Advertisement

Panambur ಸ್ವಚ್ಛತೆಯ ಪಾಠ ಮನೆಯಿಂದ ಪ್ರಾರಂಭವಾಗಲಿ: ಡಿಸಿ ಮುಗಿಲನ್‌

11:42 PM Sep 16, 2023 | Team Udayavani |

ಪಂಣಬೂರು: ಮಾಲಿನ್ಯ ತಡೆಗಟ್ಟುವ ಅರಿವು ನಮ್ಮ ನಮ್ಮ ಮನಸ್ಸು, ಮನೆಯಿಂದ ಆರಂಭವಾದಾಗ ಇಂತಹ ಬೃಹತ್‌ ಸ್ವಚ್ಛತೆಯ ಅಭಿಯಾನ ನಡೆಸುವ ಉದ್ದೇಶ ಬರಲಾರದು. ಜಾಗೃತಿ ನಮ್ಮಿಂದಲೇ ಆರಂಭವಾಗಲಿ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

Advertisement

ಪಣಂಬೂರು ಬೀಚ್‌ನಲ್ಲಿ ಶನಿವಾರ ಕೋಸ್ಟ್‌ಗಾರ್ಡ್‌ ವತಿಯಿಂದ ಜಿಲ್ಲಾಡಳಿತ, ಎನ್‌ಎಂಪಿಎ,ಎಂಆರ್‌ಪಿಎಲ್‌ ಸಹಿತ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ನಡೆದ “ಸ್ವಚ್ಛ ಸಾಗರ್‌ ಸುರಕ್ಷಿತ್‌ ಸಾಗರ್‌’ ಅಭಿಯಾನದಲ್ಲಿ ಅವರು ಮಾತನಾಡಿದರು.

ಸ್ವಚ್ಛತೆಯನ್ನು ನಮ್ಮ ಜೀವನ ದಲ್ಲಿ ಅವಿಭಾಜ್ಯ ಅಂಗವಾಗಿ ರೂಢಿಸಿಕೊಂಡು ಮನೆ, ಊರು, ಗ್ರಾಮವನ್ನು ಸ್ವಚ್ಚವಾಗಿಡಲು ಕೈ ಜೋಡಿಸುವುದು ಕೂಡ ದೇಶಪ್ರೇಮವೇ ಆಗಿದೆ. ವಿದ್ಯಾ ರ್ಥಿಗಳು ಇದನ್ನು ಇಂದಿನಿಂದಲೇ ರೂಢಿಸಿಕೊಳ್ಳುವಂತಾಗಬೇಕು ಎಂದರು.

ಪಿಒಪಿ ಮುಕ್ತ ಗಣಪ:
ಕರಾವಳಿ ಮಾದರಿ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಮೂಲಕ ರಾಸಾಯನಿಕ ಬಣ್ಣ ಬಳಿಸಿ ಗಣಪತಿ ಮೂರ್ತಿ ಮಾಡುವುದಾಗಲಿ, ಗಣೇಶೋತ್ಸವ ಆಚರಿಸುವುದಾಗಿ ಇಲ್ಲ. ಸಾಂಪ್ರದಾಯಿಕವಾಗಿ ಇಲ್ಲಿ ಆಚರಣೆಗೇ ಇಲ್ಲಿ ಮಣೆ. ಈ ಬಗ್ಗೆ ಸಚಿವರಿಗೆ ತಿಳಿಸಿದಾಗ ಅಚ್ಚರಿ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ ಇಲ್ಲಿನ ಪರಿಸರ ಸಹ್ಯ ಆಚರಣೆ ರಾಜ್ಯಕ್ಕೆ ಮಾದರಿ ಎಂದು ಶ್ಲಾಘಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ಸಂಜಯ್‌ ವರ್ಮ ಮಾತನಾಡಿ, ಪರಿಸರ ಸಹ್ಯ, ಸುಸ್ಥಿರ ಅಭಿವೃದ್ಧಿಗೆ ನಾವೆಲ್ಲ ಬದ್ಧರಾಗಿರಬೇಕು ಎಂದರು.

Advertisement

ಪಾಲಿಕೆ ಆಯುಕ್ತ ಆನಂದ್‌ ಮಾತನಾಡಿ, ಕೋಸ್ಟ್‌ ಗಾರ್ಡ್‌ ನಮ್ಮ ಕರಾವಳಿ ತೀರ ರಕ್ಷಿಸುವ ಜತೆಗೆ, ಸಮುದ್ರದಲ್ಲಿನ ಜಲಚರಗಳನ್ನು ರಕ್ಷಿಸಲು, ಸಮುದ್ರ ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳುತ್ತಿದೆ ಇದಕ್ಕೆ ನಾವೆಲ್ಲಾ ಪರಿಸರ ಸಹ್ಯ ಜೀವನ ನಡೆಸುವ ಮೂಲಕ ಕೈ ಜೋಡಿಸೋಣ ಎಂದರು.

ಎನ್‌ಎಂಪಿಎ ಉಪಾಧ್ಯಕ್ಷ ಕೆ.ಜಿ. ನಾಥ್‌, ಕೋಸ್ಟ್‌ಗಾರ್ಡ್‌ ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರ, ಪೊಲೀಸ್‌ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಯ 1,500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಕಾರ್ಯಕರ್ತರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.

ಸ್ವಚ್ಛತೆಯ ಜತೆಗೆ ಮರಳು ಶಿಲ್ಪ, ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡಾ ಕೂಟ, ಮಾಹಿತಿ ಅರಿವು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next