Advertisement
ಮೊದಲನೆ ದಿನ ಕಾರ್ಕಳದ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಕಲಾ ಮಂಡಳಿಯ ಸದಸ್ಯರು ಅಧ್ಯಕ್ಷೆ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ತುಳುನಾಡ ಬಲಿಯೇಂದ್ರೆ ತುಳು ತಾಳಮದ್ದಲೆಯನ್ನು ಪ್ರದರ್ಶಿಸಿದರು. ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡ ಸುಶ್ರಾವ್ಯ ಭಾಗವತಿಕೆಯಿಂದ ರಂಜಿಸಿದರು. ಕಥಾನಾಯಕ ಬಲಿ ಚಕ್ರವರ್ತಿಯಾಗಿ ಜ್ಯೋತಿ ಶೆಟ್ಟಿ ಗಾಂಭೀರ್ಯಯುತವಾಗಿ ನಿರರ್ಗಳವಾದ ಪ್ರಸ್ತುತಿಯೊಂದಿಗೆ ನಿರ್ವಹಿಸಿದರೆ ಇತರ ಸದಸ್ಯರು ಜಯಶ್ರೀ ಕೆ.ಎ. ಶೆಟ್ಟಿ, ವನಿತಾ ಅಮರೇಶ್ ಹೆಗಡೆ, ಶಾಲಿನಿ ಡಿ. ಆಳ್ವ ಹಾಗೂ ವೃಂದಾ ಹರಿಪ್ರಕಾಶ ಶೆಟ್ಟಿ ಇವರೆಲ್ಲರೂ ಪುರಾಣ ಪ್ರಸಂಗ ವಿಷಯಕ್ಕೆ ತಕ್ಕುದಾದ ಪ್ರೌಢ ತುಳು ಭಾಷಾ ಶೈಲಿಯೊಂದಿಗೆ ಒಂದು ಅತ್ಯುತ್ತಮ ತುಳು ಪ್ರಸಂಗದ ಪ್ರಸ್ತುತಿಯನ್ನು ನೀಡಿದರು. ಪೆರ್ಲ ಗಣಪತಿ ಭಟ್ ಹಾಗೂ ಶಿವಪ್ರಸಾದ ಪುನರೂರು ಹಿಮ್ಮೇಳದಲ್ಲಿ ಸಹಕರಿಸಿದ್ದರು.
Related Articles
Advertisement
ಐದನೇ ದಿನದ ಸುದರ್ಶನ ವಿಜಯ ಪ್ರಸಂಗವು ಕಲಾವಿದರ ಶ್ರೇಷ್ಠ ಮಟ್ಟದ ನಿರ್ವಹಣೆಯೊಂದಿಗೆ ಪರಿಣಾಮಕಾರಿಯಾಗಿ ಮೂಡಿಬಂತು.ಕು| ಕಾವ್ಯಾಶ್ರೀ ಮಾಧುರ್ಯಭರಿತ ಕಂಠದಿಂದ ಸುಶ್ರಾವ್ಯವಾಗಿ ಹಾಡಿದರೆ, ಹಿಮ್ಮೇಳದಲ್ಲಿ ಅಜೇರು ಶ್ರೀಪತಿ ನಾಯಕ್ ಹಾಗೂ ಗಣೇಶ್ ಭಟ್ ಸಹಕಾರ ಇತ್ತರು. ವಿಷ್ಣುವಾಗಿ ಸುಲೋಚನಾ ವಿ.ರಾವ್, ಲಕ್ಷ್ಮೀಯಾಗಿ ದೀಪ್ತಿ ಬಾಲಕೃಷ್ಣ ಭಟ್, ಸುದರ್ಶನನಾಗಿ ಕು| ವೃಂದಾ, ಶತ್ರು ಪ್ರಸೂದನನಾಗಿ ಮಂಗಳೂರಿನ ಪೂರ್ಣಿಮಾ ಶಾಸ್ತ್ರಿ, ರೇವತಿ ನವೀನ್ ಹಾಸ್ಯದ ಪಾತ್ರದಲ್ಲಿ, ದೇವೇಂದ್ರನಾಗಿ ಕಲಾವತಿ ಉತ್ತಮ ಪಾತ್ರ ಪೋಷಣೆಗೈದರು. ಆರನೇ ದಿನ ಹಿಮ್ಮೇಳಕ್ಕೆ ಅರ್ಜುನ್ ಕೊರ್ಡೆಲ್ ಭಾಗವತರಾಗಿ, ಅವಿನಾಶ್ ಬೈಪಾಡಿತ್ತಾಯ ಮದ್ದಳೆಯಲ್ಲಿ ವೇಣುಗೋಪಾಲ ಮಾಂಬಾಡಿ ಚೆಂಡೆಯಲ್ಲಿ ಜೊತೆಗೆ ಹರಿ ನಾರಾಯಣ ಬೈಪಾಡಿತ್ತಾಯ ಉತ್ತಮ ಮಟ್ಟದ ಹಿಮ್ಮೇಳ ಒದಗಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ ರಾಯಭಾರ ಪ್ರಸಂಗದಲ್ಲಿ ಪುತ್ತೂರಿನ ಧೀಶಕ್ತಿ ಬಳಗದ ಪದ್ಮಾ ಆಚಾರ್ ಶ್ರೀ ಕೃಷ್ಣನಾಗಿ, ಜಯಲಕ್ಷ್ಮೀ ಭಟ್ ಕೌರವನಾಗಿ, ವೀಣಾ ನಾಗೇಶ ತಂತ್ರಿ ವಿಧುರನಾಗಿ, ಧರ್ಮರಾಯನಾಗಿ ಕೆ. ಕಲಾವತಿ, ದ್ರೌಪದಿಯಾಗಿ ಮಂಗಳಾ ಸಹಕಾರವಿತ್ತರು. ಏಳನೇ ದಿನ ಬೆಂಗಳೂರಿನ ತಂಡ ಉತ್ತಮ ಹಿಮ್ಮೇಳವನ್ನೊಗಿಸಿತು. ಅಗ್ರಪೂಜೆ ಪ್ರಸಂಗದಲ್ಲಿ ಶ್ರೀ ಕೃಷ್ಣನಾಗಿ ಸುಲೋಚನಾ ರಾವ್, ಜಯಂತಿ ಹೊಳ್ಳ ಶಿಶುಪಾಲನಾಗಿ, ದೀಪ್ತಿ ಭಟ್ ದಂತವಕ್ರನಾಗಿ , ಭೀಷ್ಮನಾಗಿ ಆಕೃತಿ ಭಟ್, ಧರ್ಮರಾಯನಾಗಿ ಕಲಾವತಿ, ಭೀಮನಾಗಿ ನಳಿನಿಮೋಹನ್, ಪಾತ್ರೋಚಿತವಾಗಿ ಮಾತನಾಡಿದರು. ಯಕ್ಷಪ್ರಿಯ