Advertisement
ಪಂಚ ಪಕ್ಷಿಶಾಸ್ತ್ರದ ಆಧಾರದ ಮೇಲೆ ನಿಮ್ಮ ಅಮೃತ ಗಳಿಗೆಯಲ್ಲಿ ತುಂಬಿದ ಕಾಯಿ ತಂದು ದರ್ಶನ ಮಾಡಿ, ದೇವರಲ್ಲಿ ಬೇಡಿಕೆ ಸಲ್ಲಿಸಿ, ಕಾಯಿಯನ್ನು ದೇಗುಲದಲ್ಲಿಟ್ಟು, ಎಡಗಡೆಯಿಂದ 5 ಬಾರಿ ಪ್ರದಕ್ಷಿಣೆ ಹಾಕಬೇಕು. ಒಟ್ಟು 41 ದಿನಗಳ ಒಳಗೆ 3 ಬಾರಿ ದರ್ಶನ ಮಾಡಿದರೆ, ನೀವು ಅಂದುಕೊಂಡ ಕೆಲಸ ಆಗುವುದು ಶತಸಿದ್ಧ. ಆಗ ನೀವಿಟ್ಟ ಕಾಯಿ ಹೊಡೆಯಿಸಿ, ಬಲಗಡೆಯಿಂದ 5 ಬಾರಿ ದರ್ಶನ ಮಾಬೇಕು. ಆರೋಗ್ಯ, ಉದ್ಯೋಗ, ಸಂತಾನ ಫಲ.. ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಈ ಮಾರುತೇಶ್ವರನಲ್ಲಿ ನಂಬಿಕೆ ಇಟ್ಟು, ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಬೇಡಿಕೊಂಡರೆ ಸರ್ವ ಸಮಸ್ಯೆಗಳೂ ನಿವಾರಣೆ ಆಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಇಂಥ ದಿವ್ಯ ಶಕ್ತಿ, ಶ್ರೀ ಪಂಚಪಕ್ಷಿ$ ಮಾರುತೇಶ್ವರನಿಗಿದೆ. ಈತ ಇರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಎಸ್. ಗಂಗನಹಾಳ ಎಂಬಲ್ಲಿ.
ಹೀಗೆ ಸಾವಿರಾರು ಭಕ್ತರ ಇಷ್ಟಾರ್ಥ, ಕೋರಿಕೆಗಳನ್ನು ಈಡೇರಿಸುವ ಪಂಚಪಕ್ಷಿ$ ಮಾರುತಿ ಮೂಲತಃ ಉದ್ಭವ ಮೂರ್ತಿ. ದಕ್ಷಿಣಾಭಿಮುಖವಾಗಿ ನಿಂತಿರುವ ಈ ಪಂಚಪಕ್ಷಿ ಮಾರುತಿ ದೇಗುಲ, ಮೂಲತಃ ವಿಜಯನಗರದ ಕೃಷ್ಣ ದೇವರಾಯ ಕಾಲದ್ದು. ತಾತಾ ತಿರುಮಲಾಚಾರ್ಯರು ನಿರ್ಮಿಸಿದ್ದು. ಕಾಲಾ ನಂತರದಲ್ಲಿ ಇದು ಅವಸಾನ ಹೊಂದಿತ್ತು. ಗಂಗನಹಾಳದ ಶುಕುರ್‌ಭಾಷ ಶರಣರ ಶಿಷ್ಯ ದಿ. ರುದ್ರಗೌಡ ಶರಣರು ಇದರ ಪುನರ್ ನಿರ್ಮಾತೃಗಳು!. ಪಂಚಪಕ್ಷಿ$ ಸಮಯ ಅಂದರೆ ಅಮೃತ ಗಳಿಗೆಯಲ್ಲಿ ಮಾತ್ರ ಈ ದೇಗುಲ ನಿರ್ಮಾಣ ಮಾಡಿದ್ದು. ಈ ಗಳಿಗೆಯಲ್ಲಿ ಮೊದಲನೆಯದಾಗಿ ವಿಶ್ವವಿಖ್ಯಾತ ಜಗನ್ನಾಥ ಪುರಿ ದೇಗುಲ ಕಟ್ಟಲಾಗಿದೆ. ಅದನ್ನು ಬಿಟ್ಟರೆ, ಅಮೃತ ಗಳಿಗೆಯಲ್ಲಿ ನಿರ್ಮಾಣವಾಗಿರುವ ದೇವಾಲಯ ಇದೊಂದೇ ಎನ್ನುತ್ತದೆ ಇತಿಹಾಸ. ಹೀಗಾಗಿ, ದೇಗುಲದ ಕಟ್ಟಡ ಕಾರ್ಯ ಪೂರ್ಣಗೊಳ್ಳಲಿಕ್ಕೆ 11 ವರ್ಷಗಳೇ ಬೇಕಾಯಿತಂತೆ. ಈ ದೇಗುಲದ ಆವರಣದಲ್ಲಿ ಈ ಗುರು-ಶಿಷ್ಯರ ಸಮಾಗಮ ಸನ್ನಿಧಿ ಇದ್ದು, ಇದಕ್ಕೆ ನಿತ್ಯವೂ ಪೂಜೆ-ಪುನಸ್ಕಾರಗಳು ಸಲ್ಲುತ್ತವೆ. ಆ ಕಾರಣದಿಂದ ಈ ದೇವಾಲಯವು ಹಿಂದೂ-ಮುಸ್ಲಿàಂ ಭಾವೈಕ್ಯತೆಯ ತಾಣವೂ ಆಗಿದೆ. ಧರ್ಮ, ಜಾತಿ ಬೇಧವಿಲ್ಲದೆ ಎಲ್ಲರೂ ದರ್ಶನಕ್ಕೆ ಬರುವುದು ವಿಶೇಷ. ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಮಹಾಮಂಗಳಾರತಿ ನಡೆಯುತ್ತದೆ. ಪ್ರತಿ ಶನಿವಾರ, ಅಮಾವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಆಗ ವಿಶೇಷ ಅಲಂಕಾರ ಇರುತ್ತೆ. ಕಾರ್ತಿಕ ಮಾಸದ ಚಟ್ಟಿ ಅಮಾವಾಸ್ಯೆಯಲ್ಲಿ ರಥೋತ್ಸವ ಜರುಗುತ್ತದೆ. ಪ್ರತಿ ಶನಿವಾರ ದೇಗುಲದ ಆವರಣದಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿಯ ಪ್ರದಕ್ಷಿಣೆ, ಜಾತ್ರೆ ಸಂದರ್ಭದಲ್ಲಿ ಊರಲ್ಲಿ ಪಲ್ಲಕ್ಕಿ ಹೋಗುವ ಸಂಪ್ರದಾಯ ಇದೆ. ಭಕ್ತರ ಕಾರ್ಯಸಿದ್ಧಿ ಆದರೆ ದೇವರಿಗೆ ಬೆಳ್ಳಿ, ದವಸ-ಧಾನ್ಯ, ಹಣವನ್ನು ಕಾಣಿಕೆ ಆಗಿ ನೀಡುತ್ತಾರೆ. ಭಕ್ತರು ಪುಷ್ಪಾಲಂಕಾರ, ದೀಡ್ ನಮಸ್ಕಾರ ಸೇವೆ ಮಾಡುತ್ತಾರೆ. ದೇಗುಲದ ಆವರಣದಲ್ಲಿ ಸುಂದರವಾದ ಈಶ್ವರ ದೇಗುಲವೂ ಇದೆ. ನಿತ್ಯ ಮಠದಲ್ಲಿ ಅನ್ನ ದಾಸೋಹ ನಡೆಯುತ್ತದೆ. ಭಕ್ತರು ಜವಳ, ನಾಮಕರಣ… ಮಂಗಳ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. “ಪಂಚಪಕ್ಷಿ ಟ್ರಸ್ಟ್, ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತದೆ.
Related Articles
ಲಿಂಗಸೂರು-ಗಂಗಾವತಿ ಮುಖ್ಯ ಹೆದ್ದಾರಿಯಿಂದ ಸುಮಾರು 4 ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ. ಕೊಪ್ಪಳ ಕಡೆಯಿಂದ ಬರುವವರು ಗಂಗನಹಾಳ ಕ್ರಾಸ್‌ಗೆ, ಸಿಂಧನೂರು ಕಡೆಯಿಂದ ತಾವರಗೇರಾಗೆ ಬಂದರೆ ಸರಕಾರಿ ಬಸ್ಸು ಮತ್ತು ಖಾಸಗಿ ವಾಹನಗಳು ಸಿಗುತ್ತವೆ.
Advertisement
ಸ್ವರೂಪಾನಂದ ಎಂ.ಕೊಟ್ಟೂರು