Advertisement

Panaji: ಗೋವಾದಲ್ಲಿ ಕರ್ನಾಟಕ ರಾಜ್ಯೋತ್ಸವ‌ ಕಾರ್ಯಕ್ರಮ ಆಚರಣೆ

07:06 PM Nov 12, 2024 | Team Udayavani |

ಪಣಜಿ: ಭಾಷೆಯಿಂದ ಬರಿ ಭಾಷೆ ಉಳಿಯುವುದು, ಬೆಳೆಯುವುದು ಅಷ್ಟೇ ಅಲ್ಲದೆ ಅದರಿಂದ ಸಂಸ್ಕಾರ ಮತ್ತು ಸಂಸ್ಕೃತಿಗಳೆರಡು ತಂದೆ-ತಾಯಿಯರಿಂದ ಮಕ್ಕಳಿಗೆ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರವಾಗುತ್ತದೆ. ಹೀಗಾಗಿ ಹೊರನಾಡಿನಲ್ಲಿ ಇದ್ದುಕೊಂಡು ಭಾಷಾಭಿಮಾನವನ್ನಿಟ್ಟು ಕೊಳ್ಳುವುದರ ಜೊತೆಗೆ ಮಕ್ಕಳಿಗೆ ಭಾಷೆಯನ್ನು ಕಲಿಸಿ, ಉಳಿಸಿ ಮತ್ತು ಬೆಳೆಸಿ ಎಂದು ಚಕ್ರವರ್ತಿ ಸೂಲಿಬೆಲೆ ಕಿವಿ ಮಾತು ಹೇಳಿದರು.

Advertisement

ಗೋವಾದ ಪೋಂಡಾ ಶಹರದ ಸಾವಿತ್ರಿ ಸಭಾಂಗಣದಲ್ಲಿ ಶೈಲೇಶ ಪಾಟೀಲರ ಸಾರಥ್ಯದಲ್ಲಿ ನ.10ರ ಭಾನುವಾರ ಸಂಜೆ ಕರ್ನಾಟಕ ರಾಜ್ಯೋತ್ಸವ‌ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ನೆರೆದವರೆಲ್ಲ ಯಾವ ಜಾತಿ, ಧರ್ಮ, ಕುಲ, ಗೋತ್ರ ಹಿಡಿದು ಇಲ್ಲಿಗೆ ಬರಲಿಲ್ಲ. ಯಾವುದಾದರೂ ಶಕ್ತಿ ಅವರನ್ನು ಕರೆ ತಂದಿದ್ದರೆ ಅದು ನಮ್ಮ ತಾಯಿ ಭಾಷೆ ಕನ್ನಡ. ಇದು ನಮ್ಮನ್ನೆಲ್ಲ ಒಗ್ಗೂಡಿಸುವ ಶಕ್ತಿ ಕೇಂದ್ರವಾಗಿದೆ ಎಂದರು.

ಇತಿಹಾಸದ ಪುಟಗಳಿಂದ ಆಯ್ದ ಕೆಲ ಘಟನೆಗಳನ್ನು ನೆನಪಿಸಿ ಚಕ್ರವರ್ತಿ ಸೂಲಿಬೆಲೆ ಕನ್ನಡಾಭಿಮಾನ ಮತ್ತು ನಾಡಪ್ರೇಮವನ್ನು ಇನ್ನೂ ಗಟ್ಟಿಗೊಳಿಸಿದರು.

ಕಾರ್ಯಕ್ರಮದ 2ನೇ ಭಾಗದ ಅಧ್ಯಕ್ಷತೆಯನ್ನು ಎಂ.ಎಸ್. ಕೃಪಾಶಂಕರ, ಪ್ರಾಂಶುಪಾಲರು, ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಫರ್ಮಾಗುಡಿ-ಪೋಂಡಾ ವಹಿಸಿಕೊಂಡಿದ್ದರು.

Advertisement

ವೇದಿಕೆಯ ಮೇಲೆ ಸಂಘದ ಖಜಾಂಚಿ ಶಿರಗಣ್ಣವರ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲ ಭಾಗದಲ್ಲಿ ದಾನಮ್ಮರವರ ಸ್ವಾಗತ ಗೀತೆ ಮತ್ತು ಶರಣು ಯಮನೂರರವರ ಹಾಸ್ಯ ಕಾರ್ಯಕ್ರಮ ನಡೆಯಿತು. ಸುರೇಶ ಹಡಪದ, ಶ್ರೀನಿವಾಸ ಕಳಗಿ ಮತ್ತು ರಾಘವೇಂದ್ರ ಕಂಚಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸಿದ್ಧು ಹಿರೇಮಠ, ವಿರೂಪಾಕ್ಷ ತೊಂಡೆಹಾಳ, ಸಂದೀಪ ನಾಯಕ, ರಜತ್ ಶೆಟ್ಟಿ, ರಾಘವೇಂದ್ರ ಕಂಚಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ರೆಡ್ಡಿ, ಶ್ರೀನಿವಾಸ ಬಳಗಟ್ಟಿ, ಸಂಜಯ ಶಿರಗಣ್ಣವರ್, ಶ್ರೀನಿವಾಸ ಕಲಗಿ, ಸುರೇಶ ಕಣವಿ, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಎರಡನೇ ಭಾಗ ವಿಜಯಲಕ್ಷ್ಮಿ ಅವರ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು. ಪೋಂಡಾ ಕನ್ನಡ ಸಂಘದ ಅಧ್ಯಕ್ಷ ಶೈಲೇಶ ಪಾಟೀಲ ಸ್ವಾಗತಿಸಿದರು. ದಾನಮ್ಮಾ ಹಾಗೂ ಸಂಗಡಿಗರು ನಾಡಗೀತೆಯನ್ನು ಹೇಳಿದರು. ರೇವಣಸಿದ್ಧಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರಿಯಾ ಪತ್ತಾರ ಅತಿಥಿಗಳನ್ನು ಪರಿಚಯಿಸಿದರು. ಶರಣು ಯಮನೂರು ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಸಚಿವ ಶ್ರೀನಿವಾಸ ಕಂಚಿ ವಂದಿಸಿದರು.

ಪ್ರೀಯಾ, ಮಹಾಲಕ್ಷ್ಮಿ ಹಾಗೂ  ಪವನ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪೊಂಡಾ ಕನ್ನಡ ಸಂಘದ ಹಿಂದಿನ ಎಲ್ಲ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next