Advertisement

ಪಾಕ್‌ ಪ್ರಧಾನಿ ಷರೀಫ್ ಭ್ರಷ್ಟಾಚಾರ ತನಿಖೆ ಅಂತಿಮ ವರದಿ ಇಂದು ಸಲ್ಲಿಕೆ

11:57 AM Jul 10, 2017 | Team Udayavani |

ಇಸ್ಲಾಮಾಬಾದ್‌ : ಪಾಕ್‌ ಪ್ರಧಾನಿ ನವಾಜ್‌ ಷರೀಫ್ ವಿರುದ್ದದ  ಪನಾಮಾಗೇಟ್‌ ಭ್ರಷ್ಟಾಚಾರ ಹಗರಣದ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡ ಇಂದು ಸುಪ್ರೀಂ ಕೋರ್ಟಿಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ.

Advertisement

ಈ ವರ್ಷ ಮೇ ತಿಂಗಳಲ್ಲಿ ಪಾಕ್‌ ಸುಪ್ರೀಂ ಕೋರ್ಟ್‌ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಕುಟುಂಬದವರು ಶಾಮೀಲಾಗಿದ್ದಾರೆನ್ನಲಾದ ಪನಾಮಾಗೇಟ್‌ ಭ್ರಷ್ಟಾಚಾರ ಹಗರಣದ ತನಿಖೆಗೆ ಆರು ಸದಸ್ಯರ ಜಂಟಿ ತನಿಖಾ ತಂಡವನ್ನು (ಜೆಐಟಿ) ರೂಪಿಸಿತ್ತು.

1990ರ ದಶಕದಲ್ಲಿ ನವಾಜ್‌ ಷರೀಫ್  ಮತ್ತು ಅವರ ಕುಟುಂಬದವರು ಲಂಡನ್‌ನಲ್ಲಿ ಅಪಾರ ಮೌಲ್ಯದ ಆಸ್ತಿ ಪಾಸ್ತಿಗಳನ್ನು ಖರೀದಿಸಲು ಬಳಸಿದ್ದ ಹಣದ ಮೂಲವನ್ನು ಪತ್ತೆ ಹಚ್ಚುವಂತೆ ತನಿಖಾ ತಂಡಕ್ಕೆ ಸೂಚಿಸಿತ್ತು. 

ಜೆಐಟಿ ಅಂತಿಮ ವರದಿಯು ಪ್ರಧಾನಿ ಷರೀಫ್, ಅವರ ಸಹೋದರ – ಪಂಜಾಬ್‌ ಮುಖ್ಯಮಂತ್ರಿ ಶಹಬಾಜ್‌ ಷರೀಫ್, ಮಕ್ಕಳಾದ ಹುಸೇನ್‌ , ಹಸನ್‌ ಮತ್ತು ಮರ್ಯಾಮ್‌ ಷರೀಫ್ ಹಾಗೂ ಅಳಿಯ – ನಿವೃತ್ತ ಕ್ಯಾಪ್ಟನ್‌ ಮೊಹಮ್ಮದ್‌ ಸಫ್ದರ್‌ ಅವರ ಹೇಳಿಕೆಗಳನ್ನು ಒಳಗೊಂಡಿರುವುದಾಗಿ ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next