ಪಣಜಿ: ಅಗೋಡಾ, ಡಿಜಿಟಲ್ ಟ್ರಾವೆಲ್ ಪ್ಲಾಟ್‍ಫಾರ್ಮ್, ಪ್ರಪಂಚದಾದ್ಯಂತ ಪ್ರಯಾಣಿಕರಿಗೆ ಮರೆಯಲಾಗದ ಪ್ರಯಾಣದ ಅನುಭವಗಳನ್ನು ಒದಗಿಸಲು ಗೋವಾ ಪ್ರವಾಸೋದ್ಯಮ ಇಲಾಖೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ಗೋವಾ ಸರ್ಕಾರವು ಗೋವಾ ನೀಡುವ ಶ್ರೀಮಂತ ಅನುಭವಗಳನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಏಷ್ಯಾದ ಮಾರುಕಟ್ಟೆಯಲ್ಲಿ ಪ್ರಯಾಣಿಕರ ಆದ್ಯತೆಗಳನ್ನು ಪೂರೈಸುತ್ತದೆ. ಹೊಸ ಒಪ್ಪಂದದ ಪ್ರಕಾರ, ಅಗೋಡಾ ತನ್ನ ಡಿಜಿಟಲ್ ಮಾಧ್ಯಮದ ಮೂಲಕ ಪ್ರಪಂಚದಾದ್ಯಂತ ತನ್ನ ಪ್ರವಾಸಿಗರಿಗೆ ಗೋವಾದ ವಿವಿಧ ಪ್ರವಾಸಿ ತಾಣಗಳ ಆಕರ್ಷಣೆಗಳು ಮತ್ತು ಕೊಡುಗೆಗಳ ಮಾಹಿತಿ ಒದಗಿಸುತ್ತದೆ.
ಈ ಪಾಲುದಾರಿಕೆಯ ಒಪ್ಪಂದದ ಮೂಲಕ, ಡಿಜಿಟಲ್ ಪ್ರಚಾರ ಅಭಿಯಾನಗಳನ್ನು ಅನುಷ್ಠಾನಗೊಳಿಸುವ ಮೂಲಕ ಪ್ರಯಾಣಿಕರ ಅನುಭವವನ್ನು ಉತ್ಕೃಷ್ಟಗೊಳಿಸಲು ಡಿಜಿಟಲೀಕರಣದ ಶಕ್ತಿಯನ್ನು ಬಳಸಿಕೊಳ್ಳಲು ಗೋವಾ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೆಲಸ ಮಾಡಲು ಅಗೋಡಾ ಬದ್ಧವಾಗಿದೆ.
ಅಗೋಡಾದ ಮುಖ್ಯ ವಾಣಿಜ್ಯ ಅಧಿಕಾರಿ ಡೇಮಿಯನ್ ಫಿರ್ಶ್ ಪ್ರತಿಕ್ರಿಸಿ, ಗೋವಾ ಪ್ರವಾಸೋದ್ಯಮದ ಪಾಲುದಾರಿಕೆಯು ಗೋವಾದ ವಿಶಿಷ್ಟ ಕೊಡುಗೆಗಳನ್ನು ಉತ್ತೇಜಿಸಲು ನಮ್ಮ ತಾಂತ್ರಿಕ ಕೌಶಲ್ಯ ಬಳಸಿಕೊಳ್ಳಲು ಒಂದು ಅವಕಾಶವನ್ನು ಒದಗಿಸುತ್ತದೆ. ಡಿಜಿಟಲ್ ಸುಧಾರಣೆಗಳ ಮೂಲಕ, ಗೋವಾದ ಆಕರ್ಷಣೆಗಳನ್ನು ಅನ್ವೇಷಿಸಲು ಪ್ರಯಾಣಿಕರನ್ನು ಪ್ರೇರೇಪಿಸುವ ನಮ್ಮ ಸಾಮರ್ಥ್ಯದಲ್ಲಿ ನಾವು ವಿಶ್ವಾಸ ಹೊಂದಿದ್ದೇವೆ. ‘ಅಗೋಡಾ’ ಜೊತೆಗಿನ ಈ ಪಾಲುದಾರಿಕೆಯು ಗೋವಾ ಪ್ರವಾಸೋದ್ಯಮ ಇಲಾಖೆಗೆ ಪ್ರಮುಖ ಮೈಲಿಗಲ್ಲು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಪ್ರಗತಿಯನ್ನು ಅಳವಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಒತ್ತಿ ಹೇಳುತ್ತದೆ ಎಂದರು.
ಜಿಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಅಂಚಿಪ್ಕ ಮಾತನಾಡಿ, ಡಿಜಿಟಲೀಕರಣದ ಮೂಲಕ ಗೋವಾದ ಸೌಂದರ್ಯವನ್ನು ವಿಶ್ವ ಪ್ರೇಕ್ಷಕರಿಗೆ ತೋರಿಸಲಾಗುವುದು ಎಂದರು.