Advertisement
ಕಾಟುಕುಕ್ಕೆ ಒಡ್ಯ ನಿವಾಸಿ ಪ್ರಭಾಕರ ಆಚಾರ್ಯ (48) ಮೃತ ವ್ಯಕ್ತಿ. ಅವರು ಎಂಟು ವರ್ಷಗಳಿಂದ ಪರಿಚಿತರಾಗಿರುವ ಅವ್ವಮ್ಮ ಅವರ ಮನೆಯ ಅಟ್ಟದಲ್ಲಿದ್ದ ರಟ್ಟಿನ ಪೆಟ್ಟಿಗೆ ತೆಗೆಯಲೆಂದು ಹತ್ತಿದ್ದವರು ಅಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಆಗಿದ್ದರು. ಬುಧವಾರ ತಡ ರಾತ್ರಿಯೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಘಾತದಿಂದ ಸಾವು ಸಂಭವಿಸಿರುವುದಾಗಿ ವರದಿ ಯಲ್ಲಿ ಉಲ್ಲೇಖೀಸಲಾಗಿದೆ.
ಬಡಗಿ ಪ್ರಭಾಕರ ಆಚಾರ್ಯ ಅವರು ಬೊಳ್ಳಿಂಬಲದ ಮನೆಯೊಂದರ ಕೊಟ್ಟಿಗೆ ಛಾವಣಿಗೆ ಸಂಬಂಧಿಸಿ ಮಂಗಳವಾರದಿಂದ ಕೆಲಸಕ್ಕೆ ಬಂದಿದ್ದರು. ಬುಧವಾರ ಸಂಜೆ 5 ಗಂಟೆಗೆ ಕೆಲಸ ಮುಗಿಸಿ ತೆರಳಿದ್ದ ಇವರು, ಅಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ತನ್ನ ಪರಿಚಿತ ಮನೆಯಾದ ಅವ್ವಮ್ಮ ಅವರ ಮನೆಗೆ ತೆರಳಿದ್ದರು. ಘಟನೆ ನಡೆದ ಮನೆ ನಿವಾಸಿಗಳು ಹೇಳುವ ಪ್ರಕಾರ, ಪ್ರಭಾಕರ ಆಚಾರ್ಯ ಅವರು ಈಟಿನ ಕೋಲು ಬೇಕೆಂದು ಕೇಳಿದ್ದು, ಅದಕ್ಕಾಗಿ ಮನೆಗೆ ಬಂದಿದ್ದರು. ಆ ವೇಳೆ ಅಟ್ಟದಲ್ಲಿದ್ದ ರಟ್ಟಿನ ಪೆಟ್ಟಿಗೆ ತೆಗೆದುಕೊಡುವಂತೆ ಅವ್ವಮ್ಮ ಅವರ ಪುತ್ರಿ ಹೇಳಿದ ಮೇರೆಗೆ ಪ್ರಭಾಕರ ಆಚಾರ್ಯ ಅಟ್ಟ ಹತ್ತಿದ್ದಾರೆ. ಅಲ್ಲಿಂದ ರಟ್ಟಿನ ಪೆಟ್ಟಿಗೆ ತೆಗೆದು ಸುಮಾರು ಹೊತ್ತು ಕಳೆದರೂ ಕೆಳಗೆ ಬಾರದೇ ಇರುವುದನ್ನು ಕಂಡು ಅವ್ವಮ್ಮ ಮತ್ತು ಮಗಳು ಅಟ್ಟ ಹತ್ತಿ ನೋಡಿದ್ದಾರೆ. ಆಗ ಮೃತಪಟ್ಟ ಸ್ಥಿತಿಯಲ್ಲಿ ಇರುವುದನ್ನು ಕಂಡು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೊಲೆ ವದಂತಿ: ಉದ್ವಿಗ್ನ ಸ್ಥಿತಿ
ಘಟನೆ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಿಂದೂ ಬಡಗಿಯ ಕೊಲೆ ಎಂಬಂರ್ಥದಲ್ಲಿ ವದಂತಿಗಳು ಹಬ್ಬಿ ಕೆಲ ಕಾಲ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಅವ್ವಮ್ಮ ಅವರ ಮನೆ ಬಳಿ ನೂರಾರು ಜನರು ಜಮಾಯಿಸಿದ್ದು, ಅನಂತರ ಹೃದಯಾ ಘಾತದಿಂದ ಸಾವು ಎಂಬ ವಿಚಾರ ಹಬ್ಬಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಗಿತ್ತು.
Related Articles
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಆಗಮಿಸಿದ್ದರು. ಮರಣದ ಬಗ್ಗೆ ಸಂಶಯ ಹೊಂದಿದ್ದರೆ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಹಾಜರಿರುವಂತೆ ಸೂಚನೆ ನೀಡಿದ್ದರು. ಮೃತರು ಮರದ ಕೆಲಸ ಮಾಡುತ್ತಿದ್ದ ಮನೆಗೂ ಭೇಟಿ ನೀಡಿ, ಕೆಲಸ ನಿರ್ವಹಿಸಿದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಸಹಾಯಕ ಆಯುಕ್ತ ರಘುನಂದನ್ ಮೂರ್ತಿ, ಡಿವೈಎಸ್‌ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ಗೋಪಾಲ ನಾಯ್ಕ, ಗ್ರಾಮಾಂತರ ಪೊಲೀಸ್ ಠಾಣಾ ಎಸ್.ಐ. ಅಬ್ದುಲ್ ಖಾದರ್, ನಗರ ಠಾಣಾ ಎಸ್‌ಐ ಮಹೇಶ್ ಪ್ರಸಾದ್, ಎಸ್.ಐ. ಒಮನಾ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಹಣೆಯಲ್ಲಿ ತರಚು ಗಾಯ!ಪ್ರಭಾಕರ ಆಚಾರ್ಯ ಅವರ ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮರಣೋತ್ತರ ಪರೀಕ್ಷೆಯ ವರ ದಿಯಲ್ಲಿ ಆಘಾತದಿಂದ ಹೃದ ಯಾಘಾತಕ್ಕೊಳ ಗಾಗಿ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ. ಮೃತರ ಹಣೆಯಲ್ಲಿ ತರಚು ಗಾಯಗಳು ಕಂಡುಬಂದಿದ್ದು, ಅದು ಕೆಲಸದ ಸಂದರ್ಭದಲ್ಲಿ ಆಗಿರಬಹುದು ಎಂದು ಊಹಿಸಲಾಗಿದೆ. ದೇಹದ ಇತರ ಭಾಗದಲ್ಲಿ ಯಾವುದೇ ಗಾಯಗಳು ಕಂಡು ಬಂದಿಲ್ಲ ಎಂದು ಗ್ರಾಮಾಂತರ ಪೊಲೀಸರು ಮಾಹಿತಿ ನೀಡಿ ದ್ದಾರೆ. ತಹಶೀಲ್ದಾರ್ ಉಪಸ್ಥಿತಿಯಲ್ಲಿ ಮೃತ ದೇಹವನ್ನು ಸಂಬಂಧಿಕರಿಗೆ ನೀಡಲಾಗಿದೆ.