Advertisement

ಪಂಚಾಯತ್‌ ವಾಣಿಜ್ಯ ಸಂಕೀರ್ಣ ಏಲಂ ನಡೆಸಲು ಆಗ್ರಹ

02:35 AM Jul 11, 2017 | Team Udayavani |

ಕುಂಬ್ರ: ಒಳಮೊಗ್ರು ಗ್ರಾಮ ಸಭೆ ಕುಂಬ್ರ ನವೋದಯ ಸಭಾ ಭವನದಲ್ಲಿ ಪಂಚಾಯತ್‌ ಅಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಪೇಟೆಯ ಪಂಚಾ ಯತ್‌ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಅಂಗಡಿ ಕೋಣೆಗಳ ಏಲಂ ಅವಧಿ ಮುಗಿದರೂ ಮತ್ತೆ ಏಲಂ ಯಾಕೆ ನಡೆಸಿಲ್ಲ. ಇದರಿಂದ ಜನರಿಗೆ ನಷ್ಟವಾಗುತ್ತಿದೆ. ಗ್ರಾ.ಪಂ.  ಖಜಾನೆಗೆ ತುಂಬಬೇಕಾದ ಆದಾಯ ತುಂಬುತ್ತಿಲ್ಲ. ಪೇಟೆಯಲ್ಲಿ ಹೆಚ್ಚು ಬೇಡಿಕೆ ಇರುವ ವಾಣಿಜ್ಯ ಸಂಕೀರ್ಣ ಇದು ಎಂದು ಹರಿಪ್ರಸಾದ್‌ ರೈ ಹೇಳಿದರು.

ಅಂಗಡಿ ಏಲಂ ವಿಚಾರಕ್ಕೆ ಧ್ವನಿ ಗೂಡಿಸಿದ ಮಹಮ್ಮದ್‌ ಶೇಖಮಲೆ, ಪಂಚಾಯತ್‌ ಆಡಳಿತ ಅಭಿವೃದ್ಧಿಯ ಕಡೆ ಗಮನ ನೀಡದೇ ಕೇವಲ ಕೆಲವರ ಲಾಭಕ್ಕೆ ಸಹಕಾರ ನೀಡುತ್ತದೆ ಎಂದು ಗಂಭೀರ ಆರೋಪ ಮಾಡಿದರು. ಕಳೆದ  ವರ್ಷವೇ ಏಲಂ ಅವ ಧಿ ಮುಕ್ತಾಯವಾಗಿತ್ತು. ಪಂಚಾಯತ್‌ ಸಾರ್ವಜನಿಕ ಕೆಲಸಕ್ಕೆ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಪ್ರಶ್ನೆಗೆ ಉತ್ತರಿಸಿದ ಪಂಚಾಯತ್‌ ಅಧ್ಯಕ್ಷ ಯತಿರಾಜ್‌ ರೈ ಮತ್ತು ಪಿಡಿಓ ಗೀತಾ, ಪಂಚಾಯತ್‌ಗೆ ಒಳಪಟ್ಟ ವಾಣಿಜ್ಯ ಸಂಕೀರ್ಣದ ವ್ಯಾಜ್ಯವೊಂದು ಕೋರ್ಟ್‌ ನಲ್ಲಿ ಇದೆ. ಆದ್ದರಿಂದ ಎರಡನ್ನು ಒಂದೇ ಬಾರಿಗೆ ಏಲಂ ಮಾಡಲಾಗುವುದು ಎಂದರು. ಇದಕ್ಕೆ ಆಕ್ಷೇಪಿಸಿದ ಹಲವರು, ಕೋರ್ಟ್‌ ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನವಾಗಲಿ. ಉಳಿದ ಅಂಗಡಿ ಕೋಣೆ ಏಲಂ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು, ಪಿಡಿಒ ಶೀಘ್ರ ಏಲಂನ ಭರವಸೆ ನೀಡಿದರು. ಚರ್ಚೆಯಲ್ಲಿ ಸಂತೋಷ್‌ ಭಂಡಾರಿ, ಮಹಮ್ಮದ್‌ ಕುಟ್ಟಿನೋಪಿನಡ್ಕ ಮತ್ತಿತರರು ಭಾಗವಹಿಸಿದ್ದರು.

