Advertisement
ಬೀಚ್ ಪ್ರವಾಸೋದ್ಯಮಕ್ಕೆ ಸರಕಾರವು ಎಲ್ಲ ರೀತಿಯ ಸಹಕಾರ ನೀಡುವ ಬಗ್ಗೆ ಪ್ರವಾಸೋದ್ಯಮ ಸಚಿವರಲ್ಲಿ ಮಾತುಕತೆ ನಡೆಸಲಾಗು ವುದು ಎಂದು ಅವರು ಹೇಳಿದರು. ಬೀಚ್ ನಿರ್ವಹಣ ಸಂಸ್ಥೆಯ ಪಾಲುದಾರರಾದ ಲಕ್ಷ್ಮೀಶ ಭಂಡಾರಿ, ರಾಜೇಶ್ ಹುಕ್ಕೇರಿ ಉಪಸ್ಥಿತರಿದ್ದರು.
ಮಲ್ಪೆ ಬೀಚ್ ಬಳಿಕ ಇದೀಗ ದ.ಕ. ಬೀಚ್‌ನಲ್ಲಿ ಮೊದಲ ತೇಲುವ ಸೇತುವೆ ಇದಾಗಿದೆ. 150 ಮೀ. ಉದ್ದವಿರುವ ತೇಲುವ ಸೇತುವೆಯು 50ಕ್ಕೂ ಮಿಕ್ಕ ಪ್ರವಾಸಿಗರು ಏಕಕಾಲಕ್ಕೆ ಸೇತುವೆಯ ತುದಿಯಲ್ಲಿ ನಿಂತು ಸೂರ್ಯಾಸ್ತಮಾನ ನೋಡಬಹುದು. ಪ್ರವಾಸಿಗರ ಸುರಕ್ಷೆಗಾಗಿ ತೇಲು ಸೇತುವೆಯ ಉದ್ದಕ್ಕೂ ಒಟ್ಟು 12 ಮಂದಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ.