Advertisement
6 ಮಂದಿ ಕಾರ್ಮಿಕರು ಎಣ್ಣೆ ಟ್ಯಾಂಕ್ ಬಳಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು.ಪೌಲ ಟ್ಯಾಂಕ್ ಮೇಲೆ ಇದ್ದುದರಿಂದ ಒಮ್ಮೆಲೆ ಬೆಂಕಿ ಕೆನ್ನಾಲಿಗೆ ಆವರಿಸಿ ತೀವ್ರ ಸುಟ್ಟ ಗಾಯಕ್ಕೊಳಗಾಗಿ 20 ಅಡಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡರು. ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪಣಂಬೂರು: 62 ತೋಕೂರು ನಿವಾಸಿ ರಾಧಾ (53) ಅವರು ಜ.9ರಂದು ಮನೆಯಿಂದ ನಾಪತ್ತೆಯಾಗಿರುತ್ತಾರೆ. ಸುಮಾರು 12 ವರ್ಷಗಳಿಂದ ಮನೋರೋಗದಿಂದ ಬಳಲುತ್ತಿದ್ದ ರಾಧಾ ಚಿಕಿತ್ಸೆ ಪಡೆಯುತ್ತಿದ್ದು, ರಾಧಾ ಅವರ ಮಗ, ಮಗಳು ಕೆಲಸಕ್ಕೆ ಹೋಗುತ್ತಿದ್ದು ಸಂಜೆ ಬಂದಾಗ ತಾಯಿ ಮನೆಯಲ್ಲಿಲ್ಲದಿರುವುದನ್ನು ಕಂಡು ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಮನೆಯವರು ಪಣಂಬೂರು ಪೋಲಿಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಚಹರೆ: ಸಾಧಾರಣ ಮೈಬಣ್ಣ, ಹಸಿರು ಮತ್ತು ಕೆಂಪು ಬಣ್ಣ ಮಿಶ್ರಿತ ನೈಲನ್ ಸೀರೆ, ಕಪ್ಪುಬಣ್ಣದ ಬ್ಲೌಸ್ ಧರಿಸಿದ್ದು, ಕನ್ನಡ ತುಳು ಭಾಷೆ ಮಾತನಾಡುತ್ತಾರೆ.