು ಮಾಡಲಾಗಿದೆ. ಪರಿಷತ್ ಕಾರ್ಯದರ್ಶಿ, ಪಿ.ಆರ್. ರಮೇಶ್, ಮಾರ್ಷಲ್ ಗೆ ನೊಟಿಸ್ ನೀಡಿ ಅವರ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ ಎಂದರು.
ಉಪ ಸಭಾಪತಿಯಾಗಿದ್ದ ಧರ್ಮೇಗೌಡರ ಡೆತ್ ನೋಟ್ ಕೂಡ ಪರಿಶೀಲಿಸಲು ತೀರ್ಮಾನಿಸಲಾಗಿದೆ. ಇಂತಹ ಪ್ರಕರಣದಲ್ಲಿ ಬೇರೆ ರಾಜ್ಯಗಳು ಯಾವ ರೀತಿಯ ತೀರ್ಮಾನ ತೆಗೆದುಕೊಂಡಿದ್ದವು ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಇದನ್ನೂ ಓದಿ:‘ಯುಪಿಎಸ್ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ
ಘಟನೆಯ ಬಗ್ಗೆ ಸಭಾಪತಿಗಳಿಗೆ ಪತ್ರ ಬರೆದಿರುವ ಹಿರಿಯರು, ಪತ್ರಕರ್ತರ ಹೇಳಿಕೆಗಳನ್ನು ಪಡೆಯಲು ಸಮಿತಿ ಬಯಸಿದೆ. ಇಷ್ಟೆಲ್ಲ ಮಾಹಿತಿ ಪಡೆಯಲು ಸಮಿತಿಗೆ ಕಾಲಾವಕಾಶ ಬೇಕು. ಎಲ್ಲರ ಅಭಿಪ್ರಾಯ ಬಯಸುವುದು ಸಮಂಜಸವಾಗಿದ್ದು, ಇಪ್ಪತ್ತು ದಿನದಲ್ಲಿ ಪೂರ್ಣ ಮಾಹಿತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಈಗ ಮಧ್ಯಂತರ ವರದಿ ಸಲ್ಲಿಕೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ನಮಗೆ ಸಾಕ್ಷ್ಯ ಆಧಾರಗಳು ಅಗತ್ಯ ಎಂದು ಸಮಿತಿ ಬಯಸಿದೆ. ವಾರ್ತಾ ಇಲಾಖೆ, ವೆಬ್ ಕಾಸ್ಟ್, ಹಾಗೂ ಟಿವಿಗಳಲ್ಲಿ ಬಂದಿರುವ ಮಾಹಿತಿ ಆಧರಿಸಿ ಮಧ್ಯಂತರ ವರದಿ ನೀಡಲಾಗುತ್ತಿದೆ. ಇದೀಗ 84 ಪುಟಗಳ ಮಧ್ಯಂತರ ವರದಿ ನೀಡಲಾಗುತ್ತಿದೆ ಎಂದು ಮರಿತಿಬ್ಬೆಗೌಡ ಹೇಳಿದರು.