ಶಾಲೆಯಲ್ಲಿ ಶಿಕ್ಷಕರ ಕೊರತೆ
ಗ್ರಾಮದ ಕುಟ್ಟಿನೋಪಿನಡ್ಕ ಮತ್ತು ಪಪುìಂಜ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಮಹಮ್ಮದ್‌ ಮತ್ತು ರಾಜೇಶ್‌ ರೈ ಪಪುìಂಜ ಹೇಳಿದರು. ಕುಟ್ಟಿನೋಪಿನಡ್ಕ ಸರಕಾರಿ ಶಾಲೆಯ ಅಡುಗೆ ಕೋಣೆ ಸಂಪೂರ್ಣ ಶಿಥಿಲಗೊಂಡು ಸೋರುತ್ತಿದೆ ಎಂದು ದೂರು ನೀಡಿದರು. ಇದಕ್ಕೆ ಶಿಕ್ಷಣ ಇಲಾಖಾ ಧಿಕಾರಿ ಉತ್ತರಿಸಿ, ಸ್ಥಳೀಯ ದಾನಿಗಳ ಸಹಕಾರದಿಂದ ಅಭಿವೃದ್ಧಿ ಪಡಿಸಲು ಸೂಚಿಸಿದರು.

ರಸ್ತೆ ಸುರಕ್ಷತಾ ನಿಯಮವಿಲ್ಲ
ಶೇಕಮಲೆ ದಬೇìತ್ತಡ್ಕ ಸಂಪರ್ಕ ರಸ್ತೆಯ ಶೇಖಮಲೆಯಲ್ಲಿ ಜಿ.ಪಂ.ನ ರಸ್ತೆ ಸುರಕ್ಷತಾ ನಿಯಮದ ಪ್ರಕಾರ ರಸ್ತೆ ನಿರ್ಮಾಣವಾಗಿಲ್ಲ. ಅಧಿಕಾರಿಗಳು ಸುರಕ್ಷತಾ ನಿಯಮದ ಕುರಿತು ಕಾಳಜಿ ವಹಿಸಿಲ್ಲ ಎಂದು ಮಹಮ್ಮದ್‌ ಶೇಖಮಲೆ ಆರೋಪಿಸಿದರು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೀದಿ ದೀಪವನ್ನು ಜಿ.ಪಂ. ರಸ್ತೆ ಬಿಟ್ಟು ರಾಜ್ಯ ಹೆದ್ದಾರಿಗೆ ಹಾಕಲಾಗಿದೆ ಎಂದು ಗ್ರಾಮಸ್ಥರು ಆರೋಪಿದರು. ಚರ್ಚೆಯಲ್ಲಿ ರಾಜೇಶ್‌ ಪಲ್ಲತ್ತಾರು, ವಿನೋದ್‌ ಶೆಟ್ಟಿ ಮುಡಾಲ, ಮಹಮ್ಮದ್‌ ಪಾಲ್ಗೊಂಡಿದ್ದರು.

Advertisement

ಸಭೆಯ ಮಾರ್ಗದರ್ಶಿ ಅಧಿ ಕಾರಿಯಾಗಿ ಡಾ| ಸುರೇಶ್‌ ಭಟ್‌ ಮಾಹಿತಿ ನೀಡಿದರು. ಪಂಚಾಯತ್‌ ಉಪಾಧ್ಯಕ್ಷೆ ಸುನಂದಾ, ತಾ.ಪಂ. ಸದಸ್ಯ ಹರೀಶ್‌ ಬಿಜತ್ರೆ, ಸದಸ್ಯರಾದ ಮಹೇಶ್‌ ರೈ ಕೇರಿ, ಶೀನಪ್ಪ ನಾಯ್ಕ, ಶಶಿಕಿರಣ್‌ ರೈ ನೂಜಿಬೆ„ಲು, ಸುಂದರಿ, ತ್ರಿವೇಣಿ, ಚಂದ್ರಕಲಾ, ವಸಂತಿ ಆರ್‌ ಶೆಟ್ಟಿ, ಉಷಾ ನಾರಾಯಣ, ಬಾಗೀರಥಿ ಸೇರಿದಂತೆ ವಿವಿಧ ಇಲಾಖಾ ಅಧಿ ಕಾರಿಗಳು ಮಾಹಿತಿ ನೀಡಿದರು. ಪಿಡಿಒ ಗೀತಾ ವಿವಿಧ ಮಾಹಿತಿ ನೀಡಿದರು.

ದಬೇìತ್ತಡ್ಕಕ್ಕೆ ಬಸ್‌ ಬರುತ್ತಿಲ್ಲ
ದಬೇìತ್ತಡ್ಕಕ್ಕೆ ಉಪ್ಪಳಿಗೆಯಾಗಿ ನಿತ್ಯ ಬರುತ್ತಿದ್ದ ಸರಕಾರಿ ಬಸ್‌ ಅರ್ಧದಲ್ಲೆ ತಿರುಗಿ ಹೋಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಬಸ್‌ ಎಂದಿನಂತೆ ಸಂಚರಿಸಬೇಕು. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದು ರಮೇಶ್‌ ಸುವರ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next