Advertisement
ಬೈಕಂಪಾಡಿ – ಕೂಳೂರು ನಡುವಿನ 3 ಕಿ.ಮೀ. ಉದ್ದದ ಸೇತುವೆ ಇದಾಗಲಿದ್ದು, 400 ಕೋಟಿ ರೂ. ವೆಚ್ಚವಾಗುವ ಅಂದಾ ಜಿದೆ. ಕೇಂದ್ರದ ಸಾಗರಮಾಲ, ರಾಜ್ಯ ಸರಕಾರ ಹಾಗೂ ಎನ್‌ಎಂಪಿಟಿ ಸಂಯುಕ್ತ ವಾಗಿ ಇದನ್ನು ನಿರ್ಮಾಣ ಮಾಡುವ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ.
ಕೇಂದ್ರದ ಸಾಗರಮಾಲಾ ಯೋಜನೆಯಡಿಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ವಾಗಲಿದೆ. ಸುರತ್ಕಲ್ – ಮಂಗಳೂರು ನಡುವೆ ನಿರಾ ತಂಕವಾಗಿ ವಾಹನಗಳು ಸಂಚರಿಸಲು ಅನುಕೂಲವಾಗಲಿದೆ. ನವಮಂಗಳೂರು ಬಂದರು ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಬಳಿಕ ಪ್ರಾಥಮಿಕ ಹಂತದ ಕೆಲಸಗಳಿಗೆ ಚಾಲನೆ ನೀಡಲಾಗಿದೆ.
ರಾ.ಹೆ. 66ರಲ್ಲಿ ಸಂಚರಿಸುವ ವಾಹನ, ಘನ ವಾಹನಗಳ ನಿತ್ಯ ಸಂಚಾರಕ್ಕೆ ಸಂಬಂಧಿ ಸಿದಂತೆ ಅಂಕಿ-ಅಂಶಗಳನ್ನು ಲೆಕ್ಕ ಹಾಕಿ, ಭೂ ಧಾರಣ ಸಾಮರ್ಥ್ಯದ ಬಗ್ಗೆ ವರದಿ ಪಡೆ ಯಲು ಕ್ರಮ ಕೈಗೊಂಡಿದ್ದೇವೆ. ಸ್ಮಾರ್ಟ್ ಸಿಟಿಯ ನಡುವೆ ಸ್ಮಾರ್ಟ್ ಓಡಾಟಕ್ಕೂ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ. ಈಗ ಪ್ರಥಮ ಹೆಜ್ಜೆಯನ್ನು ಇಡಲಾಗಿದ್ದು, ಸರಕಾರದ ಅನುಮತಿ ಬಳಿಕ ಅಂತಿಮ ನಿರ್ಧಾರವಾಗಲಿದೆ ಎನ್ನುತ್ತಾರೆ ಎನ್‌ಎಂಪಿ ಟಿಯ ಮುಖ್ಯ ಎಂಜಿನಿಯರ್ ಹರಿನಾಥ್.
Related Articles
ಬೈಕಂಪಾಡಿ – ಕೂಳೂರು ವರೆಗೆ ಮೇಲ್ಸೇತುವೆ ನಿರ್ಮಾಣದಿಂದ ಉಡುಪಿ – ಮಂಗಳೂರು ನಡುವೆ ನೇರ ಸಂಚಾರ ಮಾಡುವವರಿಗೆ ಅನುಕೂಲವಾಗಲಿದೆ. ಸಾಗರಮಾಲ ಯೋಜನೆಯಡಿ ಇದನ್ನು ನಿರ್ಮಿಸುವ ಚಿಂತನೆ ನಡೆದಿದೆ.
– ಡಾ| ವೆಂಕಟರಮಣ ಅಕ್ಕರಾಜು, ಚೇರ್ಮನ್, ಎನ್‌ಎಂಪಿಟಿ
Advertisement