Advertisement
ಪ್ರತಿ ವರ್ಷ ಮಾರ್ಚ್‌ನಲ್ಲಿ ನಡೆಯುತ್ತಿದ್ದ ದೊಡ್ಡ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು.ಆದರೆ, ಕಳೆದ ವರ್ಷ ಲಾಕ್‌ಡೌನ್ ಘೋಷಿಸಿದ್ದರಿಂದ ಜಾತ್ರೆಯನ್ನು ರದ್ದುಪಡಿಸಲಾಗಿತ್ತು.
Related Articles
Advertisement
ಈ ನಡುವೆ, ಭಕ್ತರು ಹಾಗೂ ಸ್ಥಳೀಯರು ಈ ಬಾರಿ ಗೌತಮ ಪಂಚ ಮಹಾ ರಥೋತ್ಸವ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ಶುಕ್ರವಾರ ಭಕ್ತರ ಬೇಡಿಕೆಗೆ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು, ಜಿಲ್ಲಾಧಿಕಾರಿ ತೀರ್ಮಾನವೇ ಅಂತಿಮ ಅಲ್ಲ. ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚಿಸಿ, ದೊಡ್ಡ ತೇರು ನಡೆಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಾರಿಕೆ ಉತ್ತರ ನೀಡಿದ್ದರು. ಆದರೆ, ಈ ಹೇಳಿಕೆ ನೀಡಿ 3 ದಿನ ಕಳೆದರೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸಚಿವರ ನಡೆಯಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
ನಂಜನಗೂಡಿನ ಗೌತಮ ಪಂಚ ಮಹಾ ರಥೋತ್ಸವ ಹೇಗೆ, ಏನು ಎಂಬ ಕುರಿತು ಶ್ರೀಕಂಠೇಶ್ವರನ ಭಕ್ತ ಸಮೂಹದಲ್ಲಿ ಗೊಂದಲ ಮೂಡಿಸಿರುವುದಂತೂ ನಿಜ.
ಎಲ್ಲಾದರೂ ಸರಿ ಉತ್ಸವ: ಶ್ರೀಕಂಠೇಶ್ವರನ ಪಂಚ ಮಹಾರಥೋತ್ಸವ ಕಳೆದ ವರ್ಷ ಲಾಕ್‌ಡೌನ್‌ನಿಂದದೇವಾಲಯದ ಒಳಾವರಣಕ್ಕೆ ಮಾತ್ರ ಸೀಮಿತಗೊಳಿಸಿ, ಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಈ ವರ್ಷ ಈಗಾಗಲೆ ರಥೋತ್ಸವದ ಧಾರ್ಮಿಕ ಪ್ರಕ್ರಿಯೆ ಗಳು ಆರಂಭವಾಗಿದ್ದು, ಹೊರ ಆವರಣವಾದರೂಸರಿ ಒಳ ಆವರಣವಾದರೂ ಸರಿ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಹಾಗೂ ದೇವಾಲಯದಅಧಿಕಾರಿಗಳ ಅಣತಿಯ ಮೇರೆಗೆ ನಡೆಸಲಾಗುವುದು ಎಂದು ಇಲ್ಲಿನ ಅರ್ಚಕ ಸಮೂಹ ತಿಳಿಸಿದೆ.
ಹೊರ ತಾಲೂಕು, ಹೊರ ಜಿಲ್ಲೆಯವರಿಗೆ ನಿಷೇಧ : ಕೋವಿಡ್ 2ನೇ ಅಲೆ ತಡೆಗೆ ಮಾ.26ರಂದುನಡೆಯಬೇಕಿದ್ದ ಗೌತಮ ಪಂಚ ಮಹಾರಥೋತ್ಸವವನ್ನುರದ್ದುಪಡಿಸಲಾಗಿದೆ. ಆದರ ಬದಲು ಅಂದುದೇವಾಲಯದ ಹೊರಆವರಣದಲ್ಲಿ ಚಿಕ್ಕತೇರಿನಲ್ಲಿ ಸಾಂಕೇತಿಕವಾಗಿ ಉತ್ಸವ ನಡಸ
ಬೇಕು. ದೇಗುಲದಅರ್ಚಕರು, ಸಿಬ್ಬಂದಿ, ಗಣ್ಯರು, ಸ್ಥಳೀಯರನ್ನು ಹೊರತು ಪಡಿಸಿ ಹೊರ ತಾಲೂಕು ಹಾಗೂ ಹೊರ ಜಿಲ್ಲೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ವಿಧಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಧಾರ್ಮಿಕ ಕೈಂಕರ್ಯಗಳೊಂದಿಗೆ ಜಾತ್ರೆ ನಡೆಸಬೇಕು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸುತ್ತೋಲೆ ಹೊರಡಿಸಿದ್ದಾರೆ.
ದೊಡ್ಡ ತೇರಿಲ್ಲ, ಚಿಕ್ಕ ತೇರಿನಲ್ಲಿ ನಡೆಸಲು ಅನುಮತಿ :
ಶ್ರೀಕಂಠೇಶ್ವರನ ಪಂಚ ಮಹಾರಥೋತ್ಸವವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿಲ್ಲ. ದೊಡ್ಡ ತೇರಿಗೆಅವಕಾಶವಿಲ್ಲ. ಮಾ.26ರಂದು ಶ್ರೀಕಂಠೇಶ್ವರಹಾಗೂ ದೇವಿ ಪಾರ್ವತಿ (ಮನೋನ್ಮಣಿ)ಗಣಪತಿ, ಸುಬ್ರಹ್ಮಣ್ಯ ಹಾಗೂ ಚಂಡೀಕೇಶ್ವರರರನ್ನು ಪ್ರತ್ಯೇಕ ರಥ(ಚಿಕ್ಕ ತೇರುಗಳಲ್ಲಿ )ಪ್ರತಿಷ್ಠಾಪಿಸಿ ರಥಬೀದಿಯಲ್ಲೇ ರಥೋತ್ಸವ ನಡೆಸಲಾಗುವುದು. ರಥೋತ್ಸವದ ಅಂಗವಾಗಿಹಮ್ಮಿಕೊಳ್ಳಬೇಕಾಗಿರುವ ಅಂಕುರಾರ್ಪಣೆಸಹಿತ ಎಲ್ಲ ಧಾರ್ಮಿಕ ಕಾರ್ಯಕ್ರಮಗಳುಈಗಾಗಲೇ ಆರಂಭವಾಗಿವೆ. ಶಾಸ್ತ್ರ ಹಾಗೂಸಂಪ್ರದಾಯಕ್ಕೆ ಚ್ಯುತಿ ಯಾಗದಂತೆ ಸರ್ಕಾರದನಿಯಮಾವಳಿಗಳಿಗೂ ಧಕ್ಕೆ ಬಾರದಂತೆ ಜಾತ್ರೆಯಲ್ಲಿ ನಡೆಸಲಾಗುವುದು ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
– ಶ್ರೀಧರ್ ಆರ್.ಭಟ್