Advertisement

Panamburu ವಿದ್ಯಾರ್ಥಿಯ ಸಾವು: ಸಿಬಿಐ ತನಿಖೆ ಮುಂದುವರಿಕೆ

01:07 AM Jan 13, 2024 | Team Udayavani |

ಪಣಂಬೂರು: ತಣ್ಣೀರುಬಾವಿ ಬೀಚ್‌ಗೆ ಹೋಗುವ ದಾರಿಯಲ್ಲಿ ಹತ್ತು ವರ್ಷಗಳ ಹಿಂದೆ ಬೈಕ್‌ ಅಪಘಾತಕ್ಕೀಡಾಗಿ ಮೃತಪಟ್ಟ ಕೇರಳ ಮೂಲದ ವಿದ್ಯಾರ್ಥಿ ರೋಹಿತ್‌ ರಾಧಾಕೃಷ್ಣನ್‌ ಸಾವು ಅಪಘಾತವಲ್ಲ, ಕೊಲೆ ಎಂದು ಪೋಷಕರು ಕೇಸು ದಾಖಲಿಸಿದ ಬಳಿಕ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಕಳೆದ ಮೂರ್‍ನಾಲ್ಕು ತಿಂಗಳಲ್ಲಿ ಸತತ ನಾಲ್ಕು ಬಾರಿ ಸಿಬಿಐ ಅಧಿಕಾರಿಗಳು ಸ್ಥಳದ ತನಿಖೆ ಮುಂದುವರಿಸಿದ್ದಾರೆ.

Advertisement

2014ರ ಮಾರ್ಚ್‌ 23ರ ತಡರಾತ್ರಿ ನಡೆದ ಈ ಅಪಘಾತವನ್ನು ಕಂಡ ಪೋಷಕರು ಇದು ಅಪಘಾತವಲ್ಲ, ಕೊಲೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು, ಕೋರ್ಟ್‌ ಆದೇಶದಂತೆ ಸಿಬಿಐ ತನಿಖೆ ಮುಂದುವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next