Advertisement

Panaji: ಗೋವಾದಲ್ಲಿ ತುಳುಕೂಟ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿ: ವಿ. ಸುನೀಲ್ ಕುಮಾರ್

11:24 AM Oct 23, 2024 | Team Udayavani |

ಪಣಜಿ: ಗೋವಾದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ತುಳು ಭಾಷಿಕರಿದ್ದೀರಿ. ಗೋವಾದಲ್ಲಿ ತುಳುಕೂಟ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿ. ತುಳು ಭಾಷಿಕರು ಜಗತ್ತಿನಾದ್ಯಂತ ನೆಲೆಸಿದ್ದಾರೆ. ಗೋವಾದಲ್ಲಿ ತುಳು ಭವನ ನಿರ್ಮಾಣ ಮಾಡಿ ಇದಕ್ಕೆ ನಮ್ಮೆಲ್ಲ ಸಹಾಯ ಸಹಕಾರ ಇರಲಿದೆ ಎಂದು ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.

Advertisement

ಗೋವಾದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ತುಳು ಕೂಟವನ್ನು ಅ.20 ರ ಭಾನುವಾರ ಸಂಜೆ ಗೋವಾ ರಾಜಧಾನಿ ಪಣಜಿ ಸಮೀಪದ ಪರ್ವರಿಯ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಿದ್ದ ಸಮಾರಂಭದ ಉಧ್ಘಾಟನೆ ನೆರವೇರಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿ ತುಳು ಭಾಷೆ ಪುರಾತನ ಭಾಷೆ. ಗೋವಾದಲ್ಲಿ ಗಣೇಶ ಶೆಟ್ಟಿ ಅವರ ನೇತೃತ್ವದಲ್ಲಿ ಉದ್ಟಾಟನೆಗೊಂಡ ತುಳು ಕೂಟಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ ಕುಮಾರ್ ರೈ ಮಾತನಾಡಿ, ಗೋವಾದಲ್ಲಿ ತುಳು ಕೂಟಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಲಭಿಸುವಂತೆ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗೋವಾದಲ್ಲಿ ತುಳು ಕೂಟ ಸ್ಥಾಪನೆಯಾಗಿರುವುದು ಸಂತಸ ತಂದಿದೆ. ನಾನು ನಿಮ್ಮೊಂದಿಗೆ ಯಾವಾಗಲೂ ಇದ್ದೇನೆ ಎಂದರು.

ತುಳು ಕೂಟದ ಗೋವಾ ಅಧ್ಯಕ್ಷ ಗಣೇಶ ಶೆಟ್ಟಿ ಇರ್ವತ್ತೂರು ಮಾತನಾಡಿ, ಈ ಸಮಾರಂಭದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವುದು ನನ್ನ ಪ್ರಯತ್ನ ಸಾರ್ಥಕವಾಯಿತು. ತುಳು ಭಾಷಿಕರು ನಾವೆಲ್ಲರೂ ಒಂದೇ ಕುಟುಂಬದವರು. ಮುಂದೆಯೂ ಕೂಡ ಒಳ್ಳೊಳ್ಳೆ ಕಾರ್ಯಕ್ರಮ ಮಾಡೋಣ. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

Advertisement

ತುಳು ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪುರಾತನ ವಸ್ತುಗಳ ಪ್ರದರ್ಶನ ನಡೆಸಲಾಯಿತು. ರಾಜ ಮಹಾರಾಜರು ಬಳಸಿದ ವಸ್ತುಗಳು, ನಗ-ನಾಣ್ಯಗಳು, ತುಳುನಾಡಿನ ಪುರಾತನ ವಸ್ತುಗಳ ಪ್ರದರ್ಶನ ನಡೆಸಲಾಯಿತು. ಶಿವಧೂತೆ ಗುಳಿಗೆ ಎಂಬ ಪ್ರಸಿದ್ಧ ಪೌರಾಣಿಕ ನಾಟಕದ 650ನೇ ಪ್ರದರ್ಶನ ನಡೆಸಲಾಯಿತು. ಈ ನಾಟಕ ಜನರ ಮೆಚ್ಚುಗೆಗೆ ಕಾರಣವಾಯಿತು.

ಈ ಸಂದರ್ಭದಲ್ಲಿ ಉದ್ಯಮಿ, ಅಖಿಲ ಭಾರತ ತುಳು ಕೂಟದ ಗೌರವಾಧ್ಯಕ್ಷ ಶಶಿಧರ ಶೆಟ್ಟಿ, ಬರೋಡಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಕಂಬಳ ಕಮಿಟಿಯ ಕಾರ್ಯದರ್ಶಿ ಕೆ.ಗುಣಪಾಲ ಕದಂಬ, ಪ್ರೊ. ಸುಧಾಕರ ಶೆಟ್ಟಿ, ಮೂಡುಬಿದ್ರೆ ತುಳು ಕೂಟದ ಅಧ್ಯಕ್ಷ ಧನಕೀರ್ತಿ ಬಾಳಿಪ್, ಪುತ್ತೂರು ತುಳು ಕೂಟದ ಅಧ್ಯಕ್ಷ ಸಿಪ್ರಿನ್ ಡಿಸೋಜಾ, ಗೋವಾ ತುಳು ಕೂಟದ ಗೌರವಾಧ್ಯಕ್ಷ ಸದಾನಂದ ಶೆಟ್ಟಿ, ತುಳು ಕೂಟ ಗೋವಾದ ಗೌರವಧ್ಯಕ್ಷ ಚಂದ್ರಹಾಸ ಅಮಿತ್, ತುಳು ಕೂಟ ಗೋವಾದ ಗೌರವಧ್ಯಕ್ಷ ವಿಜಯೇಂದ್ರ ಶೆಟ್ಟಿ, ತುಳು ಕೂಟ ಗೋವಾದ ಅಧ್ಯಕ್ಷ ಗಣೇಶ ಶೆಟ್ಟಿ ಇರ್ವತ್ತೂರು, ಗೋವಾ ತುಳು ಕೂಟದ ಕಾರ್ಯದರ್ಶಿ ಶಶಿಧರ ನಾಯ್ಕ, ಗೋವಾ ತುಳು ಕೂಟದ ಖಜಾಂಚಿ ಸಿಎ ಪ್ರಶಾಂತ ಜೈನ್ ಪತ್ತಿತರರು ಉಪಸ್ಥಿತರಿದ್ದರು.

ನಿತೇಶ್ ಶೆಟ್ಟಿ ಯೆಕ್ಕಾರ, ಸೃತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೋವಾ ರಾಜ್ಯಾದ್ಯಂತ ವಿವಿಧೆಡೆ ನೆಲೆಸಿರುವ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ತುಳು ಕೂಟ ಗೋವಾದ ಕಾರ್ಯದರ್ಶಿ ಶಶಿಧರ್ ನಾಯ್ಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next