ಕನ್ನಡದ ಹಿರಿಯ ನಿರ್ದೇಶಕ ಎಸ್. ಮಹೇಂದರ್, ಈಗ ಹೊಸದೊಂದು ಸಸ್ಪೆನ್ಸ್‌ಕಂಕ್ರೈಂ-ಥ್ರಿಲ್ಲರ್ ಕಥೆಯೊಂದನ್ನು ತೆರೆಮೇಲೆ ಹೇಳಲು ಹೊರಟಿದ್ದಾರೆ. ಅದರ ಹೆಸರು “ಪಂಪ’. ಅಂದಹಾಗೆ, “ಪಂಪ’ ಎನ್ನುವ ಹೆಸರು ಕೇಳಿದಾಕ್ಷಣ ಕವಿ, ಸಾಹಿತಿ,ಕನ್ನಡದ ಹಿರಿಮೆಕಣ್ಣು ಮುಂದೆ ಬರುತ್ತದೆ. ಇಂಥ ಹೆಸರನ್ನು ಮಹೇಂದರ್ ಯಾಕೆ ತಮ್ಮ ಚಿತ್ರಕ್ಕಿಟ್ಟರು ಅನ್ನೋದಕ್ಕೂ ಒಂದು ಬಲವಾದಕಾರಣವಿದೆಯಂತೆ.
ಅವರೇ ಹೇಳುವಂತೆ, “ಇದೊಂದು ಅಚ್ಚ ಕನ್ನಡದ ವ್ಯಕ್ತಿಯೊಬ್ಬನ ಕುರಿತಾದ ಸಿನಿಮಾ. ಕನ್ನಡಾಭಿಮಾನವನ್ನೇ ತನ್ನ ವ್ಯಕ್ತಿತ್ವವನ್ನಾಗಿ ಮಾಡಿಕೊಂಡ ಪಂಚಳ್ಳಿ ಪರಶಿವಮೂರ್ತಿ ಎಂಬ ನಮ್ಮಕಥಾನಾಯಕನ ಹೆಸರು “ಪಂಪ’ ಅಂತಲೇ ಜನಪ್ರಿಯವಾಗಿರುತ್ತದೆ. ವೃತ್ತಿಯಲ್ಲಿಕನ್ನಡ ಪ್ರಾಧ್ಯಾಪಕನಾಗಿರುವ,ಕನ್ನಡ ಭಾಷೆ,ನೆಲ-ಜಲದ ಬಗ್ಗೆ ಪ್ರಾಮಾಣಿಕಕಾಳಜಿ ಹೊಂದಿರುವ ಪ್ರೊಫೆಸರ್ “ಪಂಪ’ಕಥೆ, ಕಾದಂಬರಿ,ಕಾವ್ಯಗಳ ಮೂಲಕ ವಿವಿಧ ವಯೋಮಾನದ ಓದುಗರ ಅಭಿಮಾನ ಸಂಪಾದಿಸಿಕೊಂಡಿರುವಾತ. ಅಜಾತಶತ್ರುವಾಗಿರುವ “ಪಂಪ’ನ ಮೇಲೆ ಅದೊಂದು ದಿನ ಅನಾಮಿಕ ವ್ಯಕ್ತಿಯೊಬ್ಬ ಹತ್ಯೆಗೆ ಮುಂದಾಗುತ್ತಾನೆ.
ತೀವ್ರಗಾಯಗೊಂಡ “ಪಂಪ’ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವಂತೆಯೇ, “ಪಂಪ’ ಅಲ್ಲಿಯೂ ನಿಗೂಢವಾಗಿ ಕೊಲೆಯಾಗುತ್ತಾನೆ. ಯಾರನ್ನೂ ನೋಯಿಸದ, ಯಾರನ್ನೂ ದ್ವೇಷಿಸದ, ಯಾರಿಗೂ ತೊಂದರೆಕೊಡದ “ಪಂಪ’ನ ಕೊಲೆಗೆ ಮುಂದಾದವರು ಯಾರು ಅನ್ನೋದೆ ಚಿತ್ರದಕಥೆ’ ಎನ್ನುತ್ತಾರೆ ಎಸ್. ಮಹೇಂದರ್.
“ಪಂಪ’ನ ಕೊಲೆಯ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಜೊತೆಗೆ ಹದಿಹರೆಯದ ಪ್ರೇಮ, ಭಾಷಾ ಹೋರಾಟ, ರಾಜಕಾರಣ, ಅಭಿಮಾನ -ದುರಾಭಿಮಾನ ಹೀಗೆ ಹತ್ತಾರು ವಿಷಯಗಳು ಇದರಲ್ಲಿವೆ. ಇದೊಂದು ಪಕ್ಕಾ ಸಸ್ಪೆನ್ಸ್‌ಕಂಕ್ರೈಂ – ಥ್ರಿಲ್ಲರ್ ಶೈಲಿಯ ಸಿನಿಮಾ. ನಾನು ಇಲ್ಲಿಯವರೆಗೆ ನಿರ್ದೇಶಿಸಿದ್ದ ಸಿನಿಮಾಗಳಿಗೆ ಹೋಲಿಸಿದರೆ, “ಪಂಪ’ ಬೇರಯದ್ದೇ ಥರದ ಸಿನಿಮಾ.ಕನ್ನಡಿಗರಾಗಿ ಹುಟ್ಟಿದ ಪ್ರತಿಯೊಬ್ಬರೂ ನೋಡಲೇ ಬೇಕಾದ, ಒಂದು ಸಂದೇಶವಿರುವಂಥ ಸಿನಿಮಾ ಇದು’ ಎನ್ನುವುದು ನಿರ್ದೇಶಕ ಎಸ್. ಮಹೇಂದರ್ ಅವರ ಮಾತು.
ಇನ್ನು “ಪಂಪ’ ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯ – ಸಂಗೀತ ಸಂಯೋಜಿಸಿದ್ದಾರೆ.ಕಳೆದ ಹಲವು ವರ್ಷಗಳಿಂದ ಟೋಟಲ್‌ಕನ್ನಡ ಎನ್ನುವ ಮಳಿಗೆಯನ್ನು ನಡೆಸುತ್ತ ಬಂದಿರುವ ವಿ. ಲಕ್ಷ್ಮೀಕಾಂತ್ “ಪಂಪ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ಪಂಪ’ ಥಿಯೇಟರ್‌ಗಳು ತೆರೆಯುತ್ತಿದ್ದಂತೆ, ತೆರೆಗೆ ಬರಲಿದೆ.
-ಜಿ.ಎಸ್. ಕಾರ್ತಿಕ ಸುಧನ್