ಗೌರಿಬಿದನೂರು: ತಾಲೂಕಿನ ಪ್ರಮುಖ ಆರ್ಥಿಕ ಬೆಳೆಯಾಗಿರುವ ಏಲಕ್ಕಿ ಬಾಳೆ ಬೆಳೆಗೆ ಪನಾಮ ರೋಗ ತಗುಲಿದ್ದು, ಗಿಡದಲ್ಲಿ ಹೂವು ಹಾಕಿ ಕಾಯಿ ಬಿಡುವ ಹೊತ್ತಿಗೆ ಈ ರೀತಿಯ ರೋಗ ತಗಲುತ್ತಿರುವುದರಿಂದ ತಾಲೂಕಿನ ಬಾಳೆ ಬೆಳೆಗಾರರು ಕಂಗಾಲಾಗಿದ್ದಾರೆ.
ಬಂಡವಾಳ ನಷ್ಟ: ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ, ಮಳೆ ಕೊರತೆಯಿಂದ ಏಲಕ್ಕಿ ಬಾಳೆ ಬೆಳೆಗೆ ಪನಾಮ ರೋಗ ತಗಲುತ್ತಿದ್ದು, ತಡೆಗಟ್ಟಲು ಸಾಧ್ಯವಾಗದಿದ್ದರೆ ಬೆಳೆಗೆ ಹೂಡಿರುವ ಲಕ್ಷಾಂತರ ರೂ. ಬಂಡವಾಳ ನಷ್ಟವಾಗಲಿದೆ.
ಸಹಾಯಧನ: ತಾಲೂಕಿನಲ್ಲಿ ಸುಮಾರು (150 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ) 450 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಏಲಕ್ಕಿ ಬಾಳೆ ಹಾಗೂ 150ಕ್ಕೂ ಹೆಚ್ಚು ಎಕರೆಯಲ್ಲಿ ಪಚ್ಚಬಾಳೆ ಬೆಳೆಯಲಾಗುತ್ತಿದೆ.
ತೋಟಗಾರಿಕೆ ಇಲಾಖೆಯು ನರೇಗಾ ಯೋಜನೆಯಲ್ಲಿ ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಗಳಲ್ಲಿ ಗಿಡಗಳಿಗೆ ಸಹಾಯಧನ ನೀಡಲಾಗುತ್ತಿದೆ. ಈ ಶೃಂಗ ಸರಿದಿಯ ರೋಗವು ಸೇರಿಕೊಂಡು ಒಳಹೊಕ್ಕು ಗಿಡ ಮತ್ತು ಎಲೆ ಬೆಳೆಯದಂತೆ ದೃತಿ ಸಂಶ್ಲೇಷಣ ಕ್ರಿಯೆಯೂ ಆಗದಂತೆ ತಡೆಗಟ್ಟುವುದರಿಂದ ನಿಸ್ಸಾರ ಕಳೆದುಕೊಂಡು ನಾಶವಾಗುವುದು ಪ್ರಮುಖವಾಗಿದ್ದು, ಗಿಡದಿಂದ ಗಿಡಕ್ಕೆ ವ್ಯಾಪಿಸುತ್ತಿದೆ. ಔಷಧಿ ಸಿಂಪಡಣೆ ಮಾಡು ವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಜೂನ್, ಜುಲೈ ಆಗಸ್ಟ್ ನಲ್ಲಿ ನಾಟಿ ಮಾಡುತ್ತಾರೆ. ಅಲ್ಲಿ ನಾಟಿ ಮಾಡಿದರೆ ಇಳುವರಿ ಹಾಗೂ ಬೆಲೆ ಸಿಗುತ್ತದೆ. ಲಾಭದಾಯಕ ತೋಟಗಾರಿಕೆ ಬೆಳೆಯಾಗಿದ್ದು, ಕಾಲಕಾಲಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ತಜ್ಞರನ್ನು ಸಂಪರ್ಕಿಸಿ ಯಾವುದೇ ರೋಗ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಎಲೆಗಳಿಗೆ ಸಿಂಪಡಣೆ: ತಾಲೂಕಿನ ಗುಟ್ಟೇನಹಳ್ಳಿ, ಅಲಕಾಪುರ ಸೇರಿದಂತೆ ಹಲವೆಡೆ ಏಲಕ್ಕಿ ಬಾಳೆಗೆ ಪನಾಮ ರೋಗದ ಸೋಂಕು ಕಾಣಿಸಿಕೊಂಡಿದ್ದು, ಔಷಧಿ ಸಿಂಪಡಣೆಗೆ ಸೂಚಿಸಲಾಗಿದೆ. ಸಸಿಗಳನ್ನು ನೆಟ್ಟ ಎರಡು ತಿಂಗಳೊಳಗೆ ಬಾಳೆ ಗಿಡಗಳ ಬುಡಕ್ಕೆ ಕ್ಲೋರೋಫೈರಿಫಾಸ್ 2ಎಂ.ಎಲ್. ಬಾವಸ್ಟಿನ್ 2 ಗ್ರಾಂ ನೀರಿನಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಹಾಕಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರವಿಕುಮಾರ್ ತಿಳಿಸಿದ್ದಾರೆ.
● ವಿ.ಡಿ.ಗಣೇಶ್, ಗೌರಿಬಿದನೂರು