Advertisement

ಮನೆಗಳಿಗೆ ತೆರಳಿ ಪದ ಹೇಳುವ ಪಾಣಾರರು

02:50 AM Jul 04, 2019 | sudhir |

ಬಸ್ರೂರು: ಚೌತಿ, ನವರಾತ್ರಿ, ದೀಪಾವಳಿ ಮೊದ ಲಾದ ಹಬ್ಬಗಳ ಸಮಯದಲ್ಲಿ ಪಾಣಾರರು ಮನೆ ಮನೆಗೆ ತೆರಳಿ ಮನೆಯ ಹೊರಗೆ ನಿಂತು ವೇಷ ಕಟ್ಟಿ ಪದ ಹೇಳುವ ಕ್ರಮ ನಮ್ಮಲ್ಲಿ ರೂಢಿಯಲ್ಲಿತ್ತು. ಆದರೆ ಈ ಪದ್ಧತಿ ನಶಿಸಿದ್ದು, ಇಲ್ಲೊಬ್ಬರು ಮಾತ್ರ ಇದನ್ನು ಮುಂದುವರಿಸುತ್ತಿದ್ದಾರೆ. ಅಂಥ ವರಲ್ಲೊಬ್ಬರು ವಾಲ್ತೂರಿನ ನಾಗರಾಜ ಪಾಣಾರ ಅವರು.

Advertisement

ಪಾಣಾರರು ಪದ ಹೇಳು ವುದನ್ನೇ ಕಾಯಕವನ್ನಾಗಿಸಿದ್ದು, ಕಾಲಾಂ ತರದಲ್ಲಿ ಕುಲಕಸುಬು ಬಿಟ್ಟು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಆದ್ದರಿಂದ ಈ ಸಂಪ್ರದಾಯ ಬಹುತೇಕ ನಶಿಸಿದೆ.

ಗ್ರಾಮೀಣ ಪ್ರದೇಶದ ರೈತರ ಮನೆಗಳಿಗೆ ತೆರ‌ಳುವ ಪಾಣಾರರು ಕನ್ನಡದಲ್ಲೇ ವಿವಿಧ ಜನಪದ ಗೀತೆಗಳನ್ನು ಹಾಡುತ್ತಾರೆ. ಇವುಗಳಲ್ಲಿ ಬಣಜಿನ ಶೆಟ್ಟಿ, ಕಥೆ, ಕುತ್ಯಮ್ಮನ ಹಾಡುಗಳು ಸೇರಿವೆ. ತಮ್ಮದೇ ಶೈಲಿಯ ಉಡುಗೆಗಳನ್ನು ತೊಟ್ಟು 15 ನಿಮಿಷ ಪದ ಹಾಡಿದ ಬಳಿಕ ಮನೆಯಾತ ಕೊಡುವ ಭತ್ತ, ಅಕ್ಕಿ, ಇಲ್ಲವೇ ಹಣವನ್ನು ಸ್ವೀಕರಿಸುತ್ತಾರೆ.

ವಾಲ್ತೂರು ಸಮೀಪದ ಹಳನಾಡು, ಕಂಡ್ಲೂರು, ಬಳ್ಕೂರು ಗುಲ್ವಾಡಿ ಮತ್ತಿತರ ಕೃಷಿ ಕುಟುಂಬಗಳ ಮನೆಗೆ ಪಾಣಾರರು ಪದ ಹೇಳಲು ಹೋಗುತ್ತಾರೆ. ಸದ್ಯ ಕುಂದಾಪುರ ಭಾಗದಲ್ಲಿ ವಾಲ್ತೂರಿನ ನಾಗರಾಜ ಪಾಣಾರ ಮತ್ತು ಅವರ ಪುತ್ರ ಸತೀಶ ಅವರು ಮಾತ್ರ ಇದನ್ನು ಮುಂದುವರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next