Advertisement

ಪಣಂಬೂರು ಬೀಚ್‌ ಉತ್ಸವ: ಕ್ರೀಡಾಕೂಟಗಳಿಗೆ ನೀರಸ ಪ್ರತಿಕ್ರಿಯೆ

10:47 AM Dec 31, 2017 | |

ಪಣಂಬೂರು: ಇಲ್ಲಿನ ಕಡಲ ಕಿನಾರೆಯಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಬೀಚ್‌ ಉತ್ಸವದ ವಿವಿಧ ಕ್ರೀಡಾ ಕೂಟಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಶುಕ್ರವಾರ ಹಾಗೂ ಶನಿವಾರ ಆಯೋಜಿಸಿದ್ದ ಬೀಚ್‌ ವಾಲಿಬಾಲ್‌ ಮತ್ತು ತ್ರೋಬಾಲ್‌ ಕ್ರೀಡೆಗೆ ಬಹುತೇಕ
ನೋ ಎಂಟ್ರಿ ಬಂದಿದೆ. ಒಂದೆರಡು ತಂಡಗಳು ಅಭ್ಯಾಸ ಪಂದ್ಯದಂತೆ ಆಡಿ ಉತ್ಸವದ ನಿಯಮ ಪೂರೈಸಿವೆ. ಜಿಲ್ಲಾ
ಡಳಿತದ ಪ್ರೋತ್ಸಾಹದ ಕೊರತೆ, ಮೂಲ ಸೌಲಭ್ಯದ ಕೊರತೆಯಿಂದಲೂ ಹೆಚ್ಚಿನ ತಂಡಗಳು ಆಸಕ್ತಿ ವಹಿಸಿಲ್ಲ. ಇನ್ನು
ಆಕರ್ಷಣೀಯವಾಗಿದ್ದ ದೋಣಿ ಸ್ಪರ್ಧೆಯನ್ನೂ ಈ ಬಾರಿ ಕೈ ಬಿಡಲಾಗಿದೆ.

ಮನರಂಜನೆಗೆ ಸಖತ್‌ ಜನ
ಶುಕ್ರವಾರ ಸಂಜೆ ವಿವಿಧೆಡೆಯಿಂದ ಆಗಮಿಸಿದ ಪ್ರವಾಸಿಗರು ಬೀಚ್‌ ಉತ್ಸವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ವೀಕ್ಷಿಸಿದರಲ್ಲದೆ ಕಡಲ ತೀರದಲ್ಲಿ ಸಮುದ್ರದ ಅಲೆಗಳ ನಡುವೆ ಈಜುತ್ತಾ ಸಂಭ್ರಮಿಸಿದರು. ಚುರುಮುರಿ, ಮೆಣಸು ಹುಡಿ ಹಾಕಿದ ಕಾಯಿ ಮಾವಿನ ಕಾಯಿ, ಮುಳ್ಳು ಸೌತೆ, ಕುಲಿ , ಐಸ್‌ ಕ್ರೀಂ ಸಹಿತ ವಿವಿಧ ಆಹಾರ ಖಾದ್ಯ ಸವಿದರು.

ಗಾಳಿ ಪಟ ಹಾರಾಟ ಸಂಭ್ರಮ
ಬೀಚ್‌ ನಲ್ಲಿ ಸಣ್ಣ ಸಣ್ಣ ಗಾಳಿ ಪಟ ಮಾರಾಟಕ್ಕಿಡಲಾಗಿದ್ದು, ಪ್ರವಾಸಿ ಗರುಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿ ಪಟ ಹಾರಿಸಿ ಚಿತ್ತಾರ ಬಿಡಿಸಿದರು. ಇನ್ನು ಕುದುರೆ, ಸವಾರಿ, ಒಂಟೆ ಸವಾರಿ, ಜಟ್ಕಿನ್‌ ರೈಡ್‌, ದೋಣಿ ವಿಹಾರ ನಡೆಸುವವರ ಸಂಖ್ಯೆಯೂ ಹೆಚ್ಚಿತ್ತು. ಕಡಲ ತೀರದಲ್ಲಿ ಬೀಚ್‌ ರಕ್ಷಣಾ ದಳದವರ ಕಣ್ಗಾವಲು ಇದ್ದರೆ, ಭದ್ರತೆಗಾಗಿ ಪೊಲೀಸ್‌ ಔಟ್‌ ಪೋಸ್ಟ್‌ ತೆರೆದು ಸಿಬಂದಿಗಳನ್ನು ನಿಯೋಜಿಸಲಾಗಿದೆ. ವಾಹನಗಳನ್ನು ಬೈಕಂಪಾಡಿ ರೈಲ್ವೇ ಸೇತುವೆಯಾಗಿ ಮೀನಕಳಿಯ ರಸ್ತೆಯಲ್ಲಿ ಬಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next