ಮಲ್ಪೆ: ಇಲ್ಲಿನ ತೊಟ್ಟಂ ಬಳಿ ಕೈರಂಪಣಿ ನಾಡದೋಣಿಯೊಂದರ ಬಲೆಗೆ ರಾಶಿ ರಾಶಿ ಬಿಳಿ ಪಾಂಪ್ರಟ್ ಮೀನು ಬಿದ್ದಿದೆ.
ಶುಕ್ರವಾರ ಬೆಳಗ್ಗೆ 40 ಜನರ ತಂಡ ಸಮುದ್ರ ತೀರದಲ್ಲಿ ಕೈರಂಪಣಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಭಾರೀ ಪ್ರಮಾಣದ ಪಾಂಪ್ರಟ್ ಮೀನು ದೊರೆತಿರುವುದು ಮೀನುಗಾರರ ಮೊಗದಲ್ಲಿ ಸಂತಸ ಮೂಡಿಸಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಸಮುದ್ರದ ತೆರೆಯ ಜತೆಗೆ ಸಾಗಿ ಬಂದ ಮೀನು ಕೈರಂಪಣಿ ಬಲೆಗೆ ಸಿಕ್ಕಿವೆ. ಒಂದು ಕೆ.ಜಿ.ಯಲ್ಲಿ 12ರಷ್ಟು ಮೀನು ಹಿಡಿಯುತ್ತಿದ್ದು, ಸುಮಾರು 1,300 ಕೆ.ಜಿ.ಗಳಷ್ಟು ಮೀನುಗಳು ದೊರೆತಿವೆ ಎನ್ನಲಾಗಿದೆ.
ಮಲ್ಪೆ ತೊಟ್ಟಂ ಪರಿಸರದಲ್ಲಿ ಇಷ್ಟು ಪ್ರಮಾಣದ ಪಾಂಪ್ರಟ್ ಮೀನು ಇದುವರೆಗೂ ಸಮುದ್ರ ತೀರಕ್ಕೆ ಬಂದಿದ್ದಿಲ್ಲ ಎಂದು ಮೀನುಗಾರು ತಿಳಿಸಿರುತ್ತಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಮನೆಯಂಗಳದಲ್ಲಿ ಕೇರಳದ ಪುಟಾಣಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