Advertisement

Panaji: ಬಾರ್ಜ್ ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದು ಪ್ರಯಾಣಿಕರ ಪರದಾಟ

02:15 PM Sep 06, 2023 | Team Udayavani |

ಪಣಜಿ: ಗೋವಾದ ಚೋಡನ್ ಬಾರ್ಜ್ ನ ಮುಂಭಾಗದ ಕಬ್ಬಿಣದ ತಗಡು ಮುರಿದು ಬಿದ್ದಿದ್ದರಿಂದ ಅನೇಕ ಪ್ರಯಾಣಿಕರು ತಮ್ಮ ಕಾರು ಮತ್ತು ಬೈಕ್‍ಗಳೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಬಾರ್ಜ್ ನಲ್ಲಿ ಸಿಲುಕಿಕೊಂಡ ಘಟನೆ ಸೆ.5ರ ಮಂಗಳವಾರ ನಡೆದಿದೆ.

Advertisement

ಈ ಬಾರ್ಜ್ ನಲ್ಲಿ ಎರಡು ದೊಡ್ಡ ವಾಹನಗಳು ಮತ್ತು ಕನಿಷ್ಠ ಏಳರಿಂದ ಎಂಟು ದ್ವಿಚಕ್ರ ವಾಹನಗಳಿದ್ದವು. ‌

ಘಟನೆ ಕುರಿತು ಹಲವು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಕ್ರೇನ್ ಬರುವವರೆಗೆ ಪ್ರಯಾಣಿಕರು ತಮ್ಮ ಕಾರುಗಳೊಂದಿಗೆ ಅಲ್ಲಿಯೇ ಇರುವಂತಾಯಿತು.

ಬಾರ್ಜ್ ನ ಮುಂಭಾಗದ ತಗಡು ಮುರಿದು ಬಿದ್ದಿದ್ದರಿಂದ ಬಾರ್ಜ್ ನಲ್ಲಿದ್ದ ಪ್ರಯಾಣಿಕರು ದಡಕ್ಕೆ ಬರಲು ಸಾಧ್ಯವಾಗದೆ ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಸಿಲುಕಿರುವಂತಾಯಿತು.

ಅದಲ್ಲದೆ, ಈ ದೋಣಿಯು ದುರಸ್ತಿಯಾಗುವವರೆಗೆ ದಡಕ್ಕೆ ಬರಲು ಸಾಧ್ಯವಿರಲಿಲ್ಲ. ಈ ಒಂದು ದೋಣಿ ದುರಸ್ತಿಯಾಗುವವರೆಗೂ ನಿರುಪಯುಕ್ತ ಎನಿಸುತ್ತಿದೆ. ಆದ್ದರಿಂದ, ಇತರ ದೋಣಿಗಳ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ದೋಣಿ ಮೂಲಕ ನದಿ ದಾಟಲು ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದವು.

Advertisement

ಘಟನೆ ಕುರಿತು ಮಾತನಾಡಿದ ಸ್ಥಳೀಯ ಅಶ್ವಿನ್ ಚೋಡಂಕರ್, ಶಾಸಕರು ಈ ಬಗ್ಗೆ ಗಮನಹರಿಸಬೇಕಿದೆ. ರಾತ್ರಿ ಒಂಬತ್ತು ಅಥವಾ ಹತ್ತು ಗಂಟೆಯ ನಂತರ ಬಾರ್ಜ್ ನಲ್ಲಿ ಪಾರ್ಟಿಗಳು ನಡೆಯುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next